31 C
Mumbai
September 1, 2026
Mumbai News Kannada
ಕರ್ನಾಟಕ

ಕಂಬಳದ ಸುಗಮ ಆಯೋಜನೆಗೆ ರಾಜ್ಯ ಸರ್ಕಾರದಿಂದ 1.15 ಕೋಟಿ ರೂ. ಭಾರಿ ಅನುದಾನ ಬಿಡುಗಡೆ: ಕರಾವಳಿಗರಿಗೆ ಸಿಹಿ ಸುದ್ಧಿ





ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆ ಹಾಗೂ ಸಾಂಪ್ರದಾಯಿಕ ಜಾನಪದ ಕ್ರೀಡೆಯಾದ ಕಂಬಳದ ಸುಗಮ ಆಯೋಜನೆಗೆ ಕರ್ನಾಟಕ ಸರ್ಕಾರವು ಅತ್ಯಂತ ಮಹತ್ವದ ಕೊಡುಗೆಯನ್ನು ನೀಡುವ ಮೂಲಕ ದೊಡ್ಡ ಸಿಹಿ ಸುದ್ದಿ ಪ್ರಕಟಿಸಿದೆ. ಇತ್ತೀಚಿನ ದಿನಗಳಲ್ಲಿ ಕಂಬಳ ಕೂಟಗಳ ಆಯೋಜನೆಗೆ ಸಂಬಂಧಿಸಿದಂತೆ ವಿವಿಧ ಆಡಳಿತಾತ್ಮಕ ತೊಡಕುಗಳು, ಆರ್ಥಿಕ ಮುಗ್ಗಟ್ಟು ಹಾಗೂ ಕಾನೂನಾತ್ಮಕ ಸವಾಲುಗದುರಾಗುತ್ತಿದ್ದ ಬೆನ್ನಲ್ಲೇ, ಈ ಸಾಂಪ್ರದಾಯಿಕ ಜಾನಪದ ವೈಭವವನ್ನು ನಿರಂತರವಾಗಿ ಉಳಿಸಿ ಬೆಳೆಸಲು ಸರ್ಕಾರ ಭಾರಿ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದೆ. ಪ್ರಸಕ್ತ 2025-26ನೇ ಸಾಲಿನ ಕಂಬಳ ಋತುವಿನ ಯಶಸ್ವಿ ಆಯೋಜನೆಗಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಒಟ್ಟು 1 ಕೋಟಿ 15 ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.ಇನ್ಮುಂದೆ ಪ್ರತಿಯೊಂದು ಕಂಬಳ ಕೂಟಕ್ಕೂ ತಲಾ 5 ಲಕ್ಷ ರೂಪಾಯಿಯಂತೆ ಅನುದಾನ ನೀಡಲಾಗುವುದು .
ಕರಾವಳಿಯ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳಕ್ಕೆ ಕೇವಲ ಪ್ರಾದೇಶಿಕವಾಗಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರಿ ಜನಪ್ರಿಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಂತಹ ಮಹಾನಗರಗಳಲ್ಲೂ ಯಶಸ್ವಿಯಾಗಿ ಕಂಬಳವನ್ನು ಆಯೋಜಿಸುವ ಮೂಲಕ ಇದು ಇಡೀ ದೇಶದ ಗಮನ ಸೆಳೆದಿದೆ. ಆದರೆ ಪ್ರತಿ ವರ್ಷ ಕಂಬಳ ಕೂಟಗಳನ್ನು ಆಯೋಜಿಸುವಾಗ ಆಯೋಜಕರು ಎದುರಿಸುವ ಆರ್ಥಿಕ ಹೊರೆ ಹಾಗೂ ಸಿದ್ಧತೆಗಳ ಸವಾಲುಗಳು ಅಪಾರವಾಗಿರುತ್ತವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆಯು, ಕಂಬಳವನ್ನು ಕೇವಲ ಸಾಂಸ್ಕೃತಿಕ ಆಚರಣೆಯಾಗಿ ಮಾತ್ರವಲ್ಲದೆ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಉತ್ತೇಜಿಸುವ ಉದ್ದೇಶದಿಂದ ಈ ಬಾರಿ ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಇದರಿಂದಾಗಿ ಮುಂಬರುವ ಕಂಬಳ ಋತುವಿನಲ್ಲಿ ಯಾವುದೇ ಆರ್ಥಿಕ ಅಡಚಣೆಯಿಲ್ಲದೆ ಅತ್ಯಂತ ಸುಸಜ್ಜಿತ ಹಾಗೂ ವ್ಯವಸ್ಥಿತವಾಗಿ ಕ್ರೀಡಾಕೂಟಗಳನ್ನು ನಡೆಸಲು ದಾರಿ ಸುಗಮವಾಗಿದೆ.
ಸರ್ಕಾರದ ಈ ಐತಿಹಾಸಿಕ ನಿರ್ಧಾರವನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಂಬಳ ಸಮಿತಿಗಳು, ಕೋಣಗಳ ಯಜಮಾನರು, ಓಟಗಾರರು ಹಾಗೂ ಲಕ್ಷಾಂತರ ಕಂಬಳ ಪ್ರೇಮಿಗಳು ಅತ್ಯಂತ ಸಂತಸದಿಂದ ಸ್ವಾಗತಿಸಿದ್ದಾರೆ. ಕಂಬಳದ ಸುತ್ತ ಎದ್ದಿದ್ದ ಸಣ್ಣಪುಟ್ಟ ವಿವಾದಗಳ ಆತಂಕವನ್ನು ಈ ಬೃಹತ್ ಅನುದಾನವು ದೂರ ಮಾಡಿದ್ದು, ಕರಾವಳಿಯ ಪರಂಪರೆಯ ರಕ್ಷಣೆಗೆ ಸರ್ಕಾರದ ಬದ್ಧತೆಯನ್ನು ಎತ್ತಿಹಿಡಿದಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಆರ್ಥಿಕ ನೆರವು ಕಂಬಳದ ಸಾಂಪ್ರದಾಯಿಕ ಮೌಲ್ಯವನ್ನು ಹೆಚ್ಚಿಸುವುದರ ಜೊತೆಗೆ, ಕರಾವಳಿ ಭಾಗದಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮ ಬೆಳವಣಿಗೆಗೆ ಹೊಸ ವೇಗ ನೀಡಲಿದೆ ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.



