
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ದೈವಸ್ಥಾನದಲ್ಲಿ ಕಳೆದ ಭಾನುವಾರ ರಾತ್ರಿ ಜಾರಂದಾಯ, ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು. ಶನಿವಾರ ಮಧ್ಯಾಹ್ನ ಜಾರಂದಾಯ ಮತ್ತು ಧೂಮಾವತಿ ದೈವದ ದರ್ಶನದೊಂದಿಗೆ ಭಂಡಾರ ಇಳಿಸಿ ಧ್ವಜಾರೋಹಣ ನೆರವೇರಿಸುವುದರ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.


ಭಾನುವಾರ ಬೆಳಿಗ್ಗೆ ದೈವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗಮಂಡಲ ಸೇವೆ ನಡೆದರೆ, ಮಧ್ಯಾಹ್ನ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿ ದೈವಗಳ ನೇಮೋತ್ಸವ ಸಡಗರದಿಂದ ನಡೆಯಿತು. ಈ ಪುಣ್ಯ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ರಾಮಚಂದ್ರ ನಾಯಕ್, ಕೊಲ್ಲಾಡಿ ಗುತ್ತು ಕಿರಣ್ ಶೆಟ್ಟಿ, ಮಾನಂಪಾಡಿ ದಿನೇಶ್ ಹೆಗ್ಡೆ, ಮಯೂರಿ ಫೌಂಡೇಶನ್ನ ಜಯ ಶೆಟ್ಟಿ, ಉದ್ಯಮಿ ಶರತ್ ಸಾಲ್ಯಾನ್ ಬೆಂಗಳೂರು, ಒಡೆಯರ ಬೆಟ್ಟು ಗುರಿಕಾರ ಸುರೇಶ್, ಚಿತ್ರಾಪು ಕೇಶವಾನಂದ ಗುರೂಜಿ, ಊರ ಗುರಿಕಾರ ಡಾ| ಹರಿಶ್ಚಂದ್ರ ಪಿ. ಸಾಲ್ಯಾನ್ ಉಪಸ್ಥಿತರಿದ್ದರು.ಜಾರಂದಾಯ ಧೂಮಾವತಿ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸುವರ್ಣ, ಯೂತ್ ಕ್ಲಬ್ ಅಧ್ಯಕ್ಷ ಚರಣ್ ಬಂಗೇರ, ಕಾರ್ತಿಕ್ ಕೋಳಚಿಕಂಬಳ, ರಕ್ಷಿತ್ ಪೂಜಾರಿ ಕೋಳಚಿಕಂಬಳ, ಜೀವನ್ ಕೋಟ್ಯಾನ್, ರಮಾನಾಥ ಸುವರ್ಣ, ಮಹಿಳಾ ಮಂಡಲದ ಅಧ್ಯಕ್ಷೆ ಲತಾ ಶೇಖರ್, ಹಳೆಯಂಗಡಿ ಬಂಕಿ ನಾಯಕರು, ಮಹಾಬಲ ಸುವರ್ಣ, ಪ್ರಕಾಶ್ ಪೂಜಾರಿ, ಸಾನದ ಮನೆ ಕೃಷ್ಣ ಕೋಟ್ಯಾನ್, ದಯಾನಂದ ಪೂಜಾರಿ ಮತ್ತು ನಾಗೇಶ್ ಬಪ್ಪನಾಡು, ಸುನಿಲ್ ಆಳ್ವ, ಕೃಷ್ಣಪ್ಪ ಪೂಜಾರಿ ಮಾನಂಪಾಡಿ, ಪ್ರಾಣೇಶ್ ಪೂಜಾರಿ ಕೊಳಚಿಕಂಬಳ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ಮಾಯಂದಾಲ್ ದೈವದ ನೇಮೋತ್ಸವದೊಂದಿಗೆ ಸಮಸ್ತ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಂಡವು.




