31.6 C
Mumbai
June 7, 2026
Mumbai News Kannada
ಮುಂಬಯಿ

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ





ಮುಂಬಯಿ : ಮೋಯಾ ಸಮುದಾಯದ ಹಿರಿಯ ಸಂಘಟನೆ ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ (ವೈ.ಎಂ.ಬಿ.ಎ.) ಮುಂಬಯಿ ಯ ವತಿಯಿಂದ ಬದ್ಲಾಪುರದಲ್ಲಿರುವ ಸಮಾಜದ ವಿಶಾಲವಾದ ನಿವೇಷಣ ’ಮೋಯಾ ನಗರಿ’ಯಲ್ಲಿ ಗಣ-ಹೋಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಯು ಮೇ ೨೬ ರಂದು ನಡೆಯಿತು.

ವೈ.ಎಂ.ಬಿ.ಎ. ಹಳೆಯ ಕಾಟೇಜ್ ನ ನಾಗ ದೇವಸ್ಥಾನ ಮತ್ತು ಶಿವ ಮಂದಿರದಲ್ಲಿ ಮೇ 26 ರಂದು ಬೆಳಿಗ್ಗೆ 7 ರಿಂದ 8 ರವರೆಗೆ ಪೂಜೆ ಬಳಿಕ ಡೊಂಬಿವಿಲಿಯ ರಘುಪತಿ ಭಟ್ ಮತ್ತು ಬಳಗದವರಿಂದ ಗಣಹೋಮ ನಡೆಯಿತು. ಅನಂತಚಂದ್ರ ಸಾಗರ್ ಮತ್ತು ಶ್ರೀಮತಿ ಸಂಧ್ಯಾ ಎ. ಸಾಗರ್ ಭಾಗವಹಿಸಿದ್ದರು. ಯಶವಂತ ಎ.ಕೆ. , ಶ್ರೀಮತಿ ಲಕ್ಷ್ಮಿ ವೈ.ಕೆ. ಮತ್ತಿತರರ ಉಪಸ್ಥಿತಿಯೊಂದಿಗೆ ಬೆಳಿಗ್ಗೆ 11ರಿಂದ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ ಆರಂಭಗೊಂಡು ಮಧ್ಯಾಹ್ನ 1 ಗಂಟೆಗೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನ ಪ್ರಸಾದದೊಂದಿಗೆ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾಯಿತು.

ಉಪಸ್ಥಿತರಿದ್ದ ಎಲ್ಲಾ ಸದಸದಸ್ಯರು ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ನ ಸದಸ್ಯರುಗಳ ಒಗ್ಗಟ್ಟಿನೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಪ್ರಾರ್ಥಿಸಿದರು. ಮೇ ೨೫ ರಂದು ವೈ.ಎಂ.ಬಿ.ಎ. ಯ ಕ್ರೀಯಾಶೀಲ ಸದಸ್ಯರುಗಳಾದ ಆನಂದ್ ಸಿ. ಐಲ್, ಚಂದ್ರಶೇಖರ್ ಜಿ. ಐಲ್, ಸಂದೀಪ್ ಬಿ. ಐಲ್, ಭಾಸ್ಕರ್ ಕೆ. ಉಚ್ಚಿಲ್ ಮತ್ತು ತಾರಾನಾಥ್ ಎ. ಉಚ್ಚಿಲ್ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಹಕರಿಸಿದರು. ಅಂದು ಸಂಜೆ 7ರಿಂದ 10ರವರೆಗೆ ಅಲ್ಲಿ ಭಜನೆಯನ್ನೂ ಮಾಡಿರುವರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿಗಳು ಯುವ ಪೀಳಿಗೆಯೊಂದಿಗೆ ಮುಂದಿನ ಯೋಜನೆ ಕುರಿತು ಸಂವಾದ ನಡೆಸಿದ್ದು ರಚಿತ್ ಎಸ್. ಐಲ್, ವೀಕ್ಷಿತ್ ವಿ. ಉದ್ಯಾವರ, ಜಶಿತ್ ಉದ್ಯಾವರ್, ಪ್ರೀತ್ ಯು. ಐಲ್, ನಮನ್ ಕೆ. ಉದ್ಯಾವರ್, ಏಕಾಂಶ ಅಡ್ಕ, ಕು. ಸಾಕ್ಷಿ ಉದ್ಯಾವರ್ , ಕು. ಪ್ರಾಚಿ ಉದ್ಯಾವರ್, ಹಿರಿಯ ಸದಸ್ಯರಾದ ದೇವೇಂದ್ರ ಜಿ. ಅಯೂರ್, ತಾರಾನಾಥ್ ಎ. ಉಚ್ಚಿಲ್, ದಿನಕರ್ ಟಿ. ಉಚ್ಚಿಲ್ ಮೊದಲಾದವರು ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಶ್ರೀಮತಿ ಯಶೋದಾ ಬಟ್ಟಪ್ಪಾಡಿ, ರವಿ ವಿಠಲ್ , ಕೃಪಾಕರ ಕುಂಬ್ಳೆ, ಚಂದ್ರ ವಾಮಂಜೂರ್, ಶೈಲೇಶ್ ಉದ್ಯಾವರ್, ಕೋಶಾಧಿಕಾರಿಗಳಾದ ಸುಭಾಷ್ ಚಂದ್ರ ಉಚ್ಚಿಲ್ , ಸುರೇಶ್ ವಾಮಂಜೂರು ಮೊದಲಾದವರು ಇತರರೊಡನೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಎಸ್ ಉದ್ಯಾವರ ಧನ್ಯವಾದ ಸಮರ್ಪಿಸಿದರು.



Related posts

ಬಿಲ್ಲವರ ಎಸೋಸಿಯೇಷನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಎಸ್ ಎಸ್ ಸಿ ಯಲ್ಲಿ ಅನನ್ಯಾ ಹರೀಶ್ ಪೂಜಾರಿ ಶೇ 97.80 ಅಂಕ

Mumbai News Desk

ಭಾರತ್ ಬ್ಯಾಂಕ್ ವಿರಾರ್ ಶಾಖೆಯ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ -ಖೋಪರ್‌ಖೈರ್ನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ ದಶಮಾನೋತ್ಸವ ಆಚರಣೆ

Mumbai News Desk

ಭಾರತ್ ಬ್ಯಾಂಕ್‌ನ ಬಾಂದ್ರ ಪೂರ್ವ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮದ ಆಚರಣೆ

Mumbai News Desk

ಜೊಗೇಶ್ವರಿಯ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶಾಖೆಯಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಪನ್ನ.

Mumbai News Desk