ಮುಂಬೈ: ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಲ (ರಿ.) ಬೋರಿವಲಿ-ದಹಿಸರ್ ಇವರ ಸಂಯುಕ್ತ ಆಶ್ರಯದಲ್ಲಿ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮಹೋತ್ಸವವು 2026ರ ಸೆಪ್ಟೆಂಬರ್ 12ರ ಶನಿವಾರದಂದು ಬೋರಿವಲಿ ಪೂರ್ವದ ಮಗಠಾಣೆ ಮೆಟ್ರೋ ನಿಲ್ದಾಣದ ಎದುರಿನ ದೇವ್ಲಾಪಾಡದಲ್ಲಿರುವ ‘ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿ, ಬ್ರಹ್ಮ ಬೈದರ್ಕಳ ಗರಡಿ’ಯಲ್ಲಿ ಜರುಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ದಿ ಭಾರತ್ ಕೋ-ಆಪ್. ಬ್ಯಾಂಕ್ (ಮುಂಬೈ) ಲಿಮಿಟೆಡ್ ಇದರ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬ್ಯಾಂಕಿನ ನಿರ್ದೇಶಕ ಸುರೇಶ್ ಬಿ. ಸುವರ್ಣ ಭಾಗವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಉದ್ಯಮಿ ಯಶವಂತ್ ಪೂಜಾರಿ, ವಿ & ಯು ಕೇರ್ ಡೆಂಟಲ್ ಮತ್ತು ಈಸ್ಥೆಟಿಕ್ ಕೇರ್ನ ಡಾ. ಪ್ರವೀಣ್ ಪೂಜಾರಿ, ದಹಿಸರ್ (ಪೂರ್ವ) ಶ್ರೀ ಶನೀಶ್ವರ ಚಾಮುಂಡೇಶ್ವರಿ ದೇವಾಲಯದ ಸಂಸ್ಥಾಪಕ ಚೆನ್ನಪ್ಪ ವಿ. ಪೂಜಾರಿ, ಉದ್ಯಮಿ ರಂಗಪ್ಪ ಸಿ. ಗೌಡ ಹಾಗೂ ಮಗಠಾಣೆ ಕ್ಷೇತ್ರದ ಮಾಜಿ ಕಾರ್ಪೊರೇಟರ್ ಶ್ರೀಮತಿ ಸೀಮಾ ಶಿಂದೆ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಗಳ ವಿವರ: ಸಂಜೆ 4:00ಕ್ಕೆ ಭಜನೆ, 6:30ಕ್ಕೆ ಮಂಗಳಾರತಿ, 7:00ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿ ಬ್ರಹ್ಮ ಬೈದರ್ಕಳ ಗರಡಿಯ ಸಂಸ್ಥಾಪಕ ಶೇಖರ್ ಇಂದು ಸಾಲ್ಯಾನ್ ಅವರನ್ನು ಸನ್ಮಾನಿಸಲಾಗುವುದು. ನಾಗರಾಜ್ ಹೆಜ್ಮಾಡಿ ಅವರ ‘ನಾರಾಯಣ ಗುರು’ ಕೃತಿ ಲೋಕಾರ್ಪಣೆಗೊಳ್ಳಲಿದ್ದು, ಧನಂಜಯ ಶಾಂತಿ ಅವರು ಗುರು ತತ್ವ ಸಂದೇಶ ನೀಡಲಿದ್ದಾರೆ. ರಾತ್ರಿ 8:30ರಿಂದ ಅನ್ನಸಂತರ್ಪಣೆ ನೆರವೇರಲಿದೆ. (ಗುರು ಪೂಜೆ ಕಾಣಿಕೆ: ರೂ. 301/-).
ಕಾರ್ಯಕ್ರಮಕ್ಕೆ ಶ್ರೀ ನಾರಾಯಣ ಗುರು ಭಜನಾ ಮಂಡಲ (ರಿ.) ಅಧ್ಯಕ್ಷ ಅಶೋಕ್ ಕುಕ್ಯಾನ್ ಸಸಿಹಿತ್ಲು, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ ಎಸ್. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ, ಗೌರವ ಕಾರ್ಯಾಧ್ಯಕ್ಷರಾದ ಶೇಖರ್ ಇಂದು ಸಾಲ್ಯಾನ್, ಸುಂದರ್ ಡಿ. ಪೂಜಾರಿ, ಕಾರ್ಯಾಧ್ಯಕ್ಷ ಧನಂಜಯ ಶಾಂತಿ, ಗೌರವ ಕಾರ್ಯದರ್ಶಿ ಆಶಿಶ್ ಆರ್. ಕೋಟ್ಯಾನ್, ಗೌರವ ಕೋಶಾಧಿಕಾರಿ ವಿಶ್ವನಾಥ್ ಬಿ. ಬಂಗೇರ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಭಕ್ತಾದಿಗಳನ್ನು ಆದರದಿಂದ ಆಹ್ವಾನಿಸಿದ್ದಾರೆ.




