July 23, 2026
Mumbai News Kannada
ಮುಂಬಯಿ

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ : ಭಕ್ತಿ ಸಂಭ್ರಮದ   ಪಲ್ಲಕ್ಕಿ ಉತ್ಸವ, .







.

.

ಚಿತ್ರ ವರದಿ: ದಿನೇಶ್ ಕುಲಾಲ್ 

ಮುಂಬಯಿ: ಮಲಾಡ್ ಪೂರ್ವದ   ಕುರಾರ್ ವಿಲೇಜ್ ನ ಕೇತುವಾಡಿಯ ಜಾನ್ ಕಂಪೌಂಡ್‌ನಲ್ಲಿ ಭವ್ಯ ಸುಂದರ ಶ್ರೀದೇವಿ ಮಹಮ್ಮಾಯಿ ದೇವಾಸ್ಥಾನದಲ್ಲಿ
ದೇವಸ್ಥಾದ ಧರ್ಮದರ್ಶಿ ರವಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ   ಪಲ್ಲಕ್ಕಿ ಉತ್ಸವ,ಮಹಾಪೂಜೆ ಅನ್ನ ಸಂತರ್ಪಣೆ ಸಾವಿರಾರು ಭಕ್ತರ ಕೂಡಿಕೆಯಲ್ಲಿ ಭಕ್ತಿ ಸಂಭ್ರಮದೊಂದಿಗೆ ನಡೆಯಿತು.

      ಎ.10ರ ಶುಕ್ರವಾರ ಬೆಳಿಗ್ಗೆ  ಗಣಹೋಮ, ನವಕ ಪ್ರಧಾನ ಹೋಮ ,ಪಂಚಾಮೃತ ಅಭಿಷೇಕ, ನವಕ ಕಳಸ ಅಭಿಷೇಕ ,108 ಸೀಯಾಳ ಅಭಿಷೇಕ, ದೇವಿ ದರ್ಶನ,  ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ  ಆ ಬಳಿಕ ತೀರ್ಥ ಪ್ರಸಾದ ವಿತರಣೆ ನಡೆಯಿತು.

ಸಂಜೆ  ಕುಂಕುಮಾರ್ಚನೆ ಸೇವೆ ,  ಪಲ್ಲಕ್ಕಿ ಮೆರವಣಿ, ಭಜನಾ ಸಂಕೀರ್ತನೆ, ಯಕ್ಷಗಾನ ಜರಗಿತು.ದಿನೇಶ್ ಕೋಟ್ಯಾನ್ ಜೇರಿಮೇರಿ ಬಳಗದವರ ಸೇಕ್ಸೋಫೋನ್
ಮಾದನದೊಂದಿಗೆ ಕುರಾರ್ ಗ್ರಾಮದ ತಾನಾಜಿ ನಗರ, ಆದರ್ಶ ನಗರದ ಮೂಲಕ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಾಗಿಬಂತು.
ಎ.11ರ ಶನಿವಾರ ಮಧ್ಯಾಹ್ನ ಚಪ್ಪರ ಮುಹೂರ್ತ. ದೈವುಗಳ ಬಂಡಾರ ಇಳಿಸುವಿಕೆ, ಸಂಜೆ  ಸತ್ಯ ದೇವತೆ, ಕಲ್ಕುಡ, ಕಲ್ಲುರ್ಟಿ, ಗುಳಿಗ ದೇವಗಳಿಗೆ ನೇಮೋತ್ಸವ, ರಾತ್ರಿ ಅನ್ನ ಸಂತರ್ಪಣೆ ನಡೆಯಿತು.
 ಈ  ಪುಣ್ಯ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ  ಭಕ್ತರು ಪಾಲ್ಗೊಂಡುದರು.

ಪಾಲ್ಗೊಂಡಿದ್ದ ಭಕ್ತಾದಿಗಳಿಗೆ, ದಾನಿಗಳಿಗೆ
ಶ್ರೀದೇವಿ  ಮಹಮ್ಮಾಯಿ ಹಾಗೂ ಧರ್ಮ ದೈವಗಳ  ಗಂಧ ಪ್ರಸಾದವನ್ನು ದೇವಸ್ಥಾನದ ಧರ್ಮದರ್ಶಿ ರವಿ ಸ್ವಾಮೀಜಿ ನೀಡಿದರು.

