31 C
Mumbai
September 28, 2026
Mumbai News Kannada
ಮುಂಬಯಿ

ನಾರಿ ಶಕ್ತಿ ಬಳಗ ಪನ್ವೇಲ್ – ಆಟಿದ ತಿರ್ಲ್ – ಆಷಾಢೋತ್ಸವ , ಆಷಾಢ ಕವಿಗೋಷ್ಠಿ‌ ಕಾರ್ಯಕ್ರಮ



ಕಾವ್ಯದ ಕನ್ನಡಿ ಸದಾ ಸಮಾಜವನ್ನು ಪ್ರತಿಫಲಿಸುತ್ತಿರಲಿ – ಡಾ.ಜಿ.ಪಿ.ಕುಸುಮಾ

ನಾರಿ ಶಕ್ತಿ ಬಳಗ ಪನ್ವೇಲ್ ಇದರ ಮಹಿಳಾ ಸದಸ್ಯೆಯರ ವತಿಯಿಂದ ತಾ. 09/08/26ರಂದು ಭಾನುವಾರ ಸಂಜೆ ಆಟಿದ ತಿರ್ಲ್ – ಆಷಾಢೋತ್ಸವ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆಯಿತು. ಬಳಗದ ಸ್ಥಾಪಕ ಗೌರವ್ಯಧ್ಯಕ್ಷೆ ಸಾಹಿತಿ ಕವಯತ್ರಿ ಸರ್ವಮಂಗಳ ನಿರಂಜನ್ ಶೆಟ್ಟಿ ಅವರು ತಮ್ಮ ಅಧ್ಯಕ್ಷತೆಯ ಪ್ರಾಸ್ತಾವಿಕ ನುಡಿಯಲ್ಲಿ ಆಷಾಢ ಮಾಸಕ್ಕೆ ವಿಶೇಷವಾದ ಸ್ಥಾನಮಾನವಿದೆ,ತುಳುನಾಡಿನ ಆಟಿಯ ದಿನಗಳ ಆಚಾರ ವಿಚಾರಗಳ ನೆನಪೇ ಚೆಂದ,ಇಂತಹ ಕಾರ್ಯಕ್ರಮಕ್ಕೆ ಮುಖ್ಯವಾಗಿ ನಮ್ಮ ಮಕ್ಕಳನ್ನು ಕರೆತಂದರೆ ನಮ್ಮ ಪ್ರಕೃತಿ, ಸಂಸ್ಕೃತಿಯ ಅರಿವು ಅವರಿಗಾಗುತ್ತದೆ ಎಂದರು. ಪನ್ವೇಲ್‌ನಲ್ಲಿ ಪ್ರಪ್ರಥಮ ಬಾರಿಗೆ ನಮ್ಮ ಬಳಗದ ವತಿಯಿಂದ ಆಷಾಢ ಕವಿಗೋಷ್ಠಿ‌ ನಡೆಯಲ್ಪಡುತ್ತಿದೆ ಎನ್ನಲು ಸಂತಸವಾಗುತ್ತಿದೆ ಎಂದು ನುಡಿದರು. ಬಳಗದ ಕಾರ್ಯಧ್ಯಕ್ಷೆಯರಾದ ಪ್ರತಿಭಾ ಡಿ. ಶೆಟ್ಟಿ ಅವರು ಆಟಿ ತಿಂಗಳ ಮಹತ್ವದ ಮಾಹಿತಿ ನೀಡಿದರು.

ಮುಖ್ಯ ಅತಿಥಿ ಹಾಗೂ ಕವಿಗೋಷ್ಠಿ‌ಯ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡಿಗರ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಅಧ್ಯಕ್ಷೆಯಾದ ಸಾಹಿತಿ ಲೇಖಕಿ ಡಾ.ಜಿ.ಪಿ ಕುಸುಮಾ ಅವರು ಕಾರ್ಯಕ್ರಮಕ್ಕೆ ಬರುವ ಸದಸ್ಯರ ಸಂಖ್ಯೆ ಮಹತ್ವದ್ದಲ್ಲ ,ಬಂದಂತಹ ಸದಸ್ಯರ ನಿಷ್ಕಲ್ಮಶ ಮನಸ್ಸುಗಳೇ ದೊಡ್ಡದು ಅಂತಹ ಉತ್ತಮವಾದ ವಾತಾವರಣ ಇಲ್ಲಿದೆ ಎಂದು ನುಡಿದರು.ಕವಿಗಳ ಕವನ ವಾಚನಕ್ಕೆ ಅತ್ಯುತ್ತಮ ವಿಮರ್ಶೆಯನ್ನು ಹೇಳುತ್ತಾ ,ಕಾವ್ಯವೆಂದರೆ ಬರೀ ಶಬ್ದಗಳ ಜೋಡಣೆಯಲ್ಲ ,ಅದು ಮನಸ್ಸಿನ ಭಾವನೆಗಳಿಗೆ ನೀಡುವ ಶಬ್ದರೂಪವೆಂದರು. ನಾರಿ ಶಕ್ತಿ ಬಳಗದ ವತಿಯಿಂದ ಮುಖ್ಯ ಅತಿಥಿ ಡಾ.ಕುಸುಮಾ ಅವರಿಗೆ ಬಳಗದ ಸಕ್ರಿಯ ಸದಸ್ಯೆರಾದ ಸಮಾಜ ಸೇವಕಿ ಶಾಲಿನಿ ದಿನಕರ್ ಶೆಟ್ಟಿ ಅವರನ್ನು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ರತ್ನಾ ರಾಜೇಶ್ ಚೌಟ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ಸಂಘ ಮಹಿಳಾ ವಿಭಾಗದ ಕಾರ್ಯಧ್ಯಕ್ಷರಾದ ಸುಶೀಲಾ ಕುಲಕರ್ಣಿ ಅವರನ್ನು ಹಾಗೂ ಸ್ಥಳಾವಕಾಶವನ್ನು ನೀಡಿದ ವೀರ್‌ಪಾರ್ಕ್ ಹೋಟೆಲ್‌ನ ಶಶಿಕಾಂತ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.

ಆಷಾಢ ಕವಿಗೋಷ್ಠಿ‌ಯಲ್ಲಿ ಕವಿಗಳಾದ ಸರ್ವಮಂಗಳ ಎನ್ ಶೆಟ್ಟಿ, ದೀಪಾ ಹರೀಶ್ ಶೆಟ್ಟಿ , ಸವಿತಾ ಅರುಣ್ ಶೆಟ್ಟಿ ,ಪ್ರಪುಲ್ಲಾ ಶೆಟ್ಟಿ ,ಗಾಯಿತ್ರಿ ನಾಗೇಶ್ , ಸಮೀಪ ಶೆಟ್ಟಿ, ಸುಧಾ ರಾವ್ ಹಾಗೂ ರಶ್ಮಿ ಭಟ್ ಅವರು ಸ್ವರಚಿತ ಕವನ ವಾಚಿಸಿ ಸಭಿಕರ ಪ್ರಶಂಸೆಗೆ ಪಾತ್ರರಾದರು.

ಬಳಗದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ,ಸರ್ವಮಂಗಳ ಎನ್ ಶೆಟ್ಟಿ ಅವರು ಕಥೆ ಬರೆದು ನಿರ್ದೇಶಿಸಿದ ಕಿರು ಪ್ರಹಸನ ಕೋಕಾಯಿ ಕಮಲಕ್ಕ ಸಭಿಕರ ಮನ ಸೂರೆಗೊಂಡಿತು.ಕಾರ್ಯಕ್ರಮದ ನಿರೂಪಣೆಯನ್ನು ದೀಪಾ ಹರೀಶ್ ಶೆಟ್ಟಿ ಹಾಗೂ ಪೂಜಾ ಶೆಟ್ಟಿಯವರು ನಿರ್ವಹಿಸಿದರು.

ರೂಪ ಶೆಟ್ಟಿ ವಂದನಾರ್ಪಣೆ ಮಾಡಿದರು. ಕಾರ್ಯದರ್ಶಿ ವನಿತಾ ಶೆಟ್ಟಿ, ಖಜಾಂಚಿ ಜ್ಯೋತಿ ಶೆಟ್ಟಿ ,ಸಾಂಸ್ಕೃತಿಕ ವಿಭಾಗದ ಸುನಂದಾ ಸಪಳಿಗ ,ಲಕ್ಷ್ಮಿ ಬಂಗೇರ , ಹರಿಣಿ ಶೆಟ್ಟಿ ,ಸುಜಾತ ಶೆಟ್ಟಿ, ಭವಾನಿ ಪೂಜಾರಿ, ಯಶೋಧ ಶೆಟ್ಟಿ ,ರೇಖಾ ಮೂರ್ತಿ, ಸುನೀಲಾ ,ಅಮಿತಾ ಶೆಟ್ಟಿ ಆಷಾಢೋತ್ಸವವು ಯಶಸ್ವಿಯಾಗಿ ನಡೆಯಲು ಸಹಕರಿಸಿದರು.ಕೊನೆಯಲ್ಲಿ ಬಳಗದ ಸದಸ್ಯೆಯರು ಮನೆಯಲ್ಲಿ ಮಾಡಿ ತಂದ ವಿವಿಧ ರುಚಿಕರ ಸಾಂಪ್ರದಾಯಕ ಖಾದ್ಯ ಪದಾರ್ಥಗಳಿಂದ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.



Related posts

ಅಯ್ಯಪ್ಪ ಯಕ್ಷ ಕಲಾ ಪ್ರತಿಷ್ಠಾನ, ಮುಂಬೈ: 2026–2028ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Mumbai News Desk

ಜಾನ್ಹವಿ ಶೆಟ್ಟಿಗೆ ಶೇ.86.40 ಅಂಕ.

Mumbai News Desk

ಶ್ರೀ ಜಗದಂಬ ಮಂದಿರ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿ ರಚನೆ : ಅಧ್ಯಕ್ಷರಾಗಿ ದಿವಾಕರ್ ರೈ ಪುನರಾಯ್ಕೆ

Mumbai News Desk

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ. ರಜತ ಮಹೋತ್ಸವದ ಕಾರ್ಯ ಧ್ಯಕ್ಷರಾಗಿ  ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಆಯ್ಕೆ,

Mumbai News Desk

ಮುಂಬಯಿ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ದೇವಿ ಪೂಜಾರಾಧನೆ

Mumbai News Desk

ಕನ್ನಡ ಕಲಾ ಸಮಾಜ (ರಿ) ಮುಂಬಾಯಿ*(ಕೋಟೆ) ಇದರ ಸದಸ್ಯರಿಂದ ಸ್ನೇಹ ಸಮ್ಮಿಲನ “-

Mumbai News Desk