
ಮುಂಬೈನ ಜೋಗೇಶ್ವರಿ ಪೂರ್ವದ ಕೇವ್ಸ್ ರೋಡ್, ಕೃಷ್ಣ ನಗರ, ಗುಂಫಾ ಟೆಕ್ಡಿಯ ನಾರಾಯಣಗಿರಿ ಆಶ್ರಮದಲ್ಲಿರುವ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶ್ರಾವಣ ಮಾಸ ಶುಕ್ಲಪಕ್ಷ ಪಂಚಮಿಯ ಪ್ರಯುಕ್ತ 17.08.2026ನೇ ಸೋಮವಾರದಂದು ಬೆಳಿಗ್ಗೆ 9:00 ರಿಂದ 12:00 ಗಂಟೆಯವರೆಗೆ ‘ನಾಗರಪಂಚಮಿ ಮಹೋತ್ಸವ’ವು ವೈಭವದಿಂದ ಜರುಗಲಿದೆ.
ಈ ಶುಭ ಸಂದರ್ಭದಲ್ಲಿ ಶ್ರೀ ನಾಗದೇವರಿಗೆ ಸಾಮೂಹಿಕ ಆಶ್ಲೇಷ ಬಲಿ, ನಾಗತನು, ನಾಗತಂಬಿಲ, 108 ಸೀಯಾಳ ಅಭಿಷೇಕ, ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಮಹಾಪೂಜೆಯು ದೇವಸ್ಥಾನದ ಪ್ರಧಾನ ಅರ್ಚಕರಾದ ಪಾಡೂರು ನರಹರಿ ತಂತ್ರಿ ಅವರ ಪೌರೋಹಿತ್ಯದಲ್ಲಿ ನೆರವೇರಲಿದೆ. ಪೂಜಾ ಕಾರ್ಯಕ್ರಮಗಳ ನಂತರ ಭಕ್ತಾದಿಗಳಿಗೆ ಸಾಮೂಹಿಕ ಅನ್ನ ಸಂತರ್ಪಣೆ ಸೇವೆ ನಡೆಯಲಿದೆ.
ಈ ಧಾರ್ಮಿಕ ಉತ್ಸವದಲ್ಲಿ ಆಡಳಿತ ಮೊಕ್ತೇಸರರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಕಾರ್ಯದರ್ಶಿ ದೇವದಾಸ್ ಎಸ್. ಸುವರ್ಣ, ಟ್ರಸ್ಟಿಗಳು, ಮಹಿಳಾ ಮಂಡಳ, ಸೇವಾ ಸಮಿತಿ ಹಾಗೂ ಸರ್ವ ಸದಸ್ಯರು ಮತ್ತು ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಜಗದಂಬಾ ಪರಿವಾರ ದೇವತೆಗಳ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.




