April 23, 2026
Mumbai News Kannada
ಮುಂಬಯಿ

ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ : ಸಿರಿ -ನುಡಿ ವಿಶೇಷ ಉಪನ್ಯಾಸ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ





“ಜೀರ್ಣೋದ್ಧಾರ ನಮ್ಮೆಲ್ಲರ ಪುಣ್ಯ ಕಾರ್ಯ” – ಪುಷ್ಪರಾಜ್ ಎಸ್. ಶೆಟ್ಟಿ

“ನಮ್ಮ ಗ್ರಾಮದ ಹೆಮ್ಮೆಯ ಪುಣ್ಯಕ್ಷೇತ್ರವಾದ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಇಂದು ಸಂಪೂರ್ಣವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಸಂತಸದ ವಿಷಯ. ಈ ಪವಿತ್ರ ಕಾರ್ಯದ ಸಾರಥ್ಯವು ನನ್ನ ಪಾಲಿಗೆ ಒದಗಿರುವುದು ನಾನು ಮಾಡಿದ ಪೂರ್ವಜನ್ಮದ ಪುಣ್ಯವೆಂದೇ ಭಾವಿಸುತ್ತೇನೆ. ಈ ಮಹತ್ಕಾರ್ಯಕ್ಕೆ ನನ್ನ ತಂದೆಯವರಾದ ಶಂಕರ್ ಮಾಷ್ಟ್ರ ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ. ಹಿಂದೆ ಅವರು ಗ್ರಾಮದ ‘ಯಜಮಾನ’ರಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆ ಮತ್ತು ಅವರು ಹಾಕಿಕೊಟ್ಟ ಮಾರ್ಗವೇ ನನಗೆ ಇಂದಿಗೂ ದೊಡ್ಡ ಸ್ಫೂರ್ತಿ.ಈ ಜೀರ್ಣೋದ್ಧಾರ ಕಾರ್ಯಕ್ಕೆ ಅಂದಾಜು 5 ಕೋಟಿ ರೂಪಾಯಿಗಳ ವೆಚ್ಚ ತಗುಲಲಿದ್ದು, ಗ್ರಾಮಸ್ಥರ, ಭಕ್ತಾದಿಗಳ ಹಾಗೂ ಉದಾರ ಮನಸ್ಸಿನ ದಾನಿಗಳ ಸಹಕಾರದಿಂದ ಈಗಾಗಲೇ ಶೇಕಡಾ 50ರಷ್ಟು ಕೆಲಸವು ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಾಕಿ ಇರುವ ಎಲ್ಲಾ ಕೆಲಸಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವ ಸಂಕಲ್ಪ ನಮ್ಮದಾಗಿದೆ. ಈ ದೈವಿಕ ಕಾರ್ಯವು ನಿರ್ವಿಘ್ನವಾಗಿ ನೆರವೇರಲು ನಿಮ್ಮೆಲ್ಲರ ತನು-ಮನ-ಧನದ ಸಹಕಾರ ಅತ್ಯಗತ್ಯ. ಈ ಪುಣ್ಯ ಕಾರ್ಯದಲ್ಲಿ ನೀವೆಲ್ಲರೂ ಭಾಗಿಗಳಾಗಬೇಕೆಂದು ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ” ಎಂದು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಎಸ್. ಶೆಟ್ಟಿ, ಪಟೇಲರ ಮನೆ, ಹೆಜಮಾಡಿ ಅವರು ನುಡಿದರು.
