October 17, 2026
Mumbai News Kannada
ತುಳುನಾಡು

ತೋಕೂರು ಮದ್ದೇರಿ ದೈವಸ್ಥಾನದ ಗೌ.ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ, ಅಧ್ಯಕ್ಷರಾಗಿ ಹರಿಪ್ರಸಾದ್ ಜಿ. ಶೆಟ್ಟಿ ಆಯ್ಕೆ



ಹಳೆಯಂಗಡಿ: ತೋಕೂರು ಮದ್ದೇರಿ ದೈವಸ್ಥಾನದ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ಆ 30 ರಂದು ಪೂರ್ವಾಹ್ನ ಗಂಟೆ 10ಕ್ಕೆ ಸರಿಯಾಗಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಜರಗಿತು. ಮದ್ದೇರಿ ದೈವಸಾನದ ಅಧ್ಯಕ್ಷರಾದ ಪದ್ಮನಾಭ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ತೋಕೂರು ಗುತ್ತು ಹೊಸಮನೆ ಹರಿಪ್ರಸಾದ್ ಜಿ. ಶೆಟ್ಟಿ,
ಗೌ.ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ ,
ಉಪಾಧ್ಯಕ್ಷರಾಗಿ ಹೇಮನಾಥ ಅಮೀನ್ , ಮೋಹನ್ ದಾಸ್, ಕಾರ್ಯದರ್ಶಿಯಾಗಿ ಸಂತೋಷ್ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ, . ಕೋಶಾಧಿಕಾರಿಯಾಗಿ ಪುರುಷೋತ್ತಮ ಕೋಟ್ಯಾನ್, ಜೊತೆ ಕೋಶಾಧಿಕಾರಿಯಾಗಿ ಜಗದೀಶ್ ಕುಲಾಲ್ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಗುರುರಾಜ್ ಎಸ್. ಪೂಜಾರಿ, ಪ್ರಭಾಕರ್ ರಾವ್ ಕಂಬಳ ಬೆಟ್ಟು, ಪುರುಷೋತ್ತಮ ಶೆಟ್ಟಿಮೂಡುಮನೆ ,ಸಂಪತ್ ಜೆ.ಶೆಟ್ಟಿ ತೋಕೂರು ಗುತ್ತು ಇವರುಗಳನ್ನು ಆಯ್ಕೆ ಮಾಡಲಾಯಿತು . ಇದೇ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಯಿತು.
ಸಭೆಯಲ್ಲಿ ಪದ್ಮನಾಭ ಆಚಾರ್ಯ ಸ್ವಾಗತಿಸಿದರು. ಪುರುಷೋತ್ತಮ ಕೋಟ್ಯಾನ್ ಲೆಕ್ಕಪತ್ರ ಮಂಡಿಸಿದರು. ಹೇಮನಾಥ ಅಮೀನ್ ವಂದಿಸಿದರು ಸಮಿತಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು



Related posts

ಚಂದ್ರಶೇಖರ ಬೆಳ್ಚಡ ಸಾರಥ್ಯದಲ್ಲಿ ಕಟೀಲಿನಲ್ಲಿ 50ನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮ.

Mumbai News Desk

ಮುಲ್ಕಿ : ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ – ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಅವರಿಗೆ ಸನ್ಮಾನ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk

ಗುರುಪುರ ಬಂಟರ ಮಾತೃ ಸಂಘ – ಹನ್ನೊಂದನೇ ವಾರ್ಷಿಕ ಸಮಾವೇಶ

Mumbai News Desk

ಕನ್ನಡ ಕಿರುತೆರೆ ನಟಿ, ‘ಬಿಗ್ ಬಾಸ್’ ಖ್ಯಾತಿಯ ಕಾವ್ಯ ಶಾಸ್ತ್ರೀ ಅವರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಿಗೆ ವಿಶೇಷ ಪೂಜೆ: ನವದುರ್ಗಾ ಲೇಖನ ಸಮರ್ಪಣೆ

Mumbai News Desk

ಗಾಣಿಗರ ಸೇವಾ ಸಂಘ ಪಾಣೆಮಂಗಳೂರು: ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಹಾಗೂ ನವೀಕೃತ ಸುಮಂಗಲ ಕಲ್ಯಾಣ ಮಂಟಪದ ಲೋಕಾರ್ಪಣೆ

Mumbai News Desk