August 20, 2026
Mumbai News Kannada
ಪ್ರಕಟಣೆ

ದಹಿಸರ್ ಪೂರ್ವ, ರಾವಲ್ಪಾಡ: ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ ಆ. 22ರಂದು 27ನೇ ವರ್ಷದ ಶ್ರೀ ಶನಿಗ್ರಂಥ ಪಾರಾಯಣ ಪೂಜೆ





ದಹಿಸರ್ (ಮುಂಬೈ): ದಹಿಸರ್ ಪೂರ್ವದ ರಾಧಾಕೃಷ್ಣ ನಗರ, ಎಸ್. ಎನ್. ದುಬೆ ಮಾರ್ಗ, ರಾವಲ್ಪಾಡದಲ್ಲಿ ಸುಮಾರು 26 ವರ್ಷಗಳ ಹಿಂದೆ ಚೆನ್ನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ, ಪ್ರತಿವರ್ಷದಂತೆ ಈ ಬಾರಿಯೂ ಶ್ರಾವಣ ಮಾಸದ ಪ್ರಯುಕ್ತ 27ನೇ ವರ್ಷದ ಶ್ರೀ ಶನಿಗ್ರಂಥ ಪಾರಾಯಣ ಪೂಜೆಯು ಇದೇ ಶನಿವಾರ, ಆಗಸ್ಟ್ 22ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಕಾರ್ಯಕ್ರಮಗಳ ವಿವರ:

  • ಬೆಳಿಗ್ಗೆ 7:00 ರಿಂದ: ಶ್ರೀ ಗಣಪತಿ, ಶ್ರೀ ಶನೀಶ್ವರ ದೇವರು, ಶ್ರೀ ಚಾಮುಂಡೇಶ್ವರಿ ದೇವಿ ಹಾಗೂ ಚಾಮುಂಡಿ-ಗುಳಿಗ ದೈವಗಳಿಗೆ ಪಂಚಾಮೃತ ಅಭಿಷೇಕ.
  • ಮಧ್ಯಾಹ್ನ 2:00 ರಿಂದ ಸಂಜೆ 6:00 ರವರೆಗೆ: ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ.
  • ರಾತ್ರಿ 7:30 ರಿಂದ: ಚಾಮುಂಡಿ-ಗುಳಿಗ ದೈವಗಳ ಆರಾಧನೆ, ಆವೇಶ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.

ಕ್ಷೇತ್ರದ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು-ಮನ-ಧನಗಳಿಂದ ಸಹಕರಿಸಿ, ಗಂಧ-ಪ್ರಸಾದ ಸ್ವೀಕರಿಸಿ ಶ್ರೀ ದೈವ-ದೇವರುಗಳ ಕೃಪಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ಆಡಳಿತ ಮಂಡಳಿ ಕೋರಿದೆ.



Related posts

ಡಿ.25 ರಂದು ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಕಲ್ಯಾಲು, ಇನ್ನಂಜೆ – ನೇಮೋತ್ಸವ.

Mumbai News Desk

ಸೆ.7: ಸಾಫಲ್ಯ ಸೇವಾ ಸಂಘ, ಮುಂಬೈ – ವಿದ್ಯಾರ್ಥಿ ಸಹಾಯಧನ, ಮಹಿಳೆಯರಿಗೆ ಘರ್‌ಘಂಟಿ ವಿತರಣೆ ಹಾಗೂ ನಾನಾ ಸಮಾಜಮುಖಿ ಕಾರ್ಯಕ್ರಮಗಳು

Mumbai News Desk

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಜೀವ ರಕ್ಷಕ, ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ 10ನೇ ಮೂಲತ್ವ ವಿಶ್ವ ಪ್ರಶಸ್ತಿ 2024

Mumbai News Desk

ತೋಡಾರು ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಶ್ರೀ ಬೈದರ್ಕಳ ಗರಡಿ : ಡಿ 22ರಿಂದ 26ವರೆಗೆ ಕಾಲಾವಧಿ ಜಾತ್ರೆ

Mumbai News Desk

ಜು. 20 : ಸಯಾನ್ ನ ಶ್ರೀ ನಿತ್ಯಾನಂದ ಸಭಾಗ್ರಹದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗೆ ಗುರುವಂದನೆ.

Mumbai News Desk