Related posts

ಉಡುಪಿ: ಡೇವಿಡ್‌ ಡಿಸೋಜಾ ಕೊಲೆ ಪ್ರಕರಣದ ಶೂಟರ್‌ ಕಾಲಿಗೆ ಪೊಲೀಸ್‌ ಗುಂಡೇಟು, ಇಬ್ಬರು ಆರೋಪಿಗಳು ಪರಾರಿ

Mumbai News Desk

ಬಳ್ಳಾರಿ : ಬ್ಯಾನರ್‌ ವಿಚಾರಕ್ಕೆ ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

Mumbai News Desk

ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ಮೇಜರ್ ಟ್ವಿಸ್ಟ್, ಮಾಸ್ಕ್ ಮ್ಯಾನ್ ಅರೆಸ್ಟ್.

Mumbai News Desk

ಕರ್ನಾಟಕ : ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ – ಹುಬ್ಬಳ್ಳಿ ಗಲಭೆ ಸೇರಿ 43 ಕೇಸ್ ವಾಪಸ್ ಆದೇಶ ರದ್ದುಗೊಳಿಸಿದ ಹೈಕೋರ್ಟ್

Mumbai News Desk

ತಾಯಿಯ ಅಗಲಿಕೆಯ ನೋವಿನಲ್ಲೂ ಅಪ್ರತಿಮ ಸಾಧನೆ: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ದಿಶಾ

Mumbai News Desk

ಕರ್ನಾಟಕ : ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ

Mumbai News Desk