ಶ್ರೀ ದೇವಿ ಮಹಮ್ಮಾಯಿ ಸೇವಾ ಸಮಿತಿಯ ಗೌ.ಅಧ್ಯಕ್ಷ ಸಂತೋಷ್ ಕೆ. ಪೂಜಾರಿ, ಅಧ್ಯಕ್ಷ ಲಾಲ್ ಮನ್ ಯಾದವ್, ಕಾರ್ಯದರ್ಶಿ ಉದಯ ಬಿ ಸಾಲ್ಯಾನ್, ಕೋಶಾಧಿಕಾರಿ ಹರಿಶ್ಚಂದ್ರ ಆಚಾರ್ಯ, ಸಲಹೆಗಾರರಾದ ಸುರೇಂದ್ರ ಶೆಟ್ಟಿ ಹೊಸ್ಮರು , ಸುಧೀರ್ ಪುತ್ರನ್, ಸದಸ್ಯರಾದ ರಾಘು ಪೂಜಾರಿ,
ಮಾರ್ನಾಡು ಉಮೇಶ್ ಅಂಚನ್, ಶೇಖರ್ ಡಿ. ಅಮೀನ್ ,   ರಾಜು ಪೂಜಾರಿ, ಸನತ್ ಪೂಜಾರಿ ಕೆಲ್ಲಪುತ್ತಿಗೆ, ಪ್ರಕಾಶ್ ಸಾಲಿಯಾನ್ (ಅನ್ನು) ಚಂದ್ರಕಾಂತ್ ಸಾಲಿಯಾನ್, ಅಕ್ಷಯ ಪೂಜಾರಿ, ಅಮಿತ್ ಪೂಜಾರಿ, ಪ್ರಥಮ್ ಪೂಜಾರಿ, ನವೀನ್ ಸಾಲಿಯಾನ್, ಆದಿತ್ಯ ಅಂಚನ್, ಕೌಶಲ್ ಪೂಜಾರಿ, ಮನೋಜ್  ಓಜಾ, ಮತ್ತು ಮಹಿಳಾ ವಿಭಾಗದ ಸುನಂದ ಅಮೀನ್, ವಿಜಯಲಕ್ಷ್ಮಿ ಸಾಲಿಯಾನ್, ಆಶಾ ಆರ್ ಪೂಜಾರಿ, ಶೋಭಾ  ಪೂಜಾರಿ, ಆಶಾ ಅಂಚನ್, ಶಶಿ ಪೂಜಾರಿ, ಕುಸುಮ ಬಂಜನ್, ಸುಮತಿ ಆಚಾರ್ಯ, ವೇದಾವತಿ ಸಾಲಿಯನ್, ರತ್ನಾ ಪೂಜಾರಿ, ರೀನಾ ಯಾದವ್, ಯಶೋಧ ಸಾಲಿಯಾನ್, ಸುನೀತ ಕುಂದರ್, ಯುವ ಮಂಡಲದ ಸದಸ್ಯರು ಸಿ ಎ ಪ್ರೀತಿ ಪೂಜಾರಿ, ಡಾಕ್ಟರ್ ಪ್ರಿಯಲ್ ಯಾದವ್, ಉಷಾ ಕೋಟ್ಯಾನ್, ಅಮೃತ ಪೂಜಾರಿ, ದೀಕ್ಷಿತ ಸಾಲಿಯಾನ್, ಅಥರ್ವ ಅಂಚನ್, ದೀಕ್ಷಾ ಪೂಜಾರಿ, ಜ್ಯೋತಿ ಪೂಜಾರಿ, ಹರ್ಷ ಕುಂದರ್, ದಿಶಾ ಕರ್ಕೇರ, ಋತ್ವಿ ಕುಂದರ್, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಸಹಕಾರ ನೀಡಿದರು.



Related posts

ಚಿಣ್ಣರ ಬಿಂಬ ಮುಂಬೈ  ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆ ಉದ್ಘಾಟನೆ.

Mumbai News Desk

ವೀರಕೇಸರಿ ಮೀರಾಭಾಯಂದರ್ ವತಿಯಿಂದ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ.

Mumbai News Desk

ಮುಂಬಯಿಯ ಚಾರ್ಕೋಪ್ ಕನ್ನಡಿಗರ ಬಳಗದಲ್ಲಿ ರಂಗೋಲಿ ಸ್ಪರ್ಧೆ

Mumbai News Desk

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ: ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನ್ಯೂ ಪನ್ವೇಲ್‌ನ ಮಾಜಿ ಕಾರ್ಪೊರೇಟರ್ ಸಂತೋಷ್ ಜಿ ಶೆಟ್ಟಿ

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ಬೋರಿವಲಿ ಪಶ್ಚಿಮದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk

ಶ್ರೀ ಮಹಾ ವಿಷ್ಣು ಮoದಿರದ ಬಾಲಕಿಯರ ಭಜನಾ ತoಡಕ್ಕೆ ಪ್ರಥಮ ಬಹುಮಾನ.

Mumbai News Desk