30 C
Mumbai
September 27, 2026
Mumbai News Kannada
ಪ್ರಕಟಣೆ

ಉಳ್ಳಾಲದಲ್ಲಿ ಅದ್ದೂರಿ ಗಾಣಿಗ ಭವನ ಲೋಕಾರ್ಪಣೆ: ಮೇ 10ರಂದು ಸಮುದಾಯದ ಐತಿಹಾಸಿಕ ಕ್ಷಣ



ಉಳ್ಳಾಲದ ಗಾಣಿಗರ ಸಮುದಾಯದ ಬಹುದಿನಗಳ ಕನಸಾದ ಸುಸಜ್ಜಿತ ‘ಗಾಣಿಗ ಭವನ’ವು ಇದೀಗ ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಉಳ್ಳಾಲದ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಬಳಿ ಮೇ 10ರಂದು ಅದ್ಧೂರಿಯಾಗಿ ಜರುಗಲಿದೆ. ಗಾಣಿಗರ ಸಮುದಾಯದ ಸೇವಾ ಚಟುವಟಿಕೆಗಳಿಗಾಗಿ 16.5 ಸೆಂಟ್ಸ್ ಜಾಗದಲ್ಲಿ ಗಾಣಿಗರ ಸಮುದಾಯ ಸೇವಾ ಟ್ರಸ್ಟ್ ಮೂಲಕ ನಿರ್ಮಾಣಗೊಂಡಿರುವ ಈ ಭವನವನ್ನು ಮೇ 10ರ ಆದಿತ್ಯವಾರ ಬೆಳಿಗ್ಗೆ 10:42ಕ್ಕೆ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮೂಲ್ಯಣ್ಣರವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಂಗವಾಗಿ ಮೇ 9ರ ಶನಿವಾರ ಸಂಜೆ 6:30ಕ್ಕೆ ವಾಸ್ತು ಹೋಮ ಹಾಗೂ ಮೇ 10ರ ಬೆಳಿಗ್ಗೆ 8:00 ಗಂಟೆಗೆ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ.

