30.5 C
Mumbai
June 8, 2026
Mumbai News Kannada
ಸುದ್ದಿ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಬ್ರಹ್ಮಕಲಶೋತ್ಸವದಆಮಂತ್ರಣ ಪತ್ರಿಕೆ ಮುಂಬಯಿಯಲ್ಲಿ ಬಿಡುಗಡೆ





ಮುಂಬಯಿ : ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 4 ರಿಂದ 8 ರ ತನಕ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವದ ನಡೆಯಲಿದ್ದು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಮುಂಬಯಿಯಲ್ಲಿ ಬಿಡುಗಡೆ ಸಮಾರಂಭವು ಇತ್ತೀಚೆಗೆ ದೇವಸ್ಥಾನದ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಮುಂಬಯಿಯ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಚಂದ್ರಶೇಖರ ಬೆಳ್ಳಡ ಗಂಪ ಮನೆ ಕಟೀಲು, ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಅಧ್ಯಕ್ಷರಾದ ಉಧ್ಯಮಿ ಸಮಾಜ ಸೇವಕ ವೇದಪ್ರಕಾಶ್ ಎಂ. ಶ್ರೀಯಾನ್, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಮುಂಬಯಿ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಪಾಲನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಉಪಸ್ಥಿತಿಯಲ್ಲಿ ವೇದಪ್ರಕಾಶ್ ಎಂ. ಶ್ರೀಯಾನ್ ಇವರ ಕಾರ್ಯಾಲಯದಲ್ಲಿ ಬಿಡುಗಡೆ ಮಾಡಲಾಯಿತು.
ಆಮಂತ್ರಣ ಪತ್ರಿಕೆನ್ನು ಬಿಡುಗಡೆ ಮಾಡಿ ಮಾತನಾಡಿದ ಚಂದ್ರಶೇಖರ ಬೆಳ್ಳಡ ಅವರು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ನಡೆಯುತ್ತಿರುವ ಪೂರ್ವ ತಯಾರಿಯ ಬಗ್ಗೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರುಗಳಾಗಿ ಮುಂಬಯಿಯ ಉದ್ಯಮಿಗಳಾದ ಡಾ. ಸದಾಶಿವ ಕೆ. ಶೆಟ್ಟಿ ಕನ್ಯಾನ, ಕೃಷ್ಣ ಎನ್ ಉಚ್ಚಿಲ್ ಗೌರವ ಸಲಹಾಗಾರರಾಗಿ ಸುನಿಲ್ ಪಾಯಸ್ ಚೆಂಬೂರು, ರೋಹಿದಾಸ ಬಂಗೇರ, ಧರ್ಮಪಾಲ ದೇವಾಡಿಗ, ಎಲ್. ವಿ. ಅಮೀನ್, ಜಯ ಸಿ. ಸಾಲ್ಯಾನ್, ಸುರೇಶ್ ಕಾಂಚನ್, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಕೆ. ಡಿ. ಶೆಟ್ಟಿ ವಿರಾರ್ ಶಂಕರ್ ಶೆಟ್ಟಿ, ಧನಂಜಯ ಶೆಟ್ಟಿ, ಕುಮಾರ ಬಂಗೇರ, ಕಳತ್ತೂರು ವಿಶ್ವನಾಥ್ ಶೆಟ್ಟಿ, ಸೂರ್ಯಕಾಂತ್ ಜೆ ಸುವರ್ಣ, ಕುಮಾರ ಸ್ವಾಮಿ, ಐಕಳ ಹರೀಶ್ ಶೆಟ್ಟಿ, ಹರೀಶ್ ಅಮೀನ್, ಲಕ್ಷ್ಮಣ ಪೂಜಾರಿ, ಪ್ರವೀಣ್ ಭೋಜ ಶೆಟ್ಟಿ, ಸಿಬಿ ಕರ್ಕೆರ, ಗಣೇಶ್ ಕಾಂಚನ್, ದಿನೇಶ್ ಕಿರೋಡಿಯನ್, ಅಜಿತ್ ಸುವರ್ಣ, ಭಾಸ್ಕರ್ ಎಂ. ಸಾಲ್ಯಾನ್ ಉಪಾಧ್ಯಕ್ಷರುಗಳಾಗಿ ದೇವರಾಜ್ ಹಳೆಯಂಗಡಿ, ಅಶೋಕ್ ಪುತ್ರನ್, ಹರೀಶ್ ಶ್ರೀಯಾನ್, ಚಂದ್ರಹಾಸ ಪಾಲನ್, ದೇವರಾಜ್ ಎಚ್ ಕುಂದರ್, ಜಯಂತ್ ಶ್ರೀಯಾನ್, ರವಿ ಎಲ್ ಕರ್ಕೇರ, ಏಕನಾಥ ಅಮೀನ್ , ಉಮೇಶ್ ಸಾಲಿಯಾನ್, ಚಂದ್ರಕಾಂತ ಪುತ್ರನ್, ವಿಜಯ ಪಿ ಸನಿಲ್ , ಲಕ್ಷ್ಮಣ್ ಪಿ ಸನಿಲ್ , ಪುರುಷೋತ್ತಮ ಕೋಟಂಕರ್, ಭಾಸ್ಕರ್ ಎಲ್ ಕಾಂಚನ್, ಪದ್ಮನಾಭ ಅಮೀನ್, ಸತೀಶ್ ಕೋಟ್ಯಾನ್, ಧೀರಜ್ ಎಸ್ ಶ್ರೀಯಾನ್, ಪ್ರಶಾಂತ್ ಅಮೀನ್ ಕೋಟೆ, ಆನಂದ ಬಂಗೇರ ಥಾಣೆ, ಮೋಹನ್ ಆರ್ ಕೋಟ್ಯಾನ್, ದೇವದಾಸ ಪುತ್ರನ್,
ಕಾರ್ಯದರ್ಶಿಗಳಾಗಿ ಶ್ರೀಮತಿ ಪ್ರಭಾವತಿ ಅಮೀನ್, ಸುಧಾಕರ ಬೆಳ್ಚಡ, ವಿಶ್ವನಾಥ ಬಂಗೇರ ಸಂಘಟನಾ ಕಾರ್ಯದರ್ಶಿಗಳಾಗಿ ಅಶೋಕ್ ಸಸಿಹಿತ್ಲು, ಸುರೇಂದ್ರ ಬಂಗೇರ, ಪದ್ಮನಾಭ ಸಸಿಹಿತ್ಲು, ಶ್ರೀಧರ ಸುವರ್ಣ, ಖಜಾಂಚಿಗಳಾಗಿ ಶ್ರೀಮತಿ ಕಲಾವತಿ ಕೋಟ್ಯಾನ್, ರಮೇಶ್ ಬಿ. ಸಾಲ್ಯಾನ್ ಮತ್ತು ಸುನಿಲ್ ಎನ್ ಪುತ್ರನ್ ಸೇವೆ ಸಲ್ಲಿಸುತಿರುವರು.



