October 12, 2026
Mumbai News Kannada
ಮುಂಬಯಿ

ಮಕರ ಜ್ಯೋತಿ ಫೌಂಡೇಶನ್ ರಿ ಸಯನ್ ಕೋಳಿವಾಡ3ನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಮತ್ತು ಹಳದಿ ಕುಂಕುಮ ವಿಜೃಂಭಣೆಯಿಂದ ಸಂಪನ್ನ.



ದಿನಾಂಕ 21 ಅಗಸ್ಟ್ ಸಯನ್ ಕೋಳಿವಾಡ ಪರಿಸರದ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಮಕರ ಜ್ಯೋತಿ ಫೌಂಡೇಶನ್ ಇವರ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಮತ್ತು ಹಳದಿ ಕುಂಕುಮ ಕಾರ್ಯಕ್ರಮ ಸಯನ್ ಕೋಳಿವಾಡದ ಸಮಾಜ ಮಂದಿರ ಹಾಲ್ ನಲ್ಲಿ ಶ್ರಾವಣ ಮಾಸದ ಎರಡನೆಯ ಶುಕ್ರವಾರದ ದಿನಾಂಕ 21 ರಂದು ಅದ್ದೂರಿಯಾಗಿ ವಿಜ್ರಮಣೆಯಿಂದ ಪೂಜೆ ನೆರವೇರಿತು.


