September 6, 2026
Mumbai News Kannada
ಸುದ್ದಿ

ಪ್ರತಿಷ್ಠಿತ ಬೂಖರ್ ಪ್ರಶಸ್ತಿ ಮೂಡಿಗಿರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್ : ಕನ್ನಡದ ಮೊಟ್ಟ ಮೊದಲ ಕೃತಿಗೆ ಪ್ರಶಸ್ತಿ ಗರಿ





ಕನ್ನಡದ ಹೆಸರಾಂತ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಬೂಖರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ. ‘ಹಾರ್ಟ್ ಲ್ಯಾಂಪ್ ‘ ಎಂಬ ಕೃತಿಗೆ ಈ ಪ್ರಶಸ್ತಿ ಲಭಿಸಿದೆ,ಹಾಗಾಗಿ ಕರುನಾಡಿಗೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ಒಲಿದಿದೆ. ಮಂಗಳವಾರ ಇಂಗ್ಲೆಂಡ್ ನಲ್ಲಿ ನಡೆದ ಸಮಾರಂಭದಲ್ಲಿ ಮುಷ್ತಾಕ್ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಶಸ್ತಿಯ ಮೊತ್ತ ಅಂದಾಜು 57.28 ಲಕ್ಷ ರೂಪಾಯಿ.
ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಹಿರಿಯ ಸಾಹಿತಿ ಬಾನು ಮುಷ್ತಾಕ್ ಮೂಲತ: ಹಾಸನದವರು. ಇತ್ತೀಚೆಗೆ ಫೆಬ್ರವರಿಯಲ್ಲಿ ಅವರ ಕೃತಿ ಲಾಂಗ್ ಲಿಸ್ಟ್ ನಲ್ಲಿ ಆಯ್ಕೆಯಾಗಿತ್ತು . 12 ಕಥೆಗಳನ್ನು ಒಳಗೊಂಡ “ಹಸೀನಾ ಮತ್ತು ಇತರ ಕಥೆಗಳು” ಎಂಬ ಕೃತಿಯನ್ನು ದೀಪಾ ಭಸ್ತಿ ಅವರು ಕನ್ನಡದಿಂದ ದ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ. ಸಾಕಷ್ಟು ಕೃತಿಗಳು ಬೂಕರ್ ಪ್ರಶಸ್ತಿಗೆ ನಿರ್ದೇಶಿತವಾಗಿದ್ದವು. ಅಂತಿಮವಾಗಿ ಆರು ಕೃತಿಗಳು ಸ್ಥಾನ ಪಡೆದಿದ್ದವು. “ಯಾವುದೇ ಕಥೆ ಸಣ್ಣದಲ್ಲ, ಅನುಭವವೆಂಬ ವಸ್ತ್ರದ ಪ್ರತಿಯೊಂದು ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದ ಈ ಪುಸ್ತಕ ರಚಿಸಲಾಗಿದೆ” ಎಂದು ಪ್ರಶಸ್ತಿ ಸ್ವೀಕರಿಸಿ ಬಾನು ಮುಷ್ತಾಕ್ ತಿಳಿಸಿದರು.



Related posts

ಕೊಲ್ಲಾಪುರ: ಯುವತಿಯರ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಫಾರ್ಮಸಿ ವಿದ್ಯಾರ್ಥಿ ಬಂಧನ

Mumbai News Desk

ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಶ್ರೀ ರಾಮ ಪ್ರಸಾದ ವಿತರಣೆ

Mumbai News Desk

ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ, ಕುತ್ಯಾರು  ಶತ ಸಂವತ್ಸರೋತ್ಸವ

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.

Mumbai News Desk

ಮುಂಬಯಿ ಕನ್ನಡ ಸಂಘ: ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

ಭವಾನಿ ಗಿರಿಯಾ ಪೂಜಾರಿ (ಭವಾನಿ ಟೀಚರ್) ನಿಧನ

Mumbai News Desk