Related posts

ಮುಂಬೈ ಕುಲಾಲ ಸಂಘದ ಕುಲಾಲ ಭವನಕ್ಕೆ ಎಸ್. ಆರ್. ಬಂಜನ್ ಅವರಿಂದ ರೂ. 20 ಲಕ್ಷ ದೇಣಿಗೆ

Mumbai News Desk

ನಿಟ್ಟೆಗುತ್ತು ಸುಮಿತ್ರಾ ಆರ್. ಶೆಟ್ಟಿ ನಿಧನ

Mumbai News Desk

“ಮಿಸ್ಟರ್ ಮದಿಮಯೆ” ಕರಾವಳಿಯಾದ್ಯಂತ  ತೆರೆಗೆ

Mumbai News Desk

ಯು.ಎ.ಇ. ನೆಲದಲ್ಲಿ “ಕುಲಾಲ ಫ್ಯಾಮಿಲಿ ದುಬೈ ಯು.ಎ.ಇ. ವಿಹಾರ ಕೂಟ 2025”

Mumbai News Desk

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸ ಪರ್ವ ಆರಂಭ : ದ್ರಾವಿಡ ನಾಡಲ್ಲಿ ‘ದಳಪತಿ’ ಅಬ್ಬರ, ಬಂಗಾಳದ ಸಾರಥಿಯಾಗಿ ಸುವೇಂದು ಅಧಿಕಾರಿ

Mumbai News Desk

ಮುಂಬೈ : ಶ್ರೇಯಸ್ ಆರ್ ಪೂಜಾರಿ ಗೆ Jee Main ನಲ್ಲಿ ಶೇ. 99.36, ಎಚ್ ಎಸ್ ಸಿ ಯಲ್ಲಿ ಶೇ.89 ಅಂಕ

Mumbai News Desk