September 7