32 C
Mumbai
April 24, 2026
Mumbai News Kannada
ತುಳುನಾಡು

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ – ವಿಜೃಂಭಣೆಯಿಂದ ಜರಗಿದ ಗುರುಪೂರ್ಣಿಮ ಮಹೋತ್ಸವ.





ಉಡುಪಿ,ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಗುರುಪೂರ್ಣಿಮ ಮಹೋತ್ಸವ ಜುಲೈ 21ರಂದು, ಗುರು ಭಕ್ತರ, ಉಪಸ್ಥಿತಿಯಲ್ಲಿ ಭಕ್ತಿ, ಶ್ರದ್ದೆಯಿಂದ,ವಿಜೃಂಭಣೆಯಿಂದ ಜರಗಿತು.
ಅಂದು ಬೆಳ್ಳಿಗೆ 5 ಗಂಟೆಗೆ ಕಾಕಡ ಆರತಿ ಬೆಳಗಳಾಯಿತು.
ನಂತರ ಭಕ್ತರಿಂದ ಗುರುದೇವರಿಗೆ ಸೀಯಾಳ ಅಭಿಷೇಕ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ನಿತ್ಯಾನಂದ ಸ್ವಾಮಿಗೆ ಮಹಾಪೂಜೆ ನಡೆಯಿತು. ಮಹಾಪೂಜೆಯ ಬಳಿಕ ಬಾಲಾಭೋಜನ ಮತ್ತು ಅನ್ನಸಂತರ್ಪಣೆ ಆರಂಭವಾಯಿತು.


ತಡ ಸಂಜೆ ಪಲ್ಲಕ್ಕಿ ಉತ್ಸವ, ಮಹಾಪೂಜೆಯಾಗಿ ಸೇರಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಗುರು ಪೂರ್ಣಿಮಾ ಮಹೋತ್ಸವದಲ್ಲಿ ಮಂದಿರದ ಆಡಳಿತ ಟ್ರಸ್ಟಿ, ಮುಂಬಯಿಯ ಉದ್ಯಮಿ ಕೆ. ಕೆ ಆವರ್ಸೆಕರ್, ಮಂದಿರ ಮಠದ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ದಿವಾಕರ ಶೆಟ್ಟಿ ತೋಟದಮನೆ, ಕಾರ್ಯದರ್ಶಿ ತೋನ್ಸೆ ನವೀನ್ ಶೆಟ್ಟಿ, ಜಾಯಿಂಟ್ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ಮೋಹನ ಚಂದ್ರ ನಂಬಿಯಾರ್, ಕಾಂಞಂಗಾಡ್‌ ನ ಟ್ರಸ್ಟಿ ಕುಮಾರ್ ಎನ್ ಬಂಗೇರ, ಕೋಶಾಧಿಕಾರಿ ನರಸಿಂಹ ಶೆಣೈ, ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ರಮೇಶ್ ಶೆಟ್ಟಿ ಪಾಲ್ಗರ್, ಸಿ ಕೆ ಪಾಟೀಲ್ ಸಿ ಏ ಮುಂಬಯಿ, ಗಣೇಶ್ ಶೆಟ್ಟಿ ಸಿ ಎಸ್, ನ್ಯಾಯವಾದಿ ರವಿ ಕೋಟ್ಯಾನ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಹಾಗೂ ಸೇವಾ ಸಮಿತಿಯ ಸದಸ್ಯರು ಗುರು ಪೂರ್ಣಿಮಾ ಮಹೋತ್ಸವ ಸಾಂಗವಾಗಿ ನಡೆಯುವಲ್ಲಿ ಶ್ರಮಿಸಿದರು.



Related posts

ಮುಲ್ಕಿ ಸುರಭಿ ಎಲೆಕ್ಟ್ರಾನಿಕ್ಸ್ 153 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಸಮವಸ್ತ್ರ ಹೊಲಿಗೆಯ ಮೊತ್ತ ವಿತರಣೆ

Mumbai News Desk

ಮೂಲ್ಕಿ: “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ 50ನೇ ವರ್ಷದ ಸಂಭ್ರಮಾಚರಣೆ

Mumbai News Desk

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ಮತ್ತು ರಂಗಚಾವಡಿ ರಜತ ಸಂಭ್ರಮ: ನವೀನ್ ಡಿ. ಪಡೀಲ್ ಅವರಿಗೆ ‘ರಂಗಚಾವಡಿ ಪ್ರಶಸ್ತಿ’ ಪ್ರದಾನ

Mumbai News Desk

ಕಾಪು ಮಾರಿಯಮ್ಮ ನ ಅನುಗ್ರಹ, ಭಾರತ ಟಿ20 ತಂಡದ ನಾಯಕನಾದ ಸೂರ್ಯಕುಮಾರ ಯಾದವ್.

Mumbai News Desk

ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ,ದೈವ ಪಾತ್ರಿ ಮುರಳಿ ಪೂಜಾರಿಗೆ ಸನ್ಮಾನ

Mumbai News Desk