ಮುಂಬಯಿ,ಅ.3: ಕಳೆದ ಐದು ದಶಕಗಳಿಂದ ಧಾರ್ಮಿಕ ಸೇವೆಯೊಂದಿಗೆ ಶೈಕ್ಷಣಿಕ, ವೈದ್ಯಕೀಯ ಸೇವೆಯಲ್ಲಿ ನಿರತ ಶ್ರೀ ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಧಾರ್ಮಿಕ ಸಂಸ್ಥೆಯು ತನ್ನ ಬೊರಿವಿಲಿ ಕಚೇರಿಯಲ್ಲಿ ಅಬಲೆಯರಿಗಾಗಿ ಹೊಲಿಗೆ ತರಬೇತಿ ತರಗತಿಯನ್ನು ಆರಂಭಿಸಿದೆ. ಇದರಿಂದ ಈ ತನಕ 500ಕ್ಕೂ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಪ್ರಯೋಜನ ಪಡೆದು ತಮ್ಮ ಸ್ವಂತ ಹೊಲಿಗೆ ಉದ್ಯಮದಲ್ಲಿ ನಿರತರಾಗಿದ್ದಾರೆ.ಪ್ರಸ್ತುತ ವರ್ಷದ 17ನೇ ಹೊಲಿಗೆ ತರಬೇತಿ ತರಗತಿಯಲ್ಲಿ ತರಬೇತಿ ಪಡೆದ ಸ್ತ್ರೀಯರಿಗೆ ಪ್ರಮಾಣಪತ್ರ ಹಾಗೂ ಓರ್ವ ಸ್ತ್ರೀಗೆ ಹೊಲಿಗೆ ಯಂತ್ರವನ್ನು ನೀಡುವ ಕಾರ್ಯಕ್ರಮವನ್ನು ಅ.9ರಂದು ಆದಿತ್ಯವಾರ ಬೊರಿವಿಲಿ ಪಶ್ಚಿಮದ ಚುಕ್ಕುವಾಡಿಯ ಭೂಷಣ್ ಪಾರ್ಕ್ ವ್ಯೂ ಕಟ್ಟಡದಲ್ಲಿರುವ ಸಮಿತಿಯ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ. ಸಮಿತಿಯ ಅಧ್ಯಕ್ಷ ಮಾಧವ ಎಸ್.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಂಧೇರಿ ಪಶ್ಚಿಮದ ವಾಲಿಯಾ ಕಾಲೇಜಿನ ಮಾಜಿ ಪ್ರಭಾರ ಪ್ರಾಂಶುಪಾಲೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಡಾ.ಬಾಗೆಶ್ರೀ ಪಿ.
ಬಂಗೇರ ಬಾಂದೇಕರ್ ಆಗಮಿಸಲಿರುವರು.
ತದನಂತರ ಸಮಿತಿಯ 32ನೇ ವಾರ್ಷಿಕ ಮಹಾಸಭೆಯು ನಡೆಯಲಿದೆ.ಸಮಿತಿಯ ಸರ್ವ ಸದಸ್ಯರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿರಬೇಕಾಗಿ ಸಮಿತಿಯ ಗೌರವ ಕಾರ್ಯದರ್ಶಿ ಪ್ರೋ. ಕೆ.ಎಚ್.ಕರ್ಕೇರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




