September 6, 2026
Mumbai News Kannada
ತುಳುನಾಡು

ಬಜ್ಪೆಯಲ್ಲಿ ಮುಂಬೈಯ ಪುರುಷೋತ್ತಮ ಬೆಲ್ಚಡ ದಂಪತಿಗಳಿಂದ ಹರಕೆಯ ಯಕ್ಷಗಾನ ಸೇವೆ: ಕಲಾವಿದರುಗಳಾದ ಅರವಿಂದ ಬೋಳಾರ್ ಹಾಗೂ ಮನ್ವಿತ್ ನಿಡ್ಡೋಡಿ ಅವರಿಗೆ ಸನ್ಮಾನ





ಮುಂಬಯಿಯ ಘಾಟ್ಕೋಪರ್ ಆನಂದ ನಗರದ ನಿವಾಸಿಗಳಾದ ಪುರುಷೋತ್ತಮ ಮತ್ತು ಸುನಿತಾ ಸಾಲ್ಯಾನ್ ದಂಪತಿಗಳ ಹರಕೆಯ ಸೇವೆಯಾಗಿ ಏಪ್ರಿಲ್ 1, 2026 ರಂದು ಬಜ್ಪೆಯ ಮುರ ಸೌಹಾರ್ದ ನಗರದ ಅಂಗನವಾಡಿ ಭಂಡಾರ ಮನೆ ಬಳಿ ‘ಶ್ರೀ ಭಗವತಿ ಕ್ಷೇತ್ರ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟವು ಅತ್ಯಂತ ಭಕ್ತಿ-ಸಂಭ್ರಮದಿಂದ ಜರುಗಿತು.


ಈ ಯಕ್ಷಗಾನದಲ್ಲಿ ತುಳುನಾಡ ಮಾಣಿಕ್ಯ, ಜನಜಾಗೃತಿ ನಟ ಅರವಿಂದ ಬೋಳಾರ್ ಅವರು ಅತಿಥಿ ಕಲಾವಿದರಾಗಿ ಆಗಮಿಸಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಕಾರ್ಯಕ್ರಮದ ಮಧ್ಯಂತರದಲ್ಲಿ ಕಲಾ ಸೇವೆಯನ್ನು ಗುರುತಿಸಿ ಅರವಿಂದ ಬೋಳಾರ್, ಪಾವಂಜೆ ಮೇಳದ ಪ್ರಸಿದ್ಧ ಕಲಾವಿದ ಮನ್ವಿತ್ ನಿಡ್ಡೋಡಿ ಹಾಗೂ ಯಕ್ಷಗಾನ ಸೇವಾಕರ್ತ ಯೋಗೀಶ್ ಕರ್ಕೇರ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಸೇವಾಕರ್ತರಾದ ಸುನೀತಾ ಬೆಲ್ಚಡ, ಪುರುಷೋತ್ತಮ ಬೆಲ್ಚಡ, ಜಿಶಾಂತ್, ಸುಪ್ರಿತಾ, ಜಿತೇಶ್, ಜಿಯ ಹಾಗೂ ದಾಮೋದರ್ ಬೆಲ್ಚಡ ಉಪಸ್ಥಿತರಿದ್ದರು. ಇಡೀ ಕಾರ್ಯಕ್ರಮವನ್ನು ಕಮಲಾಕ್ಷ ಬೆಲ್ಚಡ ಅವರು ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರು.

ಜಯ ಸಿ. ಪೂಜಾರಿ ಕೆಳಾರ್ಕಳ ಬೆಟ್ಟು



Related posts

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ 50ನೇ ವರ್ಷದ ಸಂಭ್ರಮಾಚರಣೆ

Mumbai News Desk

ಸಂಸ್ಕೃತಿ, ಬಾಂಧವ್ಯ ಮತ್ತು ಸಾಮರಸ್ಯದ ಸಂಗಮ: ಹೆಜಮಾಡಿಯಲ್ಲಿ ಕಳೆಗಟ್ಟಿದ ‘ಆಟಿಡೊಂಜಿ ದಿನ’ ಉತ್ಸವ

Mumbai News Desk

ಶ್ರೀಶ್ರೀಶ್ರೀ ವಿಶ್ವವಲ್ಲಭ ತೀರ್ಥ ರಿಂದ ಭೂತರಾಜರ ಸಾನ್ನಿಧ್ಯ ಸಂಕೋಚವನ್ನು ಮಾಡಿ ಜೀರ್ಣೋದ್ಧಾರಕ್ಕೆ ಚಾಲನೆ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಮೂಲ್ಕಿ : ಆಗಸ್ಟ್ 17ರಂದು ಮೂಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆ

Mumbai News Desk

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*

Mumbai News Desk

ಸಸಿಹಿತ್ಲು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಾಧಕರಾಗಿ – ವೇದಪ್ರಕಾಶ್ ಎಂ. ಶ್ರೀಯಾನ್

Mumbai News Desk