ವೇದಿಕೆ ಉದ್ಘಾಟನೆಯನ್ನು ಶ್ರೀ ಶ್ರೀನಿವಾಸ ಸಪಲ್ಯ ಮತ್ತು ಶ್ರೀಮತಿ ರತಿಕಾ ಶ್ರೀನಿವಾಸ ಸಪಲ್ಯ ಮುಂಬೈ ನೆರವೇರಿಸಲಿದ್ದು, ಗಾಣಿಗ ಸಮುದಾಯ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸುನಿಲ್ ಕುಮಾರ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್, ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ದ.ಕ. ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಶ್ರೀ ವಿಶ್ವಾಸ್ ಕುಮಾರ್ ದಾಸ್, ಉದ್ಯಮಿ ಶ್ರೀ ವಿಶ್ವನಾಥ ಶೆಟ್ಟಿ ಮುಂಬೈ, ಮುಂಬೈ ಗಿರಿಜಾ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಶ್ರೀ ವಸಂತ ಸಪಲ್ಯ ಕುಂಜಾರು , ಉದ್ಯಮಿಗಳಾದ ಶ್ರೀ ಮನೋಜ್ ಬಂಗೇರ ಮುಂಬೈ, ಶ್ರೀ ಸತೀಶ್ ಕುಂದರ್ ರಾಜಸ್ಥಾನ್, ಶ್ರೀ ಜನಾರ್ಧನ ಅರ್ಕುಳ ಹಾಗೂ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಶ್ರೀ ಯು.ಎಸ್. ಪ್ರಕಾಶ್, ಜೆ.ಎ.ವೈ ಅಸೋಸಿಯೇಟ್ಸ್ ಮುಂಬೈನ ಶ್ರೀ ಧೀರಜ್ ವಿ. ರಮಣ್ ಮುಂಬೈ, ಅಂತ ಗುರಿಕಾರ ಶ್ರೀ ರಾಜೇಶ್ ನಾಯ್ಕ, ಶ್ರೀ ವೈದ್ಯನಾಥ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಪ್ರವೀಣ್ ಕುಮಾರ್, ಉಳ್ಳಾಲ ತೀಯಾ ಸಮಾಜದ ಅಧ್ಯಕ್ಷ ಶ್ರೀ ಚಿದಾನಂದ ಗುರಿಕಾರರು, ಉಳ್ಳಾಲ ನಗರ ಸಭೆಯ ಪೌರಾಯುಕ್ತ ಶ್ರೀ ಸಂತೋಷ್ ಎಸ್.ಡಿ., ಉಡುಪಿ ಜಿಲ್ಲಾ ಸೋಮ ಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಶ್ರೀ ಉದಯ ಕುಮಾರ್, ಬಂಟರ ಸಂಘ ಉಳ್ಳಾಲದ ಅಧ್ಯಕ್ಷ ಶ್ರೀ ರವೀಂದ್ರ ರೈ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಉಲ್ಲಾಳದ ಅಧ್ಯಕ್ಷ ಶ್ರೀ ಕೆ.ಟಿ. ಸುವರ್ಣ, ಮೊಗವೀರ ಸಂಘ ಉಲ್ಲಾಳದ ಅಧ್ಯಕ್ಷ ಶ್ರೀ ಯಶವಂತ ಅಮೀನ್, ಉಳ್ಳಾಲದ ಶ್ರೀ ಸಂತೋಷ್ ಕುಮಾರ್ ಗಾಂಧಿನಗರ, ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ ಜನಾರ್ಧನ ಗಟ್ಟಿ ಕನ್ನಿಮನೆ ಮತ್ತು ಕುಲಾಲ ಸಂಘ ಸೋಮೇಶ್ವರದ ಅಧ್ಯಕ್ಷ ಶ್ರೀ ಅನಿಲ್ ದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕ ಸಹಭೋಜನ ಏರ್ಪಡಿಸಲಾಗಿದ್ದು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗಾಣಿಗರ ಸಮುದಾಯ ಸೇವಾ ಟ್ರಸ್ಟ್, ಗಾಣಿಗರ ಸಂಘ ಉಳ್ಳಾಲ, ಗಾಣಿಗರ ಸಂಘ ತೊಕ್ಕೊಟ್ಟು ಗಾಣಿಗರ ಸಂಘ , ಸೋಮೇಶ್ವರ, ಮತ್ತು ಗಾಣಿಗರ ಸಂಘ ಅಸೈಗೋಳಿ, ಇದರ ಪದಾಧಿಕಾರಿಗಳು ಆಮಂತ್ರಿಸಿದ್ದಾರೆ.



Related posts

ಶ್ರೀ ಜೈ ಭವಾನಿ ಶನೀಶ್ವರ ಮಂದಿರ, ಡೊಂಬಿವಲಿ – ಮನವಿ ಪತ್ರ,

Mumbai News Desk

ಪನ್ವೇಲ್  ನಗರಸೇವಕ  ಸಂತೋಷ್ ಜಿ. ಶೆಟ್ಟಿಯವರ ಮುಂದಾಳುತ್ವದಲ್ಲಿ, ಎ. 7: ಥಾಣೆ ಯಲ್ಲಿ  ತುಳು – ಕನ್ನಡಿಗರ ಮಹಾ ಸಮಾವೇಶ

Mumbai News Desk

ಜಗಜ್ಯೋತಿ ಕಲಾವೃಂದದ ಸಾಹಿತ್ಯ ಪ್ರಶಸ್ತಿ ಪ್ರಕಟ: ಪ್ರಜ್ಞಾ ಮತ್ತಿಹಳ್ಳಿ, ತೇಜಾವತಿ ಎಚ್.ಡಿ. ಆಯ್ಕೆ

Mumbai News Desk

ಪಾಂಗಾಳ: ಮಾ. 2ರಿಂದ 4ರವರೆಗೆ ಸಿರಿ ಕುಮಾರ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಆಯನ ಸಿರಿಜಾತ್ರೆ

Mumbai News Desk

  ಪುಣೆ  ‌:ಸುಂದರ ಪೂಜಾರಿ ಕಾಣೆಯಾಗಿದ್ದಾರೆ

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk