25 C
Mumbai
August 13, 2026
Mumbai News Kannada
ತುಳುನಾಡು

ಗಾಣಿಗರ ಸೇವಾ ಸಂಘ ಪಾಣೆಮಂಗಳೂರು: ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಹಾಗೂ ನವೀಕೃತ ಸುಮಂಗಲ ಕಲ್ಯಾಣ ಮಂಟಪದ ಲೋಕಾರ್ಪಣೆ





“ಮನುಷ್ಯನ ವರ್ತನೆ ಅವನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ” – ಶ್ರೀನಿವಾಸ ಸಾಫಲ್ಯ

ಬಂಟ್ವಾಳ: ಬಂಟ್ವಾಳ ತಾಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಹಾಗೂ ನವೀಕೃತ ಸುಮಂಗಲ ಕಲ್ಯಾಣ ಮಂಟಪದ ಲೋಕಾರ್ಪಣೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ನವೀಕೃತ ಸುಮಂಗಲ ಕಲ್ಯಾಣ ಮಂಟಪವನ್ನು ಮುಂಬೈನ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಮನುಷ್ಯನ ವರ್ತನೆಯೇ ಅವನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಉತ್ತಮ ಸಂಸ್ಕಾರ, ಶಿಸ್ತು ಮತ್ತು ನಡತೆಯ ಮೂಲಕವೇ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ. ಕೇವಲ ಪ್ರಮಾಣಪತ್ರ ಅಥವಾ ಪದವಿಯಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ” ಎಂದು ಹೇಳಿದರು.

ತಮ್ಮ ಭಾಷಣದಲ್ಲಿ, ಭಾರತ ರತ್ನ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬಾಲ್ಯದ ಕಠಿಣ ಪರಿಶ್ರಮ, ಜೀವನದ ಅಡೆತಡೆಗಳನ್ನು ಮೀರಿ ಸಾಧಿಸಿದ ಯಶಸ್ಸು ಹಾಗೂ ಅವರ ನಿಷ್ಠೆಯ ಬದುಕನ್ನು ವಿದ್ಯಾರ್ಥಿಗಳಿಗೆ ಉದಾಹರಣೆಯಾಗಿ ವಿವರಿಸಿದರು. ಅಲ್ಲದೆ, ದಿವಂಗತರಾದ ಮಂಜುನಾಥ ಸಪಳಿಗ, ರಘು ಸಪಳಿಗ ಹಾಗೂ ಜಿನಪ್ಪ ಟೈಲರ್ ಅವರು ಸಮಾಜದ ಮೇಲಿಟ್ಟಿದ್ದ ಕಾಳಜಿ ಮತ್ತು ಸಮಾಜದ ಏಳಿಗೆಗಾಗಿ ಹಾಕಿಕೊಟ್ಟ ಭದ್ರ ಅಡಿಪಾಯವನ್ನು ಅವರು ಸ್ಮರಿಸಿದರು. ಸಂಘದ ಯುವ ವಿಭಾಗ, ಮಹಿಳಾ ವಿಭಾಗ ಹಾಗೂ ಸುಮಂಗಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸಮಾಜದ ಅಭಿವೃದ್ಧಿ ಮತ್ತು ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವಲ್ಲಿ ಮಾಡುತ್ತಿರುವ ಉತ್ತಮ ಕಾರ್ಯಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಮಾಜಿ ಮೈಸೂರು ಮಹಾಪೌರರೂ ಆದ ಅನಂತ್ ಮೈಸೂರು ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, “ಗಾಣಿಗ ಸಮಾಜವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಮುನ್ನಡೆಯಬೇಕು” ಎಂದು ಸಲಹೆ ನೀಡಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಟಾಡಿ ಮಾತನಾಡಿ, “ವಿಶ್ವಮಟ್ಟದ ನಾಯಕ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶಕ್ಕೆ ನೀಡಿದ ಗಾಣಿಗ ಸಮಾಜದ ಕೊಡುಗೆ ಹೆಮ್ಮೆಯ ಸಂಗತಿಯಾಗಿದೆ” ಎಂದರು.

ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಗಾಣಿಗ, ಜಿಲ್ಲಾ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಬಿಜೆಪಿ ವಕ್ತಾರ ಮಾಧವ್ ಮಾವೆ, ಮುಂಬೈ ಉದ್ಯಮಿ ವಸಂತ್ ಜಿ. ಸಾಫಲ್ಯ ಕುಂಜಾರು ಹಾಗೂ ಜನಾರ್ದನ ಅರ್ಕುಳ ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುಮಂಗಲ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕಲಡ್ಕ, ಪ್ರಮುಖರಾದ ಕೇಶವ ಅತ್ತಾವರ, ವೆಂಕಟೇಶ್ ಅತ್ತಾವರ, ಸಚಿನ್ ಮೆಲ್ಕಾರ್, ನರ್ಸಪ್ಪ, ವೇದವ ಗಾಣಿಗ, ಭುವನೇಶ ಮೊಗರ್ನಾಡು, ಆಶಾ ವೇದವ ಗಾಣಿಗ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಗಾಣಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಾಲಕೃಷ್ಣ ಸರ್ಕಳ ಅವರು ಸ್ವಾಗತಿಸಿದರು. ದೀಪಕ್ ಅಡ್ಯಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

(ವರದಿ: ಬಿ. ದಿನೇಶ್ ಕುಲಾಲ್ – ಮೊಬೈಲ್: 9821868674)



Related posts

ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕರ

Mumbai News Desk

ಪಡುಬಿದ್ರಿಯಲ್ಲಿ ಸೆರಾಕೇರ್ ವತಿಯಿಂದ ಸಡಗರದ ‘ಆಟಿದೊಂಜಿ ದಿನ’

Mumbai News Desk

ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ 11ನೇ ವಾರ್ಷಿಕ ಮಹಾಸಭೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮಂಗಳ ಪ್ರಶ್ನೆಗೆ ಚಾಲನೆ

Mumbai News Desk

ಓಂ ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.)ಯ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ

Mumbai News Desk