
ಮಲ್ಪೆ, ಸೆ. 18: ತೆಂಕನಿಡಿಯೂರು ಹಿಂದೂ ಯುವ ಸೇನೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 25ನೇ ವರ್ಷದ ಗಣೇಶೋತ್ಸವದ ಸಮಾರೋಪ ತಾರೀಕು 15/9/2026 ರಂದು ತೆಂಕನಿಡಿಯೂರು ಪಂಚಾಯತ್ ಸಮೂದಾಯ ಭವನದಲ್ಲಿ ನಡೆಯಿತು. ರಜತ ಸಮಿತಿ ಅಧ್ಯಕ್ಷ ಗೋಪಾಲ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಭಜನೆ ಹಾಗೂ ಇನ್ನಿತರ ಧಾರ್ಮಿಕ ಸಭೆ ನಡೆಯಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಎ. ಸುವರ್ಣ, ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್, ಉಡುಪಿ ಜೋಸ್ ಅಲುಕಾಸ್ನ ಮ್ಯಾನೇಜರ್ ರಾಜೇಶ್, ರಜತ ಸಮಿತಿ ಗೌರವಾಧ್ಯಕ್ಷ ದಯಾನಂದ ಆಚಾರ್ಯ, ಮನೋಹರ್ ಎಸ್. ಶೆಟ್ಟಿ, ಹಿಂದೂ ಯುವಸೇನೆ ಗೌರವಾಧ್ಯಕ್ಷ ಸುಧಾಕರ ಬಿ. ಬೆಲ್ಕಳೆ , ಭಾಸ್ಕರ್ಚಂದ್ರ ಶೆಟ್ಟಿ, ಸ್ಥಾಪಕಾಧ್ಯಕ್ಷ ಉದಯ ಕುಮಾರ್, ಎಸ್.ಕೆ. ಜಿಲ್ಲಾ ಹಿಂದೂ ಯುವಸೇನೆಯ ಅಧ್ಯಕ್ಷ ಗೌರವಾಧ್ಯಕ್ಷ ಶೇಖರ್ ಶೆಟ್ಟಿ ಹಿರಿಯಡ್ಕ, ಅಧ್ಯಕ್ಷ ಅಜಿತ್ ಕುಮಾರ್ ಕೊಡವೂರು, ಹಿಂದೂ ಯುವಸೇನೆಯ ಅಧ್ಯಕ್ಷ ಅರವಿಂದ್ ಹಾಗೂ ಕಾರ್ಯಾಧ್ಯಕ್ಷರಾದ ಸುರೇಶ ನಾಯಕ್, ಉದಯ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು.

ಸಮ್ಮಾನ: ಸಮಾಜ ಸೇವಕರಾದ ಈಶ್ವರ ಮಲ್ಪೆ, ರವಿ ಕಟಪಾಡಿ, ನಿತ್ಯಾನಂದ ಒಳಕಾಡು, ಕ್ರೀಡಾ ಸಾಧಕ ದರ್ಶನ್ ಉದಯಕುಮಾರ್, ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಸೇವೆಗೈದ ವನಜಾ ಪೂಜಾರ್ತಿ, ಕ್ಷೌರಿಕ ಸತೀಶ್ ಸುವರ್ಣ, ಮಧ್ಯಸ್ಥ ರತ್ನಾಕರ ನೇಜಾರು, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರಘುರಾಮ ನಾಯಕ್ ಕೆಳಾರ್ಕಳಬೆಟ್ಟು, ತೆಂಕನಿಡಿಯೂರು ರುದ್ರಭೂಮಿಯಲ್ಲಿ ಸೇವೆಗೈದ ರವಿರಾಜ್ ರಾವ್ ಅವರನ್ನು ಸಮ್ಮಾನಿಸಲಾಯಿತು.
ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಹಿಂದೂ ಯುವಸೇನೆಯ ಸ್ಥಾಪಕ ಅಧ್ಯಕ್ಷರು, ತೆಂಕನಿಡಿಯೂರು ಶಾಖೆಯ ಎಲ್ಲ ಮಾಜಿ ಅಧ್ಯಕ್ಷರಿಗೆ ಹಾಗೂ ಹಲವಾರು ವರ್ಷಗಳಿಂದ ಸಹಕರಿಸುತ್ತಿರುವ ದಾನಿಗಳನ್ನು ಅಭಿನಂದಿಸಲಾಯಿತು.
ತಾರೀಕು 16/9/2026 ರಂದು ಬುಧವಾರ ದಂದು ಬೆಲ್ಕಳೆಯ ಮಹಾಲಿಂಗೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ಗಣಪತಿ ಬಪ್ಪನನ್ನು ಜಳಸ್ತoಬನ ಮಾಡಲಾಯಿತು.
ವಿಜಯ್ ತೇಜೇಶ್ ಜೆ. ಬಂಗೇರ ಸ್ವಾಗತಿಸಿ, ಬಾಲಕೃಷ್ಣ ಕೆ.ಎಲ್. ವಂದಿಸಿದರು. ಸಚೇಂದ್ರ ಅಂಬಾಗಿಲು ನಿರೂಪಿಸಿದರು.
ಜಯ ಸಿ ಪೂಜಾರಿ
ಕೆಳಾರ್ಕಳ ಬೆಟ್ಟು.




