October 12, 2026
Mumbai News Kannada
ಸುದ್ದಿ

ಸರ್ ಜೆ ಜೆ ಆಸ್ಪತ್ರೆಯಲ್ಲಿ ನೂತನ ಅತ್ಯಾಧುನಿಕ ಹೆರಿಗೆ ವಾರ್ಡ್ ಲೋಕಾರ್ಪಣೆ



    ಚಿತ್ರ ಹಾಗೂ ಸುದ್ದಿ : ಪಿ.ಆರ್.ರವಿಶಂಕರ್

 ಮುಂಬೈ News : 21.05.2026

ಶ್ರೀ ಸಿದ್ಧಿವಿನಾಯಕ ಮಂದಿರದ ಮಾಜಿ ಟ್ರಸ್ಟಿ ಹಾಗೂ ನೇಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ( ಎಸ್.ಪಿ.)ಮಹಾರಾಷ್ಟ್ರ ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿರುವ ನಿತಿನ್ ಕದಮ್ ನೇತೃತ್ವದಲ್ಲಿನ ‘ ನಿತಿನ್ ಇಂದಿರಾ ವಿಷ್ಣು ಕದಮ್ ‘ ಹೆಸರಲ್ಲಿ ಟ್ರೆಂಡ್ ಸೆಟ್ಟರ್ಸ್ ಸಂಸ್ಥೆಯು , ಮುಂಬೈಯಲ್ಲಿನ  ಶೀತಲ್ ಲೋಢಾ ಫೌಂಡೇಶನ್ ಇದರ  ಸಹಯೋಗದೊಂದಿಗೆ ಹೊಸತಾಗಿ ನಿರ್ಮಿಸಿರುವ ಅತ್ಯಾಧುನಿಕವಾದ ಹೆರಿಗೆ ವಾರ್ಡ್ ಇದೇ ಮೇ ತಿಂಗಳ ತಾ.21 ರಂದು ಲೋಕಾರ್ಪಣೆಗೊಂಡಿತು.

ಮುಂಬೈ ನ ಸರ್. ಜೆ ಜೆ ಆಸ್ಪತ್ರೆಯ ಬಾಳರಾಮ್ ಕಟ್ಟಡದ ಮೊದಲನೆಯ ಮಹಡಿಯಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸುಸಜ್ಜಿತ ಹೆರಿಗೆ ವಾರ್ಡ್ ನಲ್ಲಿ ಶುಭಾರಂಭದ ನಿಮಿತ್ತ ಬೆಳಿಗ್ಗೆ ಶ್ರೀ ಗಣೇಶ ಪೂಜೆಯು ಜರಗಿತು.

ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ನಿತಿನ್ ಕದಮ್ ಅವರ ಆಪ್ತವರ್ಗದವರು  ಉಪಸ್ಥಿತರಿದ್ದರು.  ಬೊಯಿಸರ್ ನ   ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರು ಹಾಗೂ ಉದ್ಯಮಿಗಳಾದ ಶ್ರೀ ಸತ್ಯಾ ಕೋಟ್ಯಾನ್  ಮಾತನಾಡಿ ” ಆಪ್ತ ಮಿತ್ರರಾದ ನಿತಿನ್  ಕದಮ್ ಅವರ ಸಮಾಜ ಸೇವಾ ಕಾರ್ಯಗಳನ್ನು ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿರುವೆನು. ಕೋವಿಡ್ ಸಮಯದಲ್ಲಿ ರೋಗಿ ಹಾಗೂ ಚಿಕಿತ್ಸಕ ವೈದ್ಯರಿಗೆ ಅಗತ್ಯವಿರುವ  ಪ್ರೊಟೀನ್ ಬಾರ್ , ಎನ್ 95  ಮಾಸ್ಕ್, ಪಿ ಪಿ ಸೂಟ್ , ಡೆಡ್ ಬಾಡಿ ಬ್ಯಾಗ್ ಸೇರಿದಂತೆ ಲಕ್ಷಾಂತರ ಜೀವನಾವಶ್ಯ ವಸ್ತುಗಳನ್ನು ಉಚಿತವಾಗಿ ಹಂಚಿ ತಮ್ಮ ಮಾನವೀಯತೆ ಮೆರೆದಿದ್ದರು.

ಕಳೆದ ಬಾರಿ ಜೆ ಜೆ ಆಸ್ಪತ್ರೆಯ ಇದೇ ಮಹಡಿಯಲ್ಲಿ ನವಜಾತ ಶಿಶುಗಳಿಗೋಸ್ಕರ ಅತ್ಯಾಧುನಿಕ ನ್ಯೂ ಬೋರ್ನ್ ಐ ಸಿ ಯು ವಾರ್ಡ್ ಒಂದನ್ನು ನಿರ್ಮಿಸಿ ವೈದ್ಯಕೀಯ ಸೇವೆಗೆ ಅರ್ಪಿಸಿದ್ದನ್ನು  ನೋಡಿರುತ್ತೇವೆ.

ಇಂದು ಗುರು ಪುಷ್ಯಾಮೃತ ಯೋಗವಿದ್ದು ಶ್ರೀಗಣೇಶ ಪೂಜೆಯೊಂದಿಗೆ  ಲೋಕಾರ್ಪಣೆಗೊಂಡ  ಫೈವ್ ಸ್ಟಾರ್ ಅನುಕೂಲತೆಯುಳ್ಳ ಈ ಸುಸಜ್ಜಿತ ಅತ್ಯಾಧುನಿಕ ಹೆರಿಗೆ ವಾರ್ಡ್  ಇಲ್ಲಿಗೆ ಭರವಸೆ ಇಟ್ಟುಆಸ್ಪತ್ರೆಗೆ  ಬರುವ ಅಸಂಖ್ಯ ಮಾತೆಯಂದಿರಿಗೆ ವರದಾನವಾಗಲಿದ್ದು , ನಿತಿನ್ ಕದಮ್ ಅವರು ಪ್ರಚಾರವಿಲ್ಲದೆಯೇ  ಮಾಡುವ ಈ ಮಹಾನ್ ಸೇವಾಕಾರ್ಯಗಳು ಇತರರಿಗೂ ಮಾದರಿಯಾಗಿವೆ.” ಎಂದು ಅಭಿನಂದಿಸಿದರು.

ಉಪಸ್ಥಿತರಿದ್ದ ಮುಂಬೈ ಫೋರ್ಟ್ ಮಹೇಶ ಲಂಚ್ ಹೋಮ್ ನ ಮಹೇಂದ್ರ ಕರ್ಕೆರಾ ” ಕೆರೆಯ ನೀರನ್ನು ಕೆರೆಗೆ ಚೆಲ್ಲಿ ” ಎಂಬಂತೆ ಯಾವುದೇ ಅಬ್ಬರ , ಪ್ರಚಾರವಿಲ್ಲದೆಯೇ ಮನವೀಯತೆಯ ಔದಾರ್ಯ ಮೆರೆಯುವ ನಿತಿನ್ ಕದಮ್ ಇವರಿಂದ ಭವಿಷ್ಯದಲ್ಲಿಯೂ  ಇಂತಹ ಹಲವು ಸತ್ಕಾರ್ಯಗಳು ಜರಗಲಿ ” ಎಂದು ಹಾರೈಸಿದರು.

 ನೂತನ ಹೆರಿಗೆ ವಾರ್ಡ್ ನಲ್ಲಿ ಅಳವಡಿಸಿದ ನ್ಯೂ ಬೋರ್ನ್ ವಾರ್ಮ್ ರೂಮ್ , ಅತ್ಯಾಧುನಿಕ ಡೆಲಿವರಿ ಬೆಡ್ ಸಿಸ್ಟಮ್ ಮತ್ತು ಇತರ ಹಲವಾರು ಆಧುನಿಕ ಪಾಲಿಕಾರ್ಬೋನೇಟ್ ಉಪಕರಣಗಳ ಬಗ್ಗೆ ಮಾಹಿತಿ ನೀಡಿದ ನಿತಿನ್ ಕದಮ್ ” 

 ಬದುಕು ರೂಪಿಸಿದ ಸಮಾಜಕ್ಕೆ  ಏನಾದರೂ ಒಳ್ಳೆಯದನ್ನು ನೀಡುವ ಒಂದು ತುಡಿತ ನಮ್ಮಲ್ಲಿತ್ತು.  ಯಾವುದೇ ಜಾತಿ , ಮತ ಭೇದವಿಲ್ಲದೆಯೇ ಮಾನವ ವರ್ಗಕ್ಕೆ ಏನಾದರೂ ಕೊಡುಗೆಯನ್ನು ನೀಡುತ್ತಾ ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತಾ ಇದ್ದೇನೆ.  ಇದಕ್ಕೆ ಸಹೃದಯಿ ಸ್ನೇಹಿತರ ಬೆಂಬಲವೂ ಧಾರಾಳವಾಗಿ ದೊರಕುತ್ತಿದೆ. ಕೇವಲ 20 ರುಪಾಯಿ ವೆಚ್ಚದಲ್ಲಿ ಇಲ್ಲಿನ ವೈದ್ಯಕೀಯ ಚಿಕಿತ್ಸೆಯು ಎಲ್ಲರಿಗೂ ಲಭಿಸುತ್ತಿದೆ ” ಎಂದು ನುಡಿದರು .

    ಈ ಸಂದರ್ಭದಲ್ಲಿ  ಜೆ.ಜೆ. ಆಸ್ಪತ್ರೆಯ ನಿರ್ದೇಶಕರಾದ ಡಾ • ಚಂದನ್ ವಾಲ , ಮೇಟ್ರನ್ಸ್ ,  ವಿಭಾಗೀಯ ಮುಖ್ಯಸ್ಥ ವೈದ್ಯರು ,  ದಾದಿಯರು , ಇತರ ಸಿಬ್ಬಂದಿ ವರ್ಗದವರು ಮತ್ತು ಸಮಾಜ ಸೇವಕಿ ಶ್ರೀಮತಿ ಪ್ರಪುಲ್ಲಾ ಜೆ. ಶೆಟ್ಟಿ   ಮತ್ತು ಇತರ ಆಮಂತ್ರಿತ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಮತ್ತು ವಿವರ :

ಪಿ.ಆರ್.ರವಿಶಂಕರ್

     8483980035



Related posts

ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )

Mumbai News Desk

ಥಾಣೆ : ಶಾರದ ಎಲ್ ಕರ್ಕೇರ ನಿಧನ

Mumbai News Desk

ಗೋವಾ ಮಂಗೇಶಿ ಕ್ಷೇತ್ರದಲ್ಲಿ ಸಾರಸ್ವತ ವೈದಿಕ ಸಮಾವೇಶ.

Mumbai News Desk

ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರಿಗೆ ಪರಿಸರ ಪ್ರೇಮಿ ಸಮಿತಿಯಿಂದ ಸ್ವಾಗತ.

Mumbai News Desk

ಸೌದಿ ಅರೇಬಿಯಾದ ಮದೀನಾ ಬಳಿ ಬಸ್-ಟ್ಯಾಂಕರ್ ಡಿಕ್ಕಿ: 42 ಭಾರತೀಯರು ಸಾವು

Mumbai News Desk

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ ಕುಮಾರಿ ಜಾನ್ವಿ ರಾಜೇಶ್ ಕುಲಾಲ್ ರವರಿಗೆ 87%_ಅಂಕ

Mumbai News Desk