35 C
Mumbai
October 4, 2026
Mumbai News Kannada
ಪ್ರಕಟಣೆ

ಮೊಗವೀರ ಮಹಾಜನ ಸೇವಾ ಬಗ್ವಾಡಿ ಹೋಬಳಿ , ಮುಂಬೈ : ಆ.22ರಂದು ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ವೈಭವ



ಮುಂಬಯಿ, ಆ.14: ಮುಂಬಯಿಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆ. 22ರ ಸಂಜೆ 4 ಕ್ಕೆ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಂಗಣದಲ್ಲಿ ನಡೆಯಲಿದೆ.


ಸಂಘದ ಅಧ್ಯಕ್ಷ ಸಂತೋಷ್ ಕೆ.ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸಂಘದ ಗೌರವಾಧ್ಯಕ್ಷ ಸುರೇಶ್ ಆರ್. ಕಾಂಚನ್ , ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ|ಜಿ.ಶಂಕರ್ ಮತ್ತು ಜನತಾ ಫಿಶ್ ಮೀಲ್ಸ್ ಮತ್ತು ಆಯಿಲ್ ಪ್ರೊಡಕ್ಟ್ ಕೋಟ ಇದರ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್, ಗೌರವ ಅತಿಥಿಗಳಾಗಿ ದಿವ್ಯಾಶಿಪ್ಪಿಂಗ್ ಕಂಪೆನಿ ಪ್ರೈ.ಲಿಮಿಟೆಡ್ ನ ಎಂ.ಡಿ. ವೇದ ಪ್ರಕಾಶ ಶ್ರೀಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಅಜಿತ್ ಜಿ.ಸುವರ್ಣ,ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಗಣೇಶ ಕಾಂಚನ್, ಬಂಗೇರ ಒವರ್ಸಿಸ್ ಲಿಮಿಟೆಡ್ ನ ಎಂ.ಡಿ ಕಿಶೋರ್ ಬಂಗೇರ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಮಾಜಿ ಅಧ್ಯಕ್ಷರುಗಳಾದ ಗೋಪಾಲ ಎಸ್ .ಪುತ್ರನ್, ಮಹಾಬಲ ಎಂ.ಕುಂದರ್, ರಮೇಶ್ ಎಂ.ಬಂಗೇರ, ರಾಜು ಮೆಂಡನ್ ವಂಡ್ಸೆ,ಫೆರ್ಮಾನಲಾ ಬಾಯೋಟೆಕ್ ಲಿಮಿಟೆಡ್ ನ ಪ್ರದೀಪ್ ಚಂದನ್, ಬಾಂಬೇ ಹೈಕೋರ್ಟ್ ವಕೀಲ ಸಿ.ಕೆ.ನಾಯ್ಕ್, ಟಾಟಾ ಕೆಮಿಕಲ್ ಲಿಮಿಟೆಡ್ ನ ಮಾಜಿ ಸಿಎಸ್. ರಾಜೀವ್ ಎಂ. ಚಂದನ್, ಮೊಗವೀರ ಮಹಾಜನ ಸೇವಾ ಸಂಘ ಡೊಂಬಿವಲಿ ಶಾಖೆಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್ ಎನ್. ಕಾಂಚನ್ ಪಾಲ್ಗೊಳ್ಳಲಿದ್ದಾರೆ.


ಈ ಸಂದರ್ಭದಲ್ಲಿ ಸಂಘದ ಕಾಂಚನಿ ಕಲಾ ಕೇಂದ್ರ ಹಾಗೂ ವಾಗ್ವಾರ್ಧಿನಿ ಸಭೆಯ ವತಿಯಿಂದ ಸಮಾಜದ 13ಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ, ಮಹಿಳೆಯರು ಹಾಗೂ ಪುರುಷರಿಗಾಗಿ ಆಶು ಭಾಷಣ ಸ್ಪರ್ಧೆ, ಸಂಗೀತ ಸ್ಪರ್ಧೆ,
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಾಜದ ಮಕ್ಕಳಿಂದ ನೃತ್ಯ ಸಂಭ್ರಮ, ಯಕ್ಷಗಾನ ನಾಟ್ಯ ವೈಭವ ಹಾಗೂ ಕುಂದಾಪ್ರ ಕನ್ನಡದಲ್ಲಿ ಹಾಸ್ಯ ಪ್ರಹಸನ ಪಾತ್ರಿ ಪಾಂಡು ನಡೆಯಲಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಹಾಗೂ ಉದ್ಯೋಗದ ಬಗ್ಗೆ ಖ್ಯಾತ ಶಿಕ್ಷಣ ತಜ್ಞರಾದ ಫೋರ್ಟ್ ಕನ್ನಡ ಭವನ ಎಜುಕೇಶನ್ ಸೊಸೈಟಿ ಇದರ ಪ್ರಾಂಶುಪಾಲೆ ಅಮೃತ ಅಜಯ್ ಶೆಟ್ಟಿ ಹಾಗೂ ಕ್ರೀಸ್ ಪಾಥ್ ಪೈಂಡರ್ ಇದರ ಸಂಸ್ಥಾಪಕ ಹಾಗೂ ಕರಿಯರ್ ಕೌನ್ಸಲರ್ ಪ್ರಸಿಲಾ ರಮಣಿ ಅವರು
ವಿಶೇಷ ಮಾಹಿತಿ ನೀಡಲಿದ್ದಾರೆ. ಸಮಾಜದ ಎಲ್ಲಾ ಬಂಧು-ಬಾಂಧವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷರಾದ ಸಂತೋಷ್ ಕೆ. ಪುತ್ರನ್, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಾಧಿಕಾರಿ ನಾಗರಾಜ್ ಶ್ರೀಯಾನ್, ಕಾಂಚನಿ ಕಲಾ ಕೇಂದ್ರದ ಕಾರ್ಯದರ್ಶಿ ಭಾಸ್ಕರ್ ಶ್ರೀಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್.ನಾಯ್ಕ್ , ಮೀರಾ ರೋಡ್ ಶಾಖೆಯ ಕಾರ್ಯಾಧ್ಯಕ್ಷ ರಘುರಾಮ್ ಚಂದನ್, ಥಾಣೆ ಶಾಖೆಯ ಕಾರ್ಯಾಧ್ಯಕ್ಷ ಅವಿನಾಶ್ ಪುತ್ರನ್, ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷ ರಾಜು ಮೊಗವೀರ ತಗ್ಗರ್ಸೆ ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) : ಫೆ. 8ರಂದು ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ

Mumbai News Desk

ಸೆ.6: ಮೀರಾ ರೋಡ್‌ನಲ್ಲಿ ಶ್ರೀ ನಾರಾಯಣ ಗುರುಗಳ 172 ನೇ ಜನ್ಮ ದಿನಾಚರಣೆ ಹಾಗೂ ನಾರಾಯಣ ಗುರು ಭಜನಾ ಮಂಡಲ್ ಮೀರಾ ರೋಡ್ ಘಟಕದ ಉದ್ಘಾಟನೆ

Mumbai News Desk

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಡಾ.ಎಂ. ಅಣ್ಣಯ್ಯ ಕುಲಾಲ್ ಅವರು “ವೈದ್ಯ ಸಿಂಧೂರ” ಪ್ರಶಸ್ತಿ

Mumbai News Desk

ನ. 8-9, ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ66ನೇ ವಾರ್ಷಿಕ ಮಂಗಳೋತ್ಸವ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk