September 6, 2026
Mumbai News Kannada
ಮುಂಬಯಿ

ಕಾಪು ಮೊಗವೀರ ಮಹಾಸಭಾ, ಮುಂಬಯಿ ಇದರ 85 ನೇ ವಾರ್ಷಿಕ ಮಹಾಸಭೆ





ಮುಂಬಯಿಯ ಅತ್ಯಂತ ಕ್ರಿಯಾಶೀಲ ಮೊಗವೀರ ಗ್ರಾಮಸಭೆಗಳ ಪೈಕಿ ಒಂದಾಗಿರುವ ಕಾಪು ಮೊಗವೀರ ಮಹಾಸಭಾ ಮುಂಬಯಿ ಇದರ 85ನೇ ವಾರ್ಷಿಕ ಮಹಾ ಸಭೆಯು ರವಿವಾರ ದಿನಾಂಕ ಮೇ 31, 2026 ರಂದು ಬೆಳಗ್ಗೆ ಗಂಟೆ 10.00ಕ್ಕೆ ಅಂಧೇರಿ [ಪಶ್ಚಿಮ]ಯ ಮೊಗವೀರ ಭವನಲ್ಲಿ ಸಭಾದ ಅಧ್ಯಕ್ಷರಾದ ಸತೀಶ್‌ಕುಮಾರ್‌ ಎನ್‌.ಕರ್ಕೇರ ಅಧ್ಯಕ್ಷತೆಯಲ್ಲಿ ಜರಗಿತು.
ಆರಂಭದಲ್ಲಿ ಸಭಾದ ಕಾರ್ಯದರ್ಶಿ ರೂಪೇಶ್‌ ಸುವರ್ಣರು ನೆರೆದ ಸದಸ್ಯರನ್ನು ಹಾರ್ದಿಕವಾಗಿ ಸ್ವಾಗತಿಸಿ ಬಳಿಕ ಸಭಾದ ಗತವರ್ಷದ ವಾರ್ಷಿಕ ವರದಿ ಹಾಗೂ ಕಾರ್ಯಚಟುವಟಿಕೆಯ ವಿವರಗಳನ್ನುಸಭೆಯ ಮುಂದಿರಿಸಿದರು. ಇವನ್ನು ಸರ್ವಾನುಮತದಿಂದ ಮಂಜೂರು ಮಾಡಲಾಯ್ತು. ತದ ನಂತರ ಕೋಶಾಧಿಕಾರಿ ಉಮೇಶ ಎನ್‌.ಕರ್ಕೇರರು ಗತ ವರ್ಷದ ಲೆಕ್ಕ ಪತ್ರಗಳನ್ನುಸಭೆಯ ಎದುರು ಮಂಡಿಸಿದರು. ಈ ಬಗ್ಗೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ವಿವರಣೆಗನ್ನು ನೀಡಿದ ನಂತರ ಲೆಕ್ಕ ಪತ್ರವನ್ನುಸರ್ವಾನುಮತದಿಂದ ಮಂಜೂರು ಮಾಡಲಾಯ್ತು.
ಕಾಪು ಪಡಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈ ವರ್ಷ ಶತಮಾನೋತ್ಸವನ್ನು ಆಚರಿಸುತ್ತಿದ್ದು ಈ ಕುರಿತು ಸಭೆಯಲ್ಲಿ ಚರ್ಚಿಸಲಾಗಿ ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಇತರ ದಾನಿಗಳಿಂದ ಧನ ಸಂಗ್ರಹ ಮಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರಗಿಸಲು ನಿರ್ಧರಿಸಲಾಯ್ತು .


