September 7, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಇದರ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ





ಚಿತ್ರ,ವರದಿ : ಉಮೇಶ್ ಕೆ. ಅಂಚನ್

ಮೀರಾರೋಡ್, ಸೆ.7:ಬಿಲ್ಲವರ ಅಸೋಸಿಯೇಶನ್ ಇದರ ಮೀರಾರೋಡ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತ್ಯೋತ್ಸವವನ್ನು ಮೀರಾರೋಡ್ ಪೂರ್ವ ಸಾಯಿಬಾಬಾ ನಗರದ ಸೈಂಟ್ ಥೋಮಸ್ ಚರ್ಚಿನ ಸಭಾಗ್ರಹದಲ್ಲಿ ಶನಿವಾರ ಸೆ.5ರಂದು ವಿಜ್ರಂಭಣೆಯಿಂದ ಆಚರಿಸಲಾಯಿತು.
ಆರಂಭದಲ್ಲಿ ಕಚೇರಿಯ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಜಯ ಅಮೀನ್ ರವರಿಂದ ಗುರು ಪೂಜೆ ನಡೆಯಿತು. ಸ್ಥಳೀಯ ಕಚೇರಿಯ ಸದಸ್ಯ ಸದಸ್ಯೆಯರಿಂದ ಭಜನೆ, ಮಹಿಳಾ ವಿಭಾಗ,ಯುವ ವಿಭಾಗ ಹಾಗೂ ಪುಟಾಣಿಗಳಿಂದ ಕುಣಿತ ಭಜನೆ,ಓಂ ನಮೋ ನಾರಾಯಣಾಯ ಶಿವಾಯ ಜಪ ಯಜ್ಞ, ಹಾಗೂ ಬುವಾಜಿ ವಿಜಿತೇಂದ್ರ ಸನಿಲ್ ರವರಿಂದ ಮಹಾ ಮಂಗಳಾರತಿ ನಡೆಯಿತು .ಸದಾನಂದ್ ಪೂಜಾರಿ, ಜೀವನ್ ಅಮೀನ್ ಪೂಜಾ ಕಾರ್ಯದಲ್ಲಿ ಸಹಕರಿಸಿದ್ದರು. ಕೊನೆಯಲ್ಲಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಕಚೇರಿಯ ಪದಾಧಿಕಾರಿಗಳು ದಾನಿಗಳನ್ನು, ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ವಿವಿಧ ಅಸೋಸಿಯೇಶನಿನ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳನ್ನು ಗುರುಪ್ರಸಾದ ನೀಡಿ ಗೌರವಿಸಿದರು.


ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ಹರೀಶ್ ಜಿ.ಅಮೀನ್ , ಉಪಾಧ್ಯಕ್ಷ ಮೋಹನ್ ಸಿ.ಕೋಟ್ಯಾನ್ , ಗೌ.ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಗೌ.ಕೋಶಾಧಿಕಾರಿ ರವಿ ಸನಿಲ್, ಜೊತೆ ಕಾರ್ಯದರ್ಶಿ ಕೇಶವ್ ಕೋಟ್ಯಾನ್, ಜೊತೆ ಕೋಶಾಧಿಕಾರಿ ಜಿ.ಕೆ.ಕೆಂಚನಕೆರೆ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಭಾರತಿ ಅಂಚನ್ ,ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಅಂಚನ್, ಶೈಕ್ಷಣಿಕ ಉಪಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ತೋನ್ಸೆ,ಯುವಾಭ್ಯುದಯ ಉಪಸಮಿತಿಯ ಕಾರ್ಯದರ್ಶಿ ಯೋಗೀಶ್ ಪೂಜಾರಿ, ಕಾರ್ಯಕಾರಿ ಸಮಿತಿಯ ರಜಿತ್ ಸುವರ್ಣ, ತುಳುನಾಡ ಸೇವಾ ಸಮಾಜದ ಅಧ್ಯಕ್ಷ ಡಾ. ರವಿರಾಜ್ ಸುವರ್ಣ, ಸಮಾಜ ಸೇವಕ ಸಚಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಬಂಟ್ಸ್ ಫೋರಮ್ ಮೀರಾಬಾಯಿ ದೂರಿನ ಸ್ಥಾಪಕ ಸಂತೋಷ್ ರೈ ಬೆಳ್ಳಿಪ್ಪಾಡಿ, ಅಧ್ಯಕ್ಷ ಉದಯ್ ಎಮ್ ಶೆಟ್ಟಿ , ಬಂಟರ ಸಂಘದ ಮೀರಾಬಾಯಂದರ್ ಪ್ರಾದೇಶಿಕದ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರು ಪಾಡಿ, ಸಮಾಜ ಸೇವಕಿ ಸಂಜನಾ ಕಟಾವಟೆ,ರೇಖಾ ಪೂಜಾರಿ,ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಗುರು ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ಕಚೇರಿಯ ಗೌರವಕಾರ್ಯಾಧ್ಯಕ್ಷ ಭೋಜ ಬಿ.ಸಾಲ್ಯಾನ್, ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕರ್ಕೇರ, ಉಪಕಾರ್ಯಾಧ್ಯಕ್ಷರುಗಳಾದ ಎನ್.ಪಿ.ಕೋಟ್ಯಾನ್ ಮತ್ತು ದಿನೇಶ್ ಎಸ್.ಸುವರ್ಣ, ಕಾರ್ಯದರ್ಶಿ ಜಯಲಕ್ಷ್ಮಿ ಎಸ್.ಸಾಲ್ಯಾನ್ , ಜೊತೆ ಕಾರ್ಯದರ್ಶಿ ಶೋಭಾ ಎಚ್.ಪೂಜಾರಿ, ಕೋಶಾಧಿಕಾರಿ ವಿಶ್ವನಾಥ್ ಮಾಬಿಯಾನ್ , ಜೊತೆ ಕೋಶಾಧಿಕಾರಿ ಲೀಲಾಧರ್ ಸನಿಲ್, ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.



Related posts

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಸಂಚಾಲಿತ ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿಯ 49ನೇ ವಾರ್ಷಿಕ ಮಹಾಸಭೆ ಯಶಸ್ವಿ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನನ್ಯ ರಾಜು ಪೂಜಾರಿ ಗೆ ಶೇ. 86.60 ಅಂಕ.

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ: ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಮಹಿಳೆಯರಿಗೆ ಫರ್‌ಘಂಟಿ ವಿತರಣೆ

Mumbai News Desk

ಬಂಟರ ಸಂಘ ಮುಂಬಯಿ – ವಸಯಿ ಡಹಣು ಪ್ರಾದೇಶಿಕ ಸಮಿತಿಯ ವತಿಯಿಂದ ವಿಶ್ವ ಯೋಗ ದಿನಾಚರಣೆ. 

Mumbai News Desk

ಬೊರಿವಲಿ ಶ್ರೀ ಜಗದೀಶ್ವರಿ ಸೇವಾ ಸಮಿತಿ ಮತ್ತು ಬ್ರಹ್ಮ ಬೈದರ್ಕಲ ಗರಡಿ ದೇವಲಪಾಡ, 52 ನೇ ವಾರ್ಷಿಕ ಮಹಾಸಭೆ

Mumbai News Desk

ಮುಂಬೈನ ‘ಪಗಡಿ’ ಕಟ್ಟಡಗಳ ಪುನರಾಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಗಳನ್ನು ಪ್ರಕಟಿಸಲಿದೆ: ಶಿಂಧೆ

Mumbai News Desk