30 C
Mumbai
August 16, 2026
Mumbai News Kannada
ಮುಂಬಯಿ

ಹೊಸಬೆಟ್ಟು ಮೊಗವೀರ ಸಂಘ ಮುಂಬಯಿ(ರಿ) ಮಹಿಳಾ ವಿಭಾಗದಿಂದ ಆಟಿದ ಒಂಜಿ ಕೂಟ.





ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದು- ಡಾ.ಜಿ.ಪಿ.ಕುಸುಮಾ

ಹೊಸಬೆಟ್ಟು ಮೊಗವೀರ ಸಂಘ, ಮುಂಬಯಿ(ರಿ)ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಆಟಿದ ಒಂಜಿ ಕೂಟ ಕಾರ್ಯಕ್ರಮವು ದಿ.26/07/2026 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಹೊಸಬೆಟ್ಟು ಮೊಗವೀರ ಸಂಘ, ಮುಂಬಯಿ( ರಿ) ಇದರ ಅಧ್ಯಕ್ಷರಾದ ಶ್ರೀ ಉಮೇಶ್ ಹೊಸಬೆಟ್ಟು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲೇಖಕಿ ಡಾ.ಜಿ.ಪಿ.ಕುಸುಮಾ ಅವರು ಆಗಮಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ರಾಮಚಂದ್ರ ಕರ್ಕೇರ, ಕಾರ್ಯದರ್ಶಿ ಶ್ರೀ
ಪ್ರತಾಪ್ ಕುಮಾರ್ ಕರ್ಕೇರ, ಕೋಶಾಧಿಕಾರಿ ಶ್ರೀ ಮಧುಸೂದನ ಇಡ್ಯಾ, ಹಿರಿಯ ಸದಸ್ಯರಾದ ಶ್ರೀ ಎಚ್.ಅರುಣ್ ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಯಾದ ಶ್ರೀಮತಿ ರೋಹಿಣಿ ಟಿ.ಕೋಟ್ಯಾನ್, ಉಪಾಧ್ಯಕ್ಷೆಯಾದ ಶ್ರೀಮತಿ ಕುಮುದ ಎನ್. ಮೆಂಡನ್, ಕಾರ್ಯದರ್ಶಿ ಶ್ರೀಮತಿ ಸುಲಭ ಕರ್ಕೇರ ಹಾಗೂ ಕೋಶಾಧಿಕಾರಿ ಶ್ರೀಮತಿ ಅನಿತ ಸಂತೋಷ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಚಂದ್ರಿಕ ಗಂಗಾಧರ ಸಾಲಿಯನ್ ಅವರು ಪ್ರಾರ್ಥನೆಗೈದರು.ಇದ್ದರು ಶ್ರೀಮತಿ ರೇಣುಕ ಸುಧೀರ್ ರವರು ನೆರೆದ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಶ್ರೀ ಎಚ್. ಅರುಣ್ ಕುಮಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಆಟಿ ತಿಂಗಳ ಮಹತ್ವವನ್ನು ಸಭಿಕರಿಗೆ ತಿಳಿಸುತ್ತಾ ಆಟಿ ತಿಂಗಳು ಎಂದರೆ ಬಹಳ ಕಷ್ಟದ ಸಮಯ. ನಮ್ಮ ಪೂರ್ವಜರು ಮಳೆಗಾಲದಲ್ಲಿ ಬರುವ ರೋಗರುಜಿನಗಳಿಂದ ದೂರವಿರಲು ಕಂಡುಕೊಂಡ ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಆಹಾರ ಪದ್ಧತಿಯಿಂದ ದುಃಖ ದುರಿತಗಳನ್ನು ಎದುರಿಸಿ ಬದುಕನ್ನು ಆತ್ಮಸ್ಥೈರ್ಯದಿಂದ ಕಟ್ಟುತ್ತಿದ್ದರು ಎಂದು ಹೇಳಿದರು.

