July 22, 2026
Mumbai News Kannada
ಮುಂಬಯಿ

ಧರ್ಮಪಾಲ ದೇವಾಡಿಗರಿಗೆ  ದೇವಾಡಿಗ ಸಂಘದ ಗೌರವ. ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಧರ್ಮಪಾಲರ ಕೊಡುಗೆ ಅಪಾರ: ರವಿ ದೇವಾಡಿಗ







ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ದೇವಾಡಿಗ ಸಂಘ ಮುಂಬಯಿ ಅವರ ಜಂಟಿ ಆಯೋಜನೆಯಲ್ಲಿ ಲೇಖಕಿ ಸುರೇಖಾ ಹೇಮನಾಥ ದೇವಾಡಿಗ ಅವರ ದೇವಾಡಿಗ ಸಂಘ ಮುಂಬೈಯ ಮಾಜಿ ಅಧ್ಯಕ್ಷ. ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗರ  ‘ಧೀಮಂತ ಧರ್ಮಪಾಲ’ ಗೌರವ ಗ್ರಂಥ ಲೋಕರ್ಪಣೆಯು   ಸಾಂತಾಕ್ರೂಜ್ ಪೂರ್ವದಲ್ಲಿ  ಕಲಿನದ ಮುಂಬೈ ವಿಶ್ವವಿದ್ಯಾನಿಲಯದ
 ಕ್ಯಾಂಪಸ್‌ನ ವಿದ್ಯಾನಗರಿಯ ಕವಿ ಕುಸುಮಾಗ್ರಜ್ ಮರಾಠಿಭಾಷಾ ಭವನದ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಾ। ಎಂ. ವೀರಪ್ಪ ಮೊಯಿಲಿ ಬಿಡುಗಡೆಗೊಳಿಸಿದರು,

   ಮುಂಬೈ ದೇವಾಡಿಗ ಸಂಘದ ಪರವಾಗಿ ಸಂಘದ ಅಧ್ಯಕ್ಷರಾದ ರವಿ ದೇವಾಡಿಗ ಮತ್ತು ಪದಾಧಿಕಾರಿಗಳು   ಧರ್ಮಪಾಲ್ ಯು. ದೇವಾಡಿಗ, ಮತ್ತು ಸುಜಾತಾ ಧರ್ಮಪಾಲ್ ದೇವಾಡಿಗ ದಂಪತಿಯನ್ನು ಅಭಿನಂದಿಸಿದರು. ಸಂಘದ ಮುಖವಾಣಿ  ದೇವಾಡಿಗ ಜ್ಯೋತಿ ಬಿಡುಗಡೆ ಗೊಳಿಸಿದ ರವಿ ದೇವಾಡಿಗ ಅವರು ಮಾತನಾಡಿ ಈ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಂಘದ ಪದಾಧಿಕಾರಿಗಳು ವಿವಿಧ ಸ್ಥಳೀಯ ಸಮಿತಿಯ ಸದಸ್ಯರು ಮುಂಬೈ ವಿಶ್ವವಿದ್ಯಾನಿಲದ ಕನ್ನಡ ವಿಭಾಗ ವಿಶೇಷವಾದ ಸಹಕಾರವನ್ನು ನೀಡಿದೆ. ಧರ್ಮಪಾಲ ದೇವಾಡಿಗರು ಸಮಾಜದ ಎಲ್ಲಾ ಸೇವಾ ಕಾರ್ಯಗಳಿಗೆ ನಿರಂತರ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡುತ್ತಾ. ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಬಹುಪಾಲು ಕೊಡುಗೆಯನ್ನು ನೀಡಿದ್ದಾರೆ. ಅವರು ಗ್ರಂಥ ಮುಂದೆ ಸಮಾಜದ ಜನರಿಗೆ ಆದರ್ಶವಾಗುವಂತದ್ದು. ದೇಶದ ನಾನಾ ಭಾಗದ ದೇವಾಡಿಗ ಸಂಘದ ಬಂಧುಗಳು ಆಗಮಿಸಿ ಈ ಕಾರ್ಯಕ್ರಮಕ್ಕೆ ಶೋಭೆ ತಂದಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಎಂದು ನುಡಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಜಿ. ಎನ್. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ  ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ,ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ,ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ ಕೆ ಡಿ. ಶೆಟ್ಟಿ ,ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷ ಎಲ್.ವಿ.ಅಮೀನ್, , ದೇವಾಡಿಗಸಂಘಮುಂಬಯಿ ಅಧ್ಯಕ್ಷ ರವಿ ಎಸ್. ದೇವಾಡಿಗ, , ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಸಿಎ ಶ್ರೀನಿವಾಸ್ ಪಿ. ಸಾಫಲ್ಯ, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಳಡ, ವಿಶ್ವ ದೇವಾಡಿಗ ಮಹಾಮಂಡಳ ಇದರಗೌರವಪ್ರಧಾನಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ,ಲೇಖಕಿ ಸುರೇಖಾ ಹೇಮನಾಥ ದೇವಾಡಿಗ,ಪತ್ರಕರ್ತ ಕಳ್ಳಿಗೆ ದಯಾ ಸಾಗರ ಚೌಟ ಕೃತಿಮತ್ತಿತರರು ,ಉಪಸ್ಥಿತರಿದ್ದರು.

