September 6, 2026
Mumbai News Kannada
ತುಳುನಾಡು

ಸಣ್ಣ ವಯಸ್ಸಿನಲ್ಲೇ ದೈವ ನರ್ತನದ ಮೂಲಕ ಕರಾವಳಿಯ ಗಮನ ಸೆಳೆದ ಅಜೆಕಾರಿನ ಬಾಲಕ ಸಮರ್ಥ್





ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರಕಲ ಕ್ಷೇತ್ರದಲ್ಲಿ ನಡೆದ ತನ್ನಿಮಾನಿಗ ನೇಮೋತ್ಸವದಲ್ಲಿ 12 ವರ್ಷದ ಬಾಲಕನೊಬ್ಬ ದೈವ ನರ್ತನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಶಿರ್ಲಾಲು ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾದ ಸಮರ್ಥ್ ಎಂಬ ಈ ಬಾಲಕ, ಅತ್ಯಂತ ಸಣ್ಣ ವಯಸ್ಸಿನಲ್ಲೇ ದೈವದ ಗಗ್ಗರ ಕಟ್ಟಿ, ಸಂಪ್ರದಾಯಬದ್ಧವಾಗಿ ನೇಮೋತ್ಸವ ನಡೆಸಿಕೊಟ್ಟಿದ್ದಾನೆ. ಈತನ ದೈವ ನರ್ತನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತುಳುನಾಡಿನ ದೈವಾರಾಧನೆಯ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಿದೆ.
ಸಮರ್ಥ್ ತನ್ನ ಅಜ್ಜ ಮತ್ತು ತಂದೆ ಹರೀಶ್ ಅವರ ಮಾರ್ಗದರ್ಶನದಲ್ಲಿ ಈ ಕಲೆಯನ್ನು ಮೈಗೂಡಿಸಿಕೊಂಡಿದ್ದು, ವಂಶಪಾರಂಪರ್ಯವಾಗಿ ಬಂದಿರುವ ಈ ದೈವ ಸೇವೆಯನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ತನ್ನಿಮಾನಿಗ ದೈವದ ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು ಮತ್ತು ನಸುಕಿನ ವೇಳೆಯಲ್ಲಿ ಈ ಸೇವೆ ನಡೆಯಬೇಕು ಎಂಬ ಕಟ್ಟುನಿಟ್ಟಿನ ನಿಯಮಗಳಿದ್ದು, ಇವೆಲ್ಲವನ್ನೂ ಪಾಲಿಸಿ ಈ ಬಾಲಕ ಯಶಸ್ವಿಯಾಗಿ ದೈವ ನರ್ತನ ಮಾಡಿದ್ದಾನೆ. ಈ ಕೋಲದ ಸಮಯದಲ್ಲಿ ದೈವಕ್ಕೆ ಮದುವೆ ಮಾಡಿಸುವ ಅಪರೂಪದ ಸಂಪ್ರದಾಯವೂ ನಡೆಯುತ್ತದೆ. ಬಾಲಕನ ಈ ಭಕ್ತಿ ಮತ್ತು ಶ್ರದ್ಧೆಯನ್ನು ಕಂಡು ಸ್ಥಳೀಯರು ಹಾಗೂ ದೈವಾರಾಧಕರು ವ್ಯಾಪಕವಾಗಿ ಪ್ರಶಂಸಿಸುತ್ತಿದ್ದು, ಇದು ತುಳುನಾಡಿನ ಹೆಮ್ಮೆ ಎಂದು ಬಣ್ಣಿಸಿದ್ದಾರೆ.



Related posts

ಕಾಪು ಮೂರನೇ ಮಾರಿಯಮ್ಮ ದೇವಸ್ಥಾನ ರಜತ ಗದ್ದುಗೆ ವಿಜ್ಞಾಪನ ಪತ್ರ ಬಿಡುಗಡೆ.

Mumbai News Desk

ಮುಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ರಾಜ್ಯ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳ ಮನೆಗೆ ಭೇಟಿ: ಗೌರವ ಸಮರ್ಪಣೆ

Mumbai News Desk

ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ವಿಕ್ಕಿ ಮಡುಂಬು : ಉಡುಪಿ ಬೊಬ್ಬರ್ಯ ದೈವಸ್ಥಾನದಲ್ಲಿ ಸನ್ಮಾನ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ 48ನೇ ವಾರದ ಭಜನಾ ಸಂಕೀರ್ತನೆ, ಮಂಗಳೋತ್ಸವ

Mumbai News Desk

ಪೊಲಿಪು ಸರಕಾರಿ ಪ್ರಾಥಮಿಕ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭೋತ್ಸವ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

Mumbai News Desk

ಕಲ್ಯಾಣಪುರ : ಸಂತೆಕಟ್ಟೆ ಬಿಲ್ಲವರ ಸೇವಾಸಂಘ (ರಿ ), ನಯಂಪಳ್ಳಿ – ಸಂತೆಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆ

Mumbai News Desk