July 31, 2026
Mumbai News Kannada
ಪ್ರಕಟಣೆ

ಮೂಡಬಿದಿರೆಯಲ್ಲಿ ನಾಳೆ(ಆಗಸ್ಟ್ 1)‘ವ್ಯಸನ ಮುಕ್ತ ಅಭಿಯಾನ’ ಕಾರ್ಯಕ್ರಮ







ಸೇವಾಭಾರತಿ ಕರ್ನಾಟಕ, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಕೇಶವ ಸ್ಮೃತಿ ಸಂವರ್ಧನಾ ಸಮಿತಿ (ಆರ್) ಮಂಗಳೂರು ಹಾಗೂ ಮೂಲತ್ವಾ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ಆರ್) ಮಂಗಳೂರು ಇವುಗಳ ಜಂಟಿ ಸಹಯೋಗದೊಂದಿಗೆ ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಾಳೆ (ಆಗಸ್ಟ್ 1, 2026) ಪೂರ್ವಾಹ್ನ 11.30ಕ್ಕೆ ‘ವ್ಯಸನ ಮುಕ್ತ ಅಭಿಯಾನ’ (ಜಾಗೃತಿ, ಸಂವಾದ, ಆಪ್ತಸಮಾಲೋಚನೆ) ಕಾರ್ಯಕ್ರಮವು ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೂಲತ್ವಾ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಪ್ರಕಾಶ್ ಮೂಲತ್ವಾ ನೆರವೇರಿಸಲಿದ್ದಾರೆ. ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪಿಯು ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲರಾದ ಲೆಫ್ಟಿನೆಂಟ್ ವಿಜಯಲಕ್ಷ್ಮಿ, ಮೂಲತ್ವಾ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅಕ್ಷತಾ ಕದ್ರಿ, ಸೇವಾ ಭಾರತಿ ಕರ್ನಾಟಕದ ಕಾರ್ಯದರ್ಶಿ ಶ್ರೀ ಕೆ. ಚೆನ್ನಯ್ಯ ಸ್ವಾಮಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜಕರಾದ ಪ್ರೊ. ಡಾ. ಶೇಷಪ್ಪ ಅಮಿನ್ ಕೆ., ಮತ್ತು ಮಂಗಳೂರಿನ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಕಾರ್ಯದರ್ಶಿ ಶ್ರೀ ಗಜಾನನ ಪೈ ತೋನ್ಸೆ ಅವರು ಗೌರವಾನ್ವಿತ ಉಪಸ್ಥಿತಿ ವಹಿಸಲಿದ್ದಾರೆ.
ಅಲ್ಲದೆ, SWO ಅಧಿಕಾರಿ ಪ್ರೊ. ಹರೀಶ್, NSS ಅಧಿಕಾರಿಗಳಾದ ಶಾರದಾ ಮತ್ತು ಚಿತ್ರಲೇಖ, ರೋವರ್ ರೇಂಜರ್ಸ್ ಆಶ್ರಿತಾ ಹಾಗೂ ದಕ್ಷಿತ್ ಮತ್ತು ರೆಡ್ ಕ್ರಾಸ್ ಅಧಿಕಾರಿ ಶ್ರೀಗೌರಿ ಅವರು ಉಪಸ್ಥಿತರಿರಲಿದ್ದು, ಸಂಘಟಕರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಆದರದಿಂದ ಆಹ್ವಾನಿಸಿದ್ದಾರೆ.



Related posts

ನ. 19 ರಂದು ಶ್ರೀ ಅಯ್ಯಪ್ಪ ಭಕ್ತ ವೃಂದ ಸೇವಾ ಸಮಿತಿ ಮುಂಬಯಿ (ರಿ.) ಇದರ ವಿಶೇಷ ಸಭೆ.

Mumbai News Desk

ಕಾಂದಿವಲಿ ಪೂರ್ವ ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿನ 30 ರಂದು 50 ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹೋತ್ಸವ ಮತ್ತು ಅನ್ನದಾನ

Mumbai News Desk

ಕಾಂತೇಶ್ವರ ದೇವಸ್ಥಾನ ಕಾಂತಾವರ ಜ14ರಿಂದ 23  ವರ್ಷಾವಧಿ ಜಾತ್ರೆ ರಥೋತ್ಸವ,

Mumbai News Desk

ಸೆ.7 ರಂದು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ ಪ್ರಧಾನ ಸಮಾರಂಭ

Mumbai News Desk

ಕರ್ನಾಟಕ ಸಂಘ ಸಯನ್ – ಫೆ.10ರಂದು ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜ. 16ಕ್ಕೆ ವರ್ದಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ

Mumbai News Desk