ಸಂಘದ ಸನ್ಮಾನ ಸಂದರ್ಭದಲ್ಲಿ ಧರ್ಮಪಾಲ್ ದೇವಾಡಿಗರು  ಮಗಳು ಡಾ| ಪೂನಂ ದೇವಾಡಿಗ, ಅಳಿಯ ಡಾ| ರಾಹುಲ್ ಶೇರಿಗಾರ್, ಮಗ ಪವನ್ ಡಿ. ದೇವಾಡಿಗ, ಸೊಸೆ ನಿಮಿ ಪವನ್, ಮಾಸ್ಟರ್ ಅದ್ವಿತ್, ಕುಮಾರಿ ಅರಣ್ಯಾ, ಚಿತ್ರ ಶೇರಿಗಾರ್, ದೇವಾಡಿಗ, ಸಂಘ ಮುಂಬಯಿ ಮಾಜಿ ಅಧ್ಯಕ್ಷ ವಾಸು ದೇವಾಡಿಗ, ಉಪಾಧ್ಯಕ್ಷ ವಿಶ್ವನಾಥ್ ದೇವಾಡಿಗ, ಗೌ। ಪ್ರ ಕಾರ್ಯದರ್ಶಿ ಪದ್ಮನಾಭ ದೇವಾಡಿಗ,  ಕೋಶಾಧಿಕಾರಿ ಜಯ ದೇವಾಡಿಗ ಮತ್ತು ಪದಾಧಿಕಾರಿಗಳು, ಸದಸ್ಯರು,. ಉಪಸ್ಥರಿದ್ದರು.

ಕನ್ನಡ ವಿಭಾಗದ ಸಹಾಯ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸ್ ಪಿ.ಸಾಫಲ್ಯ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ಹಾಡಿದರು.  ಜಯಂತಿ ಎಂ.ದೇವಾಡಿಗ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಪರಿಚಯಿಸಿದರು. ಅಂಬಿಕಾ ದೇವಾಡಿಗ ಸನ್ಮಾನಪತ್ರ ವಾಚಿಸಿದರು.

ಸಾಂಸ್ಕೃತಿಕ ಕಾಠ್ಯಕ್ರಮವಾಗಿ  ದೇವಾಡಿಗೆ ಸಮಾಜದ ಪ್ರತಿಭಾನ್ವಿತ ಕಲಾವಿದೆ ದೀಕ್ಷಾ ದೇವಾಡಿಗ ತಂಡದವರಿಂದ  ಯಕ್ಷಗಾನ ಶೈಲಿಯ ನೃತ್ಯ ಮತ್ತು ನವೋದಯ ಕನ್ನಡ ಸೇವಾ ಸಂಘ ಥಾಣೆ  ಮಹಿಳಾ ಸದಸ್ಯರಿಂದ ಸಮೂಹ ಗಾಯನ ಕಾರ್ಯಕ್ರಮಗಳು ನಡೆಯಿತು.



Related posts

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  ಅಯ್ಯಪ್ಪ ಸ್ವಾಮಿ ಗೆ ಅಪ್ಪ ಸೇವೆ.

Mumbai News Desk

ಕಾಲಘೋಡ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ 53ನೇ ವಾರ್ಷಿಕ ಮಹಾಪೂಜೆ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ ಅಭಿಯಾನ: 

Mumbai News Desk

ನೆರೂಲ್ ಬಾಲಾಜಿ ಮಂದಿರ  ಬ್ರಹ್ಮರಥೋತ್ಸವ  ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ವಸಾಯಿ ಕರ್ನಾಟಕ ಸಂಘದ ಗಣರಾಜ್ಯೋತ್ಸವ ಆಚರಣೆ, ಸಂಘದ ಚಟುವಟಿಕೆಯಲ್ಲಿ ಸದಸ್ಯರು ಸಕ್ರಿಯರಾಗಿ : ದೇವೇಂದ್ರ ಬಿ. ಬುನ್ನನ್

Mumbai News Desk