ಅವರು ಮಾ. 29ರಂದು ಮುಂಬೈಯ ಸಾಂತಕ್ರೂಜ್ ಬಿಲ್ಲವ ಭವನದಲ್ಲಿ ನಡೆದ ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಇದರ ಜೀರ್ಣೋದ್ಧಾರ ಸಮಿತಿ, ಮುಂಬಯಿ ಆಶ್ರಯದಲ್ಲಿ “ಸಿರಿ-ನುಡಿ” ವಿಶೇಷ ಉಪನ್ಯಾಸ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅತಿಥಿ ಧಾರ್ಮಿಕ, ಸಾಮಾಜಿಕ ಚಿಂತಕ ಸಿಎ ಸುಧೀರ್ ಶೆಟ್ಟಿ ಮಾತನಾಡಿ ” ದೇವರು ಸರ್ವಂತರ್ಯಾಮಿ, ಸೂರ್ಯ ದೇವರು ಬೆಳಿಗ್ಗೆ ಐದು ಗಂಟೆ, 14ನಿಮಿಷ, 12ಸೆಕೆಂಡ್ ಗೆ ಮಿಲಿಯಗಟ್ಟಲೆ ವರ್ಷದಿಂದ ಮೂಡುತ್ತಾ ಇದ್ದಾರೆ ಎಂದರೆ ಇದರ ಹಿಂದೆ ಏನಾದರೂ ಒಂದು ಶಕ್ತಿ ಇದೆ ತಾನೇ. ದೈವ – ದೇವರು ಎಲ್ಲಕ್ಕಿಂತಲೂ ದೊಡ್ಡವರು, ಅವರನ್ನು ನಮಗೆ ಕಲ್ಪಿಸಲು ಸಾಧ್ಯವಿಲ್ಲ. ಮನುಷ್ಯರಾಗಿ ಬಂದಮೇಲೆ ನಮ್ಮನ್ನು ನಾವು ನಾನು ಎಲ್ಲಿಂದ ಬಂದಿದ್ದೇನೆ, ನಾನು ಯಾಕೆ ಬಂದಿದ್ದೇನೆ, ನಾನು ಎಲ್ಲಿಗೆ ಹೋಗುತ್ತಿದ್ದೇನೆ ಈ ಮೂರು ಪ್ರಶ್ನೆಗಳನ್ನು ಕೇಳಬೇಕು.ದೈವಸ್ಥಾನದ ಜೀರ್ಣೋದ್ಧಾರಕ್ಕೆ ಎಲ್ಲರೂ ಸಹಕರಿಸೋಣ ಎಂದರು.
ಅತಿಥಿ ಸಮಾಜ ಸೇವಕ, ಸಂಘಟಕ ಸಿಎ ಪ್ರಕಾಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸವಾಯಿತು ಎಂದರಲ್ಲದೆ ಜೀರ್ಣೋದರಕ್ಕೆ ತನ್ನ ಸಹಕಾರ ಸದಾ ಇದೆ ಎಂದರು.
ಮುಂಬೈ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ದಾಸು ಶೆಟ್ಟಿ ಪಡುಮನೆ ತನ್ನ ಅಭಿಪ್ರಾಯ ತಿಳಿಸುತ್ತಾ ” ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಇಂದಿನ ಸಭೆಯನ್ನು ಆಯೋಜಿಸಿದ್ದು, ಊರ -ಪರಊರ ಭಕ್ತರ ಸ್ಪಂದನೆಯಿಂದ ಆದಷ್ಟು ಬೇಗ ಈ ಪುಣ್ಯ ಕಾರ್ಯ ನೆರವೇರಲಿ ಎಂಬುದೇ ನಮ್ಮ ಆಶಯ. ನಮಗೆ ದೇವರು ನೀಡಿದ ಸಂಪತ್ತನ್ನು ದೇವರ ಕಾರ್ಯಕ್ಕೆ ವಿನಿಯೋಗಿಸುವ ಭಾಗ್ಯ ನಮಗೀಗ ಬಂದಿದೆ, ಈ ಅವಕಾಶವನ್ನು ನಾವೆಲ್ಲರೂ ಸದ್ಬಳಕೆ ಮಾಡೋಣ ಎಂದರು.