ಮೊದಲಿಗೆ ಸಂಘದ ಅಧ್ಯಕ್ಷರಾದ ಚಂದ್ರ ದೇವಾಡಿಗ ನಾಗೂರು, ಸಲಹೆಗಾರರಾದ ಸದಾಶಿವ ಶೆಟ್ಟಿ, ಬಾಲಚಂದ್ರ ದೇವಾಡಿಗ, ಕಾರ್ಯದರ್ಶಿ ಕೃಷ್ಣಮೂರ್ತಿ ಮೇಸ್ತ ಮತ್ತು ಕೋಶಾಧಿಕಾರಿ ಬಾಬು ದೇವಾಡಿಗ ಎಲ್ಲರೂ ಸೇರಿ ದೇವರಿಗೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದ ಮೊದಲ ಅಂಗವಾಗಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಈ ಭಜನಾ ಕಾರ್ಯಕ್ರಮದಲ್ಲಿ ಉದ್ಭವ ದುರ್ಗಾಪರಮೇಶ್ವರಿ ದೇವಸ್ಥಾನದ ಗೋವಿಂದ ದೇವಾಡಿಗ ಮತ್ತು ಹರಿ ಓಂ ಭಜನಾ ಮಂಡಳಿ ಪ್ರತಿಕ್ಷನಗರ ಹಾಗೂ ಮಕರ ಜ್ಯೋತಿ ಭಜನಾ ಮಂಡಳಿ ಸಯನ್ ಕೋಳಿವಾಡ ಎಲ್ಲ ಸದಸ್ಯರಿಂದ ಉತ್ತಮ ರೀತಿಯ ಭಜನಾ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು ‌.
ನಂತರ ಪುರೋಹಿತರಾದ ಸ್ವಸ್ತಿಕ್ ಹೆಬ್ಬರ್ ಇವರು ತಾಯಿ ವರಮಹಾಲಕ್ಷ್ಮಿ ಪೂಜೆಯನ್ನು ಬಾಲಚಂದ್ರ ದೇವಾಡಿಗ ದಂಪತಿಗಳ ಮುಖೇನ ಹಾಗೂ ನೆರೆದ ಮಹಿಳೆಯರಿಂದ ಪೂಜಾ ಕಾರ್ಯಕ್ರಮವನ್ನು ಉತ್ತಮವಾಗಿ ನೆರವೇರಿಸಿಕೊಟ್ಟರು ನೆರೆದ ಎಲ್ಲಾ ಮಹಿಳೆಯರಿಂದ ಕಾರ್ಯಕ್ರಮವನ್ನು ನೆರವೇರಿಸಿ ವರಮಹಾಲಕ್ಷ್ಮಿ ತಾಯಿಯನ್ನು ಪ್ರಸನ್ನ ಗೊಳಿಸಿದರು
ಮಕರ ಜ್ಯೋತಿ ಫೌಂಡೇಶನ್ ಈ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರಾದಂಡು ಆಗಮಿಸಿದೆ ಖ್ಯಾತ ಅಂತರಾಷ್ಟ್ರೀಯ ಮಟ್ಟದ ಜ್ಯೋತಿಷ್ಯರು ಮತ್ತು ಕನ್ನಡ ಸಂಘ ಸಯನ್ ಇದರ ಅಧ್ಯಕ್ಷರಾದ ಎಂ ಜೆ ಪ್ರವೀಣ್ ಭಟ್, ಗೌರವಾಧ್ಯಕ್ಷರಾದ ಜಯರಾಮ್ ಶೆಟ್ಟಿ, ಕಾರ್ಯದರ್ಶಿ ದಯಾನಂದ ಮೌಲ್ಯ ಹಾಗೂ ಉಮೇಶ್ ಶೆಟ್ಟಿ, ಕುಕ್ಕುಂದೂರು ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಇದರ ಕಾರ್ಯದರ್ಶಿಯರಾದ ಉಮೇಶ್ ದೇವಾಡಿಗ ದೇವಾಡಿಗ ಸಂಘ ಮುಂಬೈ ಇದರ ಸುರೇಖಾ ದೇವಾಡಿಗ ಮತ್ತು ಹೇಮಂತ್ ದೇವಾಡಿಗ ಇವರು ಆಗಮಿಸಿದ್ದಾರೆ
ಮುಂಬೈ ಕಾಂಗ್ರೆಸ್ಸಿನ ನೇತಾರರು ಅಮಿತ್ ಜಗನ್ನಾಥ್ ಶೆಟ್ಟಿ ಮತ್ತು ವೀಣಾ ಅಮಿತ್ ಶೆಟ್ಟಿ
ಮುಂಬೈ ಮಾಜಿ ವಿಧಾನ ಸಭಾ ಸದಸ್ಯರಾದ ವಿಜಯ ಸಾವಂತ್,
ಬಿಜೆಪಿ ಪರವಕ್ತ ಉದಯ ಪ್ರತಾಪ್ ಸಿಂಗ್
ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿ, ಶುಕ್ಲ
ಅಪ್ಪಾಜಿ ಬೀಡು ಫೌಂಡೇಶನ್ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಉಪಾಧ್ಯಕ್ಷರಾದ ಉದಯಶೆಟ್ಟಿ ಎನ್ನು ಅನೇಕ ಗಣ್ಯಾತಿಗಣ್ಯರು ಆಗಮಿಸಿದ್ದಾರೆ ಬಂದಂತ ಎಲ್ಲರಿಗೂ ಕೇಸರಿ ಶಾಲನ್ನು ಹಾಕುದರ ಮೂಲಕ ಸಭೆಯನ್ನು ಕೇಸರಿಮಯವಾಗಿ ಮಾಡಲಾಯಿತು ಪೂಜೆಯ ನಂತರ ಎಲ್ಲಾ ಭಕ್ತಾದಿಗಳಿಗೂ ಸೂಚಿರುಚಿಯಾದ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು ಬಂದಂತ ಎಲ್ಲರೂ ರುಚಿಯಾದ ಭೋಜನನ್ನು ಸವಿದು, ಸಂತೃಪ್ತರಾದರು
ಬಂದಂತ ಎಲ್ಲಾ ಮಹಿಳೆಯರಿಗೂ ಮಕರ ಜ್ಯೋತಿ ಫೌಂಡೇಶನ್ ಫೌಂಡೇಶನ್ ಮಹಿಳೆಯರಿಂದ ಹಳದಿ ಕುಂಕುಮವನ್ನು ಕೊಟ್ಟು ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ
ಈ ಕಾರ್ಯಕ್ರಮಕ್ಕೆ ಮಂಡಳಿಯ ಸದಸ್ಯರಾದ ಬಾಲಚಂದ್ರ ದೇವಾಡಿಗ, ಬಾಬು ದೇವಾಡಿಗ, ಕೃಷ್ಣಮೂರ್ತಿ ಮೇಸ್ತ, ಗಣೇಶ್ ದೇವಾಡಿಗ, ಕೃಷ್ಣದೇವಾಡಿಗ, ರಾಮಚಂದ್ರ ದೇವಾಡಿಗ ನಾಗರಾಜ ನಾಯ್ಕ ಸುಬ್ರಮಣ್ಯ ಪೂಜಾರಿ, ರವಿ ದೇವಾಡಿಗ, ರಾಘವೇಂದ್ರ ದೇವಾಡಿಗ, ನಾರಾಯಣ ದೇವಾಡಿಗ, ನಿಖಿಲ್ ದೇವಾಡಿಗ, ಶಿವರಾಜ್ ದೇವಾಡಿಗ, ಗಣೇಶ್ ದೇವಾಡಿಗ, ನಾಗೇಶ್ ದೇವಾಡಿಗ ಹಾಗೂ ಮಹಿಳಾ ಮಂಡಳಿಯ ಸದಸ್ಯರುಗಳಾದ ಬೇಬಿ ದೇವಾಡಿಗ ,ಮಂಜುಳಾ ದೇವಾಡಿಗ, ನಾಗರತ್ನ ದೇವಾಡಿಗ, ಸುಮತಿ ದೇವಾಡಿಗ, ಸುಜಾತಾ ಪೂಜಾರಿ, ದೀಪ್ತಿ ದೇವಾಡಿಗ, ಭಾರತೀ ಗೌಡ, ದೀಪ ದೇವಾಡಿಗ, ಜ್ಯೋತಿ ಶೆಟ್ಟಿ, ರಜನಿ ದೇವಾಡಿಗ,ವಸಂತಿ ಪೂಜಾರಿ, ತ್ರಿವೇಣಿ ಶೆಟ್ಟಿ, ಶೋಭಾ ಶೆಟ್ಟಿ,ಗಂಗಾ ಪೂಜಾರಿ ಹಾಗೂ ಹರಿ ಓಂ ಭಜನಾ ಮಂಡಳಿಯ ಎಲ್ಲಾ ಮಹಿಳೆಯರು
ಇವರೆಲ್ಲರ ಅತ್ಯುತ್ತಮವಾದ ಕಠಿಣ ಶ್ರಮದಿಂದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಅದ್ದೂರಿಯಾಗಿಸಲು ಕಾರಣವಾಯಿತು ಎಂದು ಸಂಘದ ಅಧ್ಯಕ್ಷರಾದ ಚಂದ್ರ ದೇವಾಡಿಗ ನಾಗೂರು ಪತ್ರಿಕ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ



