September 23, 2026
Mumbai News Kannada
ತುಳುನಾಡು

ಲಯನ್ಸ್ ಕ್ಲಬ್ ಕೆಮ್ಮಣ್ಣು ಅಸ್ತಿತ್ವಕ್ಕೆ : ಸ್ಥಾಪಕ ಅಧ್ಯಕ್ಷರಾಗಿ ಜಗದೀಶ್ ಕೆಮ್ಮಣ್ಣು ಹಾಗೂ ಪದಾಧಿಕಾರಿಗಳ ಆಯ್ಕೆ



ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಲಯನ್ಸ್ ಕ್ಲಬ್ ಕೆಮ್ಮಣ್ಣು ಇದರ 2026–27ನೇ ಸಾಲಿನ ಸಂಸ್ಥಾಪಕ ಅಧ್ಯಕ್ಷರಾಗಿ ಜಗದೀಶ್ ಕೆಮ್ಮಣ್ಣು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನೂತನ ಲಯನ್ಸ್ ಕ್ಲಬ್ ಕೆಮ್ಮಣ್ಣು ಮೂಲಕ ಕೆಮ್ಮಣ್ಣು ಪರಿಸರದಲ್ಲಿ ಸಮಾಜಮುಖಿ ಹಾಗೂ ಜನಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಆರೋಗ್ಯ, ಶಿಕ್ಷಣ, ಪರಿಸರ ಹಾಗೂ ಅಗತ್ಯವಿರುವವರಿಗೆ ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಾಗುವುದು ಎಂದು ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ತಿಳಿಸಿದ್ದಾರೆ.
ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಕೆಮ್ಮಣ್ಣು ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ ನೂತನ ಸಾಲಿಗೆ ಸಕ್ರಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಮಂಡಳಿಯನ್ನು ನೇಮಕ ಮಾಡಲಾಗಿದೆ.
ನೂತನ ಲಯನ್ಸ್ ಕ್ಲಬ್ ಕೆಮ್ಮಣ್ಣು ಮೂಲಕ ಕೆಮ್ಮಣ್ಣು ಪರಿಸರದಲ್ಲಿ ಸಮಾಜಮುಖಿ ಹಾಗೂ ಜನಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಆರೋಗ್ಯ, ಶಿಕ್ಷಣ, ಪರಿಸರ ಹಾಗೂ ಅಗತ್ಯವಿರುವವರಿಗೆ ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಾಗುವುದು ಎಂದು ಅಧ್ಯಕ್ಷ ಜಗದೀಶ್ ಕೆಮ್ಮಣ್ಣು ತಿಳಿಸಿದ್ದಾರೆ.
ಅದರಂತೆ, ಕ್ಲಬ್‌ನ ಕಾರ್ಯದರ್ಶಿಯಾಗಿ ಸುಧಾಕರ್ ಎ. ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ ಸುಮತಿ, ಕೋಶಾಧಿಕಾರಿಯಾಗಿ ಹರೀಶ್ ಸಾಲ್ಯಾನ್ ಹಾಗೂ ಜೊತೆ ಕೋಶಾಧಿಕಾರಿಯಾಗಿ ಪದ್ಮನಾಭ ಕೋಟ್ಯಾನ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷರುಗಳಾಗಿ ಸುರೇಶ್ ಬಂಗೇರ ಮತ್ತು ಸಂದೀಪ್ ಶಂಕರ್ ಆಯ್ಕೆಯಾಗಿದ್ದರೆ, ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ಧರ್ಮರಾಜ್ ಸುವರ್ಣ, ಕ್ಲಬ್ ಮೆಂಬರ್‌ಶಿಪ್ ಚೇರ್‌ಪರ್ಸನ್ ಆಗಿ ವಿನಯ್ ಪೂಜಾರಿ, ಕ್ಲಬ್ ಎಲ್‌ಸಿಐಎಫ್ (LCIF) ಚೇರ್‌ಪರ್ಸನ್ ಆಗಿ ಪ್ರದೀಪ್ ಎಸ್. ಆಚಾರ್ಯ, ಕ್ಲಬ್ ಸರ್ವಿಸ್ ಚೇರ್‌ಪರ್ಸನ್ ಆಗಿ ಮಿಥಿಲೇಶ್ ಹಾಗೂ ಕ್ಲಬ್ ಮಾರ್ಕೆಟಿಂಗ್ ಚೇರ್‌ಪರ್ಸನ್ ಆಗಿ ನವೀನ್ ಕುಮಾರ್ ಎಸ್. ಪೂಜಾರಿ ಗುಳಿಬೆಟ್ಟು ಕಾರ್ಯನಿರ್ವಹಿಸಲಿದ್ದಾರೆ.

