September 6, 2026
Mumbai News Kannada
ತುಳುನಾಡು

ಯಂಗ್ ಮೆನ್ಸ್ ಬೋವಿ ಅಸೋಸಿಯೇಷನ್ ವತಿಯಿಂದ ಉಚ್ಚಿಲದಲ್ಲಿ ವಿಧ್ಯಾರ್ಥಿಗಳಿಗೆ ಕಂಪ್ಯೂಟರ್ ಸೆಟ್‌ ಹಾಗೂ ನೋಟ್‌ಬುಕ್‌ ವಿತರಣೆ





ಮುಂಬಯಿ : ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಷನ್ (YMBA) ವತಿಯಿಂದ ಉಚ್ಚಿಲ ಬೋವಿ ಎಜುಕೇಶನ್ ಟ್ರಸ್ಟ್ ನಿರ್ವಹಿಸುತ್ತಿರುವ ಶಾಲೆಗಳಿಗೆ ದಿನಕರ್ ಟಿ. ಉಚ್ಚಿಲ್ (ಮುಂಬೈ) ಅವರು ನೀಡಿದ ಐದು ಕಂಪ್ಯೂಟರ್ ಸೆಟ್‌ಗಳು ಹಾಗೂ ನೋಟ್‌ಬುಕ್‌ಗಳನ್ನು ಜೂನ್ 6ರಂದು ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ಐದು ಕಂಪ್ಯೂಟರ್‌ಗಳನ್ನು 2026ರ ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಷನ್ ಪದಾಧಿಕಾರಿಗಳು ಶಾಲೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉಚ್ಚಿಲ ಬೋವಿ ಮೂರೂರ ಸಭಾದ ಅಧ್ಯಕ್ಷರಾದ ಹರೀಶ್ ಟಿ. ಉಚ್ಚಿಲ್ ಹಾಗೂ ಶಾಲಾ ಕರಸ್ಪಾಂಡೆಂಟ್ ಕರುಣಾಕರ ಜೆ. ಉಚ್ಚಿಲ್ ವೈಎಂಬಿಎ ಯ ಕೊಟ್ಲು ಆನಂದ, ಚಿದಾನಂದ ಆರ್. ಉಚ್ಚಿಲ್, ಪದ್ಮನಾಭ ಐಲ್, ಶೈಲೇಶ್ ಉದ್ಯಾವರ ಹಾಗೂ ಉಮೇಶ್ ಉಚ್ಚಿಲ್ , ಶಾಲೆಯ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಶಾಲೆಯ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹರೀಶ್ ಟಿ. ಉಚ್ಚಿಲ್ ಮತ್ತು ಚಿದಾನಂದ ಆರ್. ಉಚ್ಚಿಲ್ ಅವರು ದಿನಕರ್ ಟಿ. ಉಚ್ಚಿಲ್ ಅವರ ಉದಾರ ದೇಣಿಗೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಶಾಲೆಯ ಅಭಿವೃದ್ಧಿಗಾಗಿ ಅವರು ಹಲವು ವರ್ಷಗಳಿಂದ ನೀಡುತ್ತಿರುವ ನಿರಂತರ ಸಹಕಾರವನ್ನು ಶ್ಲಾಘಿಸಿ, ಅವರ ಕೊಡುಗೆಗಳು ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಅಮೂಲ್ಯವಾಗಿವೆ ಎಂದರು.

ಕೊಟ್ಲು ಆನಂದ ಅವರು ಮಾತನಾಡುತ್ತಾ, ಸುಮಾರು ಒಂದು ಶತಮಾನದಿಂದ ವೈಎಂಬಿಎ ಮುಂಬಯಿಯ ಮೊಯಾ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು. ಕರಾವಳಿಯಿಂದ ಜೀವನೋಪಾಯಕ್ಕಾಗಿ ಮುಂಬಯಿಗೆ ಬಂದ ಸಮುದಾಯದ ಸದಸ್ಯರನ್ನು ಒಗ್ಗೂಡಿಸಿ, ಪರಸ್ಪರ ಸಹಕಾರ ಮತ್ತು ಸಾಮಾಜಿಕ-ಆರ್ಥಿಕ ಪ್ರಗತಿಗೆ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ದಿನಕರ್ ಟಿ. ಉಚ್ಚಿಲ್ ಅವರು ವೈಎಂಬಿಎ ಮೇಲಿರುವ ವಿಶ್ವಾಸದಿಂದಲೇ ವಿದ್ಯಾರ್ಥಿಗಳ ಮತ್ತು ಸಮುದಾಯದ ಹಿತಕ್ಕಾಗಿ ಈ ದೇಣಿಗೆಯನ್ನು ಸಂಸ್ಥೆಯ ಮೂಲಕ ನೀಡಿಸದ್ದು ಅವರಿಗೆ ಉತ್ತಮ ಆರೋಗ್ಯ, ಸಂತೋಷ ಹಾಗೂ ಮುಂದಿನ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು. “ಒಬ್ಬರೇ ವೇಗವಾಗಿ ಸಾಗಬಹುದು, ಆದರೆ ಒಟ್ಟಾಗಿ ಸಾಗಿದರೆ ದೂರದ ಗುರಿ ತಲುಪಬಹುದು” ಎಂಬ ಸಂದೇಶದೊಂದಿಗೆ ಸಮಾಜದ ಎಲ್ಲರೂ ಇಂತಹ ಉದಾತ್ತ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕೊನೆಯಲ್ಲಿ ದಾನಿ ದಿನಕರ್ ಟಿ. ಉಚ್ಚಿಲ್ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಯಂಗ್ ಮೆನ್ಸ್ ಬೋವಿ ಅಸೋಸಿಯೇಷನ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.



Related posts

ಕಾಪು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ತಾಲೂಕು ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ

Mumbai News Desk

ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ, ಸಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರ ಅವರಿಗೆ ಸನ್ಮಾನ

Mumbai News Desk

ಮುಲ್ಕಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ 24ನೇ ಕೃತಿ ‘ತುಳುನಾಡಿನ ಆಟಿ ತಿಂಗಳು’ ಬಿಡುಗಡೆ

Mumbai News Desk

ಹೆಜಮಾಡಿ ಬೈಪಾಸ್ ಟೋಲ್ ವಿರುದ್ಧ ಬೃಹತ್ ಪ್ರತಿಭಟನೆ: 15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹಾಗೂ ಅನಿರ್ದಿಷ್ಟಾವಧಿಯ ಹೋರಾಟ: ವಿನಯ್ ಕುಮಾರ್ ಸೊರಕೆ ಎಚ್ಚರಿಕೆ

Mumbai News Desk

ಕಾಪು ಲೈಟ್ ಹೌಸ್ ರೆಸಾರ್ಟ್ ನಲ್ಲಿ ಯುವವಾಹಿನಿ (ರಿ.) ಕಾಪು ಘಟಕದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ; ಶುಭಾರಂಭ

Mumbai News Desk