ಶ್ರೀಯುತ ಉಮೇಶ್ ಹೊಸಬೆಟ್ಟು ರವರು ಕಾರ್ಯಕ್ರಮ
ಆಯೋಜಿಸಿರುವ ಮಹಿಳಾ ವಿಭಾಗದ ಸದಸ್ಯರೆಲ್ಲರನ್ನು ಅಭಿನಂದಿಸಿದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ ಸಂಘವು ಸದಸ್ಯರಿಗೋಸ್ಕರ ಕೆಲವು ಕಲ್ಯಾಣ ಯೋಜನೆಗಳನ್ನು ರೂಪಿಸಿದೆ ಎಲ್ಲಾ ಸದಸ್ಯರು ಅದರ ಸದುಪಯೋಗ ಪಡೆಯಬೇಕೆಂದರು.
ಶ್ರೀ ಪ್ರತಾಪ್ ಕುಮಾರ್ ಕರ್ಕೇರ ಅವರು ಯುವಜನರು ಸಂಘದ ಸದಸ್ಯರಾಗಿ ಸಂಸ್ಥೆಯನ್ನು ಬಲಪಡಿಸಬೇಕೆಂದು ಹೇಳಿದರು. ಶ್ರೀ ರಾಮಚಂದ್ರ ಕರ್ಕೇರ ಹಾಗೂ ಶ್ರೀಮಧುಸೂದನ ಇಡ್ಯಾರವರು ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀಮತಿ ಶಾಂಭವಿ ಬೆಂಗ್ರೆಯವರು ಆಟಿ ತಿಂಗಳಲ್ಲಿ ತಿನ್ನುವ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ರೋಹಿಣಿ ಕೋಟ್ಯಾನ್ ಅವರು ಮಹಿಳಾ ವಿಭಾಗದ ಎಲ್ಲಾ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾದುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳು
ನಿರಂತರವಾಗಿರಲಿ ಎಂದರು.

ಮುಖ್ಯ ಅತಿಥಿ ಡಾ.ಜಿ.ಪಿ.ಕುಸುಮಾ ಅವರು ಮಾತನಾಡುತ್ತಾ ತುಳುನಾಡಿನ ಜನರು ಎಲ್ಲೇ ನೆಲೆನಿಂತರೂ ಕೂಡಾ ತಮ್ಮ ಸಂಸ್ಕೃತಿಯನ್ನು ಬಾಹ್ಯಲೋಕಕ್ಕೆ ಪರಿಚಯಿಸುತ್ತಾರೆ. ಮುಂಬಯಿ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಟಿಕೂಟದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಸಂಸ್ಕಾರಗಳನ್ನು ಉಳಿಸಿ ಬೆಳೆಸಲು ಪ್ರಯತ್ನ ಪಡುತ್ತಿದ್ದಾರೆ. ಆಟಿ ತಿಂಗಳಲ್ಲಿ ಬರುವ ಜಡಿಮಳೆಯಿಂದ ಜನರೆಲ್ಲ ಮನೆಯಲ್ಲಿಯೇ ಇರುವಂತಹ ಪರಿಸ್ಥಿತಿ ಆಗುತ್ತಿತ್ತು. ಆ ಸಮಯದಲ್ಲಿ ಆಗುವ ಪ್ರಕೃತಿಯ ನೈಸರ್ಗಿಕ ಬದಲಾವಣೆ ಮತ್ತು ಶಾರೀರಿಕ ಬದಲಾವಣೆಗೆ ನಿಸರ್ಗದಲ್ಲಿ ಸಿಗುವ ಸೊಪ್ಪುಗಳನ್ನು ಪದಾರ್ಥವಾಗಿ ಉಪಯೋಗಿಸುತ್ತಿದ್ದರು. ಹಾಳೆಮರದ ಕಷಾಯ ಕುಡಿದು ಆರೋಗ್ಯವನ್ನು ರಕ್ಷಿಸುತ್ತಿದ್ದರು. ಆಟಿ ತಿಂಗಳಲ್ಲಿ ಖರ್ಚಿಗೆ ಹಣವಿರುತ್ತಿರಲಿಲ್ಲ. ಆಟಿ ತಿಂಗಳು ದುಃಖ ದುರಿತಗಳನ್ನು ಎದುರಿಸಿ ಆತ್ಮಸ್ಥೈರ್ಯದ ಬದುಕು ಕಟ್ಟುವ ಕಾಲ.ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ಬೇರುಗಳನ್ನು ಮರೆಯದೆ ಯುವ ಪೀಳಿಗೆಗೆ ತುಳುನಾಡಿನ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇಂದಿನ ಕಾರ್ಯಕ್ರಮವನ್ನು ಒಗ್ಗಟ್ಟಿನ ಮೂಲಕ ಆಚರಿಸಿ ಸಾಮಾಜಿಕ ಕಳಕಳಿ ಬಿಂಬಿಸುತ್ತಿರುವ ಹೊಸಬೆಟ್ಟು ಮೊಗವೀರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಎಂದು ಹೇಳುತ್ತಾ ಸಮಾರಂಭಕ್ಕೆ ಆಹ್ವಾನಿಸಿ ಗೌರವಿಸಿದ್ದಕ್ಕೆ ಆಯೋಜಕರಿಗೆ ಆಭಾರ ವ್ಯಕ್ತಪಡಿಸಿದರು. ಶ್ರೀಮತಿ ಪೂರ್ಣಿಮಾ ಕಾಂಚನ್ ಅವರು
ಡಾ. ಜಿ ಪಿ ಕುಸುಮಾ ಅವರನ್ನು ಪರಿಚಯಿಸಿದರು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಕುಮಾರಿ ಸಾಯಿಲಿ ಮಾಯೇಕರ್ ಮತ್ತು ಶ್ರೀಮತಿ ವಿನಯ ಲೋಕನಾಥ ಪುತ್ರನ್ ಅವರು ಜಾನಪದ ನೃತ್ಯದ ಸೊಬಗನ್ನು ಸಭಿಕರಿಗೆ ನೀಡಿದರು. ಶ್ರೀಮತಿ ಸುಜಾತ ಪುತ್ರನ್, ಶ್ರೀಮತಿ ಶಶಿಕಲಾ ಮೆಂಡನ್, ಶ್ರೀಮತಿ ಪೂರ್ಣಿಮಾ ಕಾಂಚನ್ ಮತ್ತು ಕುಮಾರಿ ಆಧ್ಯರವರು ತಮ್ಮ ಹಾಡಿನ ಮೂಲಕ ಸಭಿಕರನ್ನು ರಂಜಿಸಿದರು. ಮಾಸ್ಟರ್ ಹರ್ಷಿದ್ ಸಾಲ್ಯಾನ್ ರವರು ಆಟಿಕಳೆಂಜನ ವೇಷ ಧರಿಸಿ ತಮ್ಮ ನೃತ್ಯದ ಮೂಲಕ ಎಲ್ಲರ ಮನಗೆದ್ದರು. ಶ್ರೀಮತಿ ರೋಹಿಣಿ ಕೋಟ್ಯಾನ್ ಮತ್ತು ಶ್ರೀಮತಿ ಕುಮುದ ಕುಂದರ್ ರವರು ತುಳು ಪಾಡ್ದನವನ್ನು ಬಹಳ ಸೊಗಸಾಗಿ ಹಾಡಿದರು. ಆಟಿ ಕಳಂಜನ ದೈವಿಕ ಮಹತ್ವದ ಕುರಿತಾದ ಮಾಹಿತಿಯನ್ನು ಶ್ರೀ ಸತೀಶ್ ಕುಂದರ್ ಅವರು ನೀಡಿದರು.

ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಶ್ರೀ ಸುಭಾಷ್ ಎಚ್, ಶ್ರೀ ಚಂದ್ರಕಾಂತ್ ಕರ್ಕೇರ ಹಾಗೂ ಶ್ರೀ ಮನೋಜ್ ಮೆಂಡನ್ ಅವರುಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಮಹಿಳಾ ಸಂಘದವರು ತುಳು ಸಂಸ್ಕೃತಿಯ ಇಂತಹ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಶ್ರೀಮತಿ ಅಂಬಾ ಕೇಶವ ಕಾಂಚನ್ ಅವರು ಅಭಿನಂದಿಸಿದರು.

ಮಹಿಳಾ ಸಂಘದ ಎಲ್ಲಾ ಸದಸ್ಯರ ಒಗ್ಗಟ್ಟು ಹಾಗೂ ಸಹಕಾರದೊಂದಿಗೆ ಕಾರ್ಯಕ್ರಮವು ಸುವ್ಯವಸ್ಥಿತವಾಗಿ ಆಯೋಜಿಸಲ್ಪಟ್ಟಿತು.
ಮಹಿಳಾ ಸದಸ್ಯರು ತಯಾರಿಸಿದ ವಿವಿಧ ವ್ಯಂಜನಗಳೊಂದಿಗೆ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮತಿ ರೇಣುಕಾ ಸುಧೀರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ಸುಲಭ ಕರ್ಕೇರ ಅವರು ವಂದನಾರ್ಪಣೆ ನೀಡುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.



Related posts

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್- ನಾಲಾಸೋಪಾರ: ಯಕ್ಷಗಾನ  ಶಿಬಿರ, ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ :

Mumbai News Desk

ಡೊಂಬಿವಿಲಿಯಲ್ಲೊಂದು ಸುಂದರ ಯಕ್ಷ ಸಂಜೆ…

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, 88 ನೇ ವಾರ್ಷಿಕೋತ್ಸವ

Mumbai News Desk

‘ಧೀಮಂತ ಧರ್ಮಪಾಲ’ ಗೌರವ ಗ್ರಂಥ ಲೋಕಾರ್ಪಣೆ ಯಶಸ್ವಿ: ಸ್ನೇಹಕೂಟ

Mumbai News Desk

ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ  ಸ್ನೇಹ ಸಮ್ಮಿಲನ, ಸಾಂಸ್ಕೃತಿಕ ವೈಭವ,

Mumbai News Desk