ಇದರೊಂದಿಗೆ, ಲಯನ್ ಟೇಮರ್ ಆಗಿ ತಾರಾನಾಥ ಪೂಜಾರಿ, ಲಯನ್ ಟೇಲ್ ಟ್ವಿಸ್ಟರ್ ಆಗಿ ತುಳಸಿದಾಸ್ ಸಾಲ್ಯಾನ್, ಗವರ್ನರ್ ಪ್ರೋಗ್ರಾಮ್ ಚೇರ್‌ಪರ್ಸನ್ ಆಗಿ ಉಮೇಶ್ ಕುಂದರ್, ಕಲ್ಚರಲ್ ಆಂಡ್ ಪಿಕ್ನಿಕ್ ಚೇರ್‌ಪರ್ಸನ್ ಆಗಿ ಸುರೇಶ್ ರಾವ್, ಎಕ್ಸ್‌ಟೆನ್ಷನ್ ಚೇರ್‌ಮ್ಯಾನ್ ಆಗಿ ನಂದಕಿಶೋರ್ ಕೆಮ್ಮಣ್ಣು ಮತ್ತು ಗೈಡಿಂಗ್ ಲಯನ್‌ಗಳಾಗಿ ರಾಮದಾಸ್ ಶೆಟ್ಟಿಗಾರ್ ಹಾಗೂ ಓಸ್ವಾಲ್ಡ್ ಕರ್ನೇಲಿಯೊ ನಿಯೋಜನೆಗೊಂಡಿದ್ದಾರೆ.

ಕ್ಲಬ್‌ನ ನಿರ್ದೇಶಕರಾಗಿ ಸತೀಶ್ ಶೆಟ್ಟಿ, ದೇವದಾಸ್ ಸುವರ್ಣ, ನಂದಕಿಶೋರ್, ಶ್ಯಾಮ ಸುಂದರ್, ಶೇಖರ್ ಕುಂದರ್, ಲಾಲ್‌ಕೃಷ್ಣ ಸಾಹು ಹಾಗೂ ಭಾಸ್ಕರ್ ಸಿ. ಪೂಜಾರಿ ಅವರು ನೂತನ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ನೂತನ ಕ್ಲಬ್ ವತಿಯಿಂದ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವೈವಿಧ್ಯಮಯ ಸೇವಾ ಯೋಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸದ್ಯದಲ್ಲಿ ಅದ್ದೂರಿಯಾಗಿ ಜರಗಲಿದೆ.



Related posts

ಉಡುಪಿ : ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ

Mumbai News Desk

ಕಾರ್ಲೆ ಭಗವತಿ ಕ್ಷೇತ್ರದ ದೈವ ಪಾತ್ರಿ, ಮೋಯ ಜನಾಂಗದ ದಿವ್ಯ ಚೇತನ ದಿ.ಕೃಷ್ಣ ಬೆಳ್ಚಪ್ಪಾಡರು ಶಿರಿಯ, ಅವರ 42ನೇ ಪುಣ್ಯ ಸ್ಮರಣೆ

Mumbai News Desk

ಸಸಿಹಿತ್ಲು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಾಧಕರಾಗಿ – ವೇದಪ್ರಕಾಶ್ ಎಂ. ಶ್ರೀಯಾನ್

Mumbai News Desk

ತುಳು ರಂಗಭೂಮಿಯಲ್ಲಿ ಐತಿಹಾಸಿಕ ಮೈಲಿಗಲ್ಲು:ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ “ಜೋಡು ಜೀಟಿಗೆ “ 100ನೇ ಪ್ರದರ್ಶನ – 100 ಕಲಾವಿದರಿರುವ ಏಕೈಕ ತಂಡದ ಅಪೂರ್ವ ಸಾಧನೆ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನದ ಸಮಾರಂಭ;

Mumbai News Desk

ಉಡುಪಿ ಕಂಬಳ ಶಂಕುಸ್ಥಾಪನೆ: ನಿಷೇಧಾಜ್ಞೆ ಉಲ್ಲಂಘಿಸಿದ ಸಂಸದರು, ಶಾಸಕರು ಸೇರಿ 37 ಮಂದಿಯ ವಿರುದ್ಧ ಎಫ್‌ಐಆರ್ ದಾಖಲು

Mumbai News Desk