30 C
Mumbai
April 24, 2026
Mumbai News Kannada
ಸುದ್ದಿ

ಡಹಾಣು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ವಾರ್ಷಿಕ ಜಾತ್ರೆ ಆರಂಭ





      ದೇಶದ 61 ಶಕ್ತಿಪೀಠಗಳಲ್ಲಿ ಒಂದಾಗಿದ್ದು ಮಹಾರಾಷ್ಟ್ರ ಹಾಗೂ ಗುಜರಾತ್ ನ ಅಸಂಖ್ಯ ಭಾವಿಕರ ಶೃದ್ಧಾಸ್ಥಾನವಾಗಿರುವ ಡಹಾಣೂವಿನ ಶ್ರೀ ಮಹಾಲಕ್ಶ್ಮೀ ಮಂದಿರದಲ್ಲಿನ ವಾರ್ಷಿಕ ಜಾತ್ರೆಯು ಇದೇ ಎಪ್ರಿಲ್ 23 ರ ಹನುಮಾನ್ ಜಯಂತಿಯಂದು ಆರಂಭವಾಗಿದೆ. 

      ಮುಂಬೈ ಅಹಮದಾಬಾದ್ ರಾಜಮಾರ್ಗದಲ್ಲಿನ ಚಾರೋಟಿಯ ಡಹಾಣೂ ನಾಸಿಕ್ ಕೂಡುರಸ್ತೆಯಲ್ಲಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿನ  ವಿವಲ್ ವೇಡೆ ಯಲ್ಲಿ ಹೈವೇ ಬದಿಯಲ್ಲಿಯೇ ಇರುವ ಈ ಪ್ರಸಿದ್ಧ ಮಂದಿರದಲ್ಲಿ ಚೈತ್ರ ಪೂರ್ಣಿಮೆಯಂದು ಆರಂಭವಾಗಿ ಕೃಷ್ಣ ಪಕ್ಷದ ಅಷ್ಟಮಿಯ ತನಕ ಸುಮಾರು 15 ರಿಂದ 20 ದಿನ  ಜರಗುವ  ಈ ಜಾತ್ರೆಗೆ ದೂರದ ಊರುಗಳಿಂದ ಅಸಂಖ್ಯ ಭಕ್ತಾದಿಗಳು ಆಗಮಿಸುತ್ತಾರೆ.

 

ಸ್ಥಳೀಯ ಆದಿವಾಸಿಗಳಾದ ‘ವಾರಲಿ ‘ ಯವರ ಕುಲದೇವಿ ( ರಾಣಿ ಆಯೀ) ಎಂದೇ ನಂಬಿಕೊಂಡು ಪೂಜಿಸಲ್ಪಡುವ ಈ ಮಂದಿರದ ಆಡಳಿತ ಹಾಗೂ ಪೂಜಾ ವಿಧಿವಿಧಾನಗಳನ್ನು ಇಲ್ಲಿನ ಸಾತವೀ ಕುಟುಂಬಸ್ಥರು ನಡೆಸಿಕೊಂಡು ಬರುತ್ತಾರೆ. 

   ಒಂದು ಗ್ರಾಮದ ಜಾತ್ರೆಯ ಪರಿಪೂರ್ಣ ಸ್ವರೂಪವುಳ್ಳ   ಈ ಜಾತ್ರೆಯಲ್ಲಿ ಭಾಗವಹಿಸಿ ಆನಂದಿಸಲು ಸ್ಥಳೀಯರು ಹಾಗೂ ಪರವೂರಿನ ಅಸಂಖ್ಯ  ಭಕ್ತರು ಬರುತ್ತಾರೆ.

  ಕೆಳಗೆ ಭವ್ಯ ದೇವೀ ಮಂದಿರವಿದ್ದು ಪೂರ್ಣಿಮೆಯಂದು ಜರಗುವ ಹೋಮದಲ್ಲಿ ಭಾಗವಹಿಸಲು   ಹಾಗೂ  ಅನತಿ ದೂರದಲ್ಲಿರುವ ಬೆಟ್ಟದ ಶಿಖರದ  1400 ಅಡಿ ಎತ್ತರದ ( ಮುಸಳ್ಯಾ ಡೋಂಗರ್) ಮೇಲೆ ರಾತ್ರಿಯಲ್ಲಿ     ಜರಗುವ ಧ್ವಜಾರೋಹಣವನ್ನು ವೀಕ್ಢಿಸಲು ಸಾವಿರಾರು ಜನರು ಆಗಮಿಸುತ್ತಾರೆ.

ಮಾಧ್ಯಮ ವರದಿ

ಪಿ.ಆರ್.ರವಿಶಂಕರ್ ಡಹಾಣೂರೋಡ್

8483980035



Related posts

ಮೀರಾರೋಡ್ ಗೌರವ್ ಕರ್ಕೇರ ಸಿ.ಎ ಉತ್ತೀರ್ಣ.

Mumbai News Desk

ಉಡುಪಿ : 70ನೇ ಕನ್ನಡ ರಾಜ್ಯೋತ್ಸವ ಆಚರಣೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಸಮಾಜ ಸೇವಕ, ಕಲಾ ಪೋಷಕ ನವೀನ್ ಎಮ್ ಪೂಜಾರಿ ಪಡು ಇನ್ನಾ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಖಂಡರಿಂದ ಡಾ. ವೀರೇಂದ್ರ ಹೆಗ್ಗಡೆಯವರ ಭೇಟಿ: ಕೈಗಾರಿಕೀಕರಣದ ಬಗ್ಗೆ ಸುದೀರ್ಘ ಚರ್ಚೆ

Mumbai News Desk

ತೊಕ್ಕೊಟ್ಟು ಸಾಯಿ ಪರಿವಾರ್ ನ ಆಹಾರ ಸಾಮಗ್ರಿ‌ ಕಿಟ್ ಸ್ವೀಕರಿಸಿದ ನಿಜವಾದ ಅಶಕ್ತ ಬಂದುಗಳು, ಧನ್ಯತಾ ಭಾವ, ಸಾಯಿ ಸೇವೆಗೆ ಕೃತಜ್ಞತೆ. ತೆನೆಗೆ ಹಾಲೆರೆದು ಉದ್ಘಾಟಿಸಿದ ಜೀವ ರಕ್ಷಕ ಈಶ್ವರ್ ಮಲ್ಪೆ

Mumbai News Desk

ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಪತ್ನಿ ವಿಜಯಲಕ್ಷ್ಮೀ ರಾವ್ ನಿಧನ

Mumbai News Desk