ಇನ್ನಿತರ ವಿಷಯ ಕಾರ್ಯಕ್ರಮದಲ್ಲಿ ಡಿ.ಎಲ್‌.ಅಮೀನ್‌, ರತ್ನಾಕರ ಎ.ಕರ್ಕೇರ, ಯಶೋಧರ ಕೊಟ್ಯಾನ್‌, ರವಿ ದಾಸ ಸಾಲ್ಯಾನ್‌, ಮೋಹನ ಮೆಂಡನ್‌, ನಿತೇಜ್‌ ಕರ್ಕೇರ, ರಮೇಶ ಕರ್ಕೇರ, ಆನಂದ ಕೋಟ್ಯಾನ್‌, ಸೋಮನಾಥ ಎಸ್‌.ಕರ್ಕೇರ, ಸುಕುಮಾರ ಕರ್ಕೇರ ಮುಂತಾದ ಸದಸ್ಯರು ಮಾತನಾಡಿ ಸಭೆಯ ಏಳಿಗೆಯ ಬಗ್ಗೆತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸತೀಶ್‌ಕುಮಾರ್‌ ಎನ್‌.ಕರ್ಕೇರರು ಮಾತನಾಡತ್ತಾ ಒಂದು ಸಂಸ್ಥೆಯನ್ನು ನಡೆಸುವುದು ಸುಲಭದ ಕೆಲಸವಲ್ಲ. ಅಲ್ಲಿ ಕೆಲಸ ಮಾಡುತ್ತಿರುವಾಗ ಪ್ರಶಂಸೆ ಹಾಗೂ ಟೀಕೆ ಟಿಪ್ಪಣಿಗಳು ಬರುವುದು ಸಹಜ. ಅವೆಲ್ಲನ್ನೂ ಸಂತೋಷದಿಂದ ಸ್ವಾಗತಿಸಿ ಸಂಸ್ಥೆಯ ಕೆಲಸಕಾರ್ಯಗಳನ್ನು ಮುಂದುವರಿಸಿ ಸಮಾಜದ ಉನ್ನತಿಗಾಗಿ ದುಡಿಯಬೇಕೆಂದು ಅವರು ಸದಸ್ಯರಿಗೆ ಕರೆ ಇತ್ತರು. ಈ ಸಂದರ್ಭದಲ್ಲಿ ಕಳೆದ ಕೆಲವು ವರ್ಷಗಳಿಂದ ಸಭಾದ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸತೀಶ್‌ಕುಮಾರ್‌ ಎನ್‌.ಕರ್ಕೇರನ್ನು ಸಭಾದ ಹಿರಿಯ ಸದಸ್ಯರು ಹಾಗೂ ಮಾಜೀ ಕಾರ್ಯದರ್ಶಿಯವರೂ ಆಗಿರುವ ಸೋಮನಾಥ ಎಸ್‌.ಕರ್ಕೇರು ಹೂಗುಚ್ಛ ನೀಡಿ ಗೌರವಿಸಿದರು.
ಸುಕುಮಾರ ಗುರಿಕಾರ,ಉಪಾಧ್ಯಕ್ಷರುಗಳಾದ ನೀಲಾಧರ ಎಮ್‌.ಸಾಲ್ಯಾನ್‌, ಯಶೋಧರ ಕೋಟ್ಯಾನ್‌, ಉಮೇಶ್‌ ಕರ್ಕೇರರು ವೇದಿಕೆಯಲ್ಲಿದ್ದರು.
ಕೊನೆಯಲ್ಲಿ ಕಾರ್ಯದರ್ಶಿ ರೂಪೇಶ್‌ ಸುವರ್ಣರು ವಂದನಾರ್ಪಣೆ ಮಾಡಿದರು. ಸದಸ್ಯರಿಗಾಗಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.


ವರದಿ :ಸೋಮನಾಥ ಎಸ್‌.ಕರ್ಕೇರ, 9819321186



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಭೂಮಿಕಾ ಭಂಡಾರಿ  ಗೆ ಶೇ 93 ಅಂಕ.

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು : ನಾನಿಲ್ತಾರ್ನಲ್ಲಿ  ಸ್ನೇಹ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ , ವರ್ಲಿ : ಮಹಿಳಾ ವಿಭಾಗದ ವತಿಯಿಂದ ಆಟಿದ ಕೂಟ.ಆಟಿದ ಕೂಟದ  ಮೂಲಕ ಸಂಬಂಧಗಳು ಗಟ್ಟಿಯಾಗುತ್ತದೆ – ರಮೇಶ್ ಗುರುಸ್ವಾಮಿ

Mumbai News Desk

ಕಲಾ ಜಗತ್ತು ಮುಂಬಯಿ ಮತ್ತು ಡಾ. ಸದಾನಂದ ಶೆಟ್ಟಿ ಅಭಿನಂದನಾ ಬಳಗ ಇವರ ಸಹಯೋಗದಲ್ಲಿ ಡಾ. ಸದಾನಂದ ಶೆಟ್ಟಿ ಯವರಿಗೆ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ.

Mumbai News Desk

ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 65ನೇ ವಾರ್ಷಿಕ ಮಂಗಳೋತ್ಸವ ಸಂಪನ್ನ.

Mumbai News Desk

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ: ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನ್ಯೂ ಪನ್ವೇಲ್‌ನ ಮಾಜಿ ಕಾರ್ಪೊರೇಟರ್ ಸಂತೋಷ್ ಜಿ ಶೆಟ್ಟಿ

Mumbai News Desk