ಈ ಸಂದರ್ಭದಲ್ಲಿ, ಪ್ರಖ್ಯಾತ ಸಾಹಿತಿ, ತುಳು ಜಾನಪದ ತಜ್ಞ ಹಾಗೂ ರಂಗಕರ್ಮಿಗಳಾದ ಶಿಮಂತೂರು ಚಂದ್ರಹಾಸ ಸುವರ್ಣ ಅವರು ‘ಒರಿ ಕುಮಾರೆ – ಎಳ್ವೆರ್ ಸಿರಿಕುಲ್ ‘ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ ನೀಡಿದವರನ್ನು ಹಾಗೂ ಉಪಸಕ್ತರಿದ್ದ ಗಣ್ಯರನ್ನು ಗೌರವಿಸಲಾಯಿತು.

ಅತಿಥಿ ಉದ್ಯಮಿ ಮತ್ತು ಸಮಾಜ ಸೇವಕ ಸದಾನಂದ ಕೆ. ಅಂಚನ್, ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆ ಹೆಜಮಾಡಿ, ಜೀರ್ಣೋದ್ಧಾರ ಸಮಿತಿ ಮುಂಬಯಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮಟ್ಟಿಮನೆ ಹೆಜಮಾಡಿ, ಜೀರ್ಣೋದ್ಧಾರ ಸಮಿತಿ ಮುಂಬಯಿ ಉಪಾಧ್ಯಕ್ಷ ಅಶೋಕ್ ದಾಸು ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮುಂಬಯಿ ಉಪಾಧ್ಯಕ್ಷ ಸಿಎ ಅಶ್ವಜೀತ್ ಹೆಜ್ಮಾಡಿ, ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಹಾಗೂ ಗೌರವ ಕೋಶಾಧಿಕಾರಿ ಹರೀಶ್ ಹೆಜಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
​ ಕಾರ್ಯಕ್ರಮವನ್ನು ಹೆಸರಾಂತ ಉದ್ಯಮಿ, ಸಮಾಜ ಸೇವಕ ದಿನೇಶ್ ಬಿ.ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ರಾರಂಭದಲ್ಲಿ ಗೌರವ ಕೋಶಾಧಿಕಾರಿ ಹರೀಶ್ ಹೆಜ್ಮಾಡಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ” ಹೆಜಮಾಡಿ ಗ್ರಾಮಕ್ಕೆ ಅದರದ್ದೆ ಆದ ಒಂದು ಭವ್ಯ, ದಿವ್ಯ ಪರಂಪರೆ ಇದೆ. ಇಲ್ಲಿಯ ಧಾರ್ಮಿಕ ಕೇಂದ್ರಗಳು ತನ್ನದೇ ಇತಿಹಾಸ ನಿರ್ಮಾಣ ಮಾಡಿದೆ. ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆಗೆ 900 ವರ್ಷಗಳ ಇತಿಹಾಸವಿದ್ದು, ಇಂದು ಪುಷ್ಪರಾಜ್ ಶೆಟ್ಟಿ ಪಟೇಲರ ಮನೆ, ಇವರ ಸಾರತ್ಯದಲ್ಲಿ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರವಾಗುತ್ತಿದೆ. ಈಗ 50ಪ್ರತಿಷತ ಕೆಲಸ ಮುಗಿದಿದ್ದು, ಉಳಿದ ಕೆಲಸ ಎಲ್ಲರ ಸಹಕಾರದಿಂದ ಆದಷ್ಟು ಬೇಗ ಪೂರ್ಣಗೊಳ್ಳುವ ಭರವಸೆ ನಮಗಿದೆ. ಒಂದು ಊರಿನ ಶಾಲೆ, ಮಂದಿರ ಅಥವಾ ಆಲಡೆ ಜೀರ್ಣೋದ್ಧಾರಗೊಂಡಾಗ ನಾವು ಅದಕ್ಕೆ ಸಾಕ್ಷಿಯಾಗುತ್ತೇವೆ, ಅಲ್ಲದೆ ಸಂಸ್ಕೃತಿ, ಸಮಷ್ಟಿ ಪ್ರಜ್ಞೆಗೆ ಅದು ದ್ಯೋತಕವಾಗುತ್ತದೆ. ಹೆಜಮಾಡಿಯ ಹೆಚ್ಚಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ದಾರಗೊಂಡಿದ್ದು,
ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಕ್ಷೇತ್ರದ ಪುನರ್ನಿರ್ಮಾಣದ ಕಾರ್ಯ ಆಗಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿ, ನಾವೆಲ್ಲರೂ ಸೇರಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣ ಎಂದರು.
ಮುಂಬೈ ಸಮಿತಿಯ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಪ್ರಾರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಗೌರವ ಕೋಶಾಧಿಕಾರಿ ಹರೀಶ್ ಹೆಜ್ಮಾಡಿ ಕೊನೆಯಲ್ಲಿ ವಂದಿಸಿದರು.
ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆಯ ಜೀರ್ಣೋದ್ಧಾರ ಕಾರ್ಯದ ಪ್ರಗತಿಯನ್ನು ಅವಲೋಕಿಸುವುದರ ಜೊತೆಗೆ, ತುಳುನಾಡಿನ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯನ್ನು ಎತ್ತಿ ಹಿಡಿಯುವ ಉಪನ್ಯಾಸವು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.ಮುಂಬಯಿಯ ಹಿತೈಷಿಗಳು ಹಾಗೂ ಹೆಜಮಾಡಿಯ ಭಕ್ತಾದಿಗಳ ಸಹಕಾರದೊಂದಿಗೆ ಈ ಪವಿತ್ರ ಕಾರ್ಯವು ಶೀಘ್ರವಾಗಿ ನೆರವೇರಲಿ ಎಂಬ ಹಾರೈಕೆಯೊಂದಿಗೆ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.



Related posts

ಸದ್ಗುರು ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟಿನ ಮೀರಾರೋಡ್ ಉಪಾಸನಾ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ.

Mumbai News Desk

ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ, ಬಹುಮಾನ ವಿತರಣೆ

Mumbai News Desk

ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್, ಮುಂಬಯಿ : ವಾರ್ಷಿಕ ವಿಹಾರಕೂಟ

Mumbai News Desk

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರುಇವರ ಸಹಯೋಗದಲ್ಲಿ” ಆಟಿದ ಪೊರ್ಲ ಪೊಲಬು”

Mumbai News Desk

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಪನ್ನ

Mumbai News Desk

ಮುಂಬೈಯ ಪತ್ರಕರ್ತರ ಹೆಸರಲ್ಲಿ ನಡೆಸುತ್ತಿರುವ ಸಂಘಟನೆ ಯಲ್ಲಿ ಗೊಂದಲ.

Mumbai News Desk