September 6, 2026
Mumbai News Kannada
ಪ್ರಕಟಣೆ

ಬಂಟ್ಸ್ ಫೋರಮ್ ಮೀರಾಭಾಯಂದರ್: ಜ.14 ವಾರ್ಷಿಕ ಭಜನಾ ಮಂಗಳೋತ್ಸವ , ಹಳದಿಕುಂಕುಮ






ಮುಂಬಯಿ , ಜ.12. ಮೀರಾಭಾಯಂದರ್ ಪರಿಸರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಂಟ್ಸ್ ಫೋರಮ್ ಮೀರಾ ಭಾಯಂದರಿನ ವಾರ್ಷಿಕ ಭಜನಾ ಮಂಗಳೋತ್ಸವವು ಜ‌.14ರಂದು ಮಧ್ಯಾಹ್ನ ಗಂಟೆ 2 ರಿಂದ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ಮೀರಾಭಾಯಂದರ್ ರಸ್ತೆಯಲ್ಲಿರುವ ಅಶ್ವಿನಿ ಬ್ಯಾಂಕ್ವೆಟ್ ಸಭಾಗ್ರಹ(ಕ್ರೌನ್ ಹೋಟೆಲ್ಸ್) ದಲ್ಲಿ ಜರುಗಲಿದೆ.
ಆರಂಭದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಸಂಸ್ಥೆಯ ಸದಸ್ಯ,ಸದಸ್ಯೆಯರಿಂಧ ಭಜನೆ ,ಹಳದಿಕುಂಕುಮ ಹಾಗೂ ಕುಣಿತ ಭಜನೆ ನಡೆಯಲಿದೆ. ಕೊನೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಉದಯ ಎಮ್.ಶೆಟ್ಟಿಯವರ ಅದ್ಯಕ್ಷತೆಯಲ್ಲಿ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮನೋರಮಾ ಎನ್.ಬಿ.ಶೆಟ್ಟಿ, ಸ್ವರ್ಣಲತಾ ಅರುಣೋದಯ ರೈ,ಡಾ.ಪ್ರಾರ್ಥಸ್ವಿನಿ ಗೌರೀಶ್ ಶೆಟ್ಟಿ ಹಾಗೂ ಲತಾ ಸಂತೋಷ್ ಶೆಟ್ಟಿ ಆಗಮಿಸಲಿರುವರು.ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ಪರಿಸರದ ತುಳುಕನ್ನಡಿಗರು ಸಕುಟುಂಬ ಪರಿವಾರದೊಂದಿಗೆ ಆಗಮಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಉದಯ ಎಮ್.ಶೆಟ್ಟಿ ಮಲಾರ್ ಬೀಡು, ಉಪಾಧ್ಯಕ್ಷರುಗಳಾದ ದಿವಾಕರ್ ಎಮ್.ಶೆಟ್ಟಿ ಶಿರ್ಲಾಲ್ ಮತ್ತು ಹರ್ಷಕುಮಾರ್ ಡಿ.ಶೆಟ್ಟಿ ಪಾಂಗಾಳ, ಗೌರವ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಜೊತೆ ಕಾರ್ಯದರ್ಶಿ ಶರ್ಮಿಳಾ ಕೆ.ಶೆಟ್ಟಿ, ಜೊತೆ ಕೋಶಾಧಿಕಾರಿ ಮಧುಕರ್ ಎಸ್.ಶೆಟ್ಟಿ ಅಜೆಕಾರು, ಸಂಚಾಲಕ ಅನಿಲ್ ಆರ್.ಶೆಟ್ಟಿ ಎಲ್ಲೂರು ಒಡಿಪರಗುತ್ತು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಕವಾಣಿ ಡಿ.ಶೆಟ್ಟಿ ತಾಳಿಪಾಡಿಗುತ್ತು , ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ್ ಡಿ.ಶೆಟ್ಟಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ನವೀನಾ ಜೆ.ಭಂಡಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
.
.



Related posts

ಪಲಾವಾ ಕನ್ನಡಿಗರ ಫೌಂಡೇಶನ್ ಪಲಾವಾ, ಡೊಂಬಿವಲಿ : ನ. 30ಕ್ಕೆ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ

Mumbai News Desk

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ: ಮಾರ್ಚ್ 6ರಂದು ಬಪ್ಪನಾಡಿನಿಂದ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೆ

Mumbai News Desk

ಏ. 13 ರಂದು ಮಂಗಳೂರಲ್ಲಿ ನಡೆಯಲಿರುವ ಕುಲಾಲ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀರ್ ಸಾವರ್ಕರ್ ನಗರ, ಥಾಣೆ (ಪ) : ಸೆ. 26ರಂದು ಶರನ್ನವರಾತ್ರೋತ್ಸವದ ಅಂಗವಾಗಿ ದುರ್ಗಾ ಹೋಮ, ದೇವಿ ದರ್ಶನ, ರಂಗ ಪೂಜೆ

Mumbai News Desk

ಶ್ರೀ ಕ್ಷೇತ್ರ ಕಾಂತವರ : ಜ. 14ರಿಂದ ವರ್ಷಾವಧಿ ಜಾತ್ರೆ

Mumbai News Desk