Related posts

ಮುಂಬಯಿ : ಹೋಟೆಲ್ ಉದ್ಯಮಿಗೆ ಕೊಲೆ ಬೆದರಿಕೆ ಗ್ಯಾಂಗ್ ಸ್ಟರ್ ಡಿ. ಕೆ ರಾವ್ ಬಂಧನ

Mumbai News Desk

ಬಿಲ್ಲವರ ಅಸೋಸಿಯೇಶನ್ ಮೀರಾ ರೋಡ್ ಸ್ಥಳೀಯ ಕಚೇರಿಯಿಂದ ಅದ್ಧೂರಿ ಸ್ನೇಹ ಸಮ್ಮಿಲನ;

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶನಿ ಪೂಜೆ ಮತ್ತು ತಾಳಮದ್ದಳೆ.

Mumbai News Desk

ಹರಟೆ ಸಾಹಿತಿ ದಿ. ಚಂದ್ರಶೇಖರ ರಾವ್ ಜನ್ಮದಿನಾಚರಣೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Mumbai News Desk

ಭಾರತ್ ಬ್ಯಾಂಕ್ : ಕುರ್ಲಾ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನನ್ಯಾ ನವೀನ್ ಬಂಗೇರ ಗೆ ಶೇ 88 ಅಂಕ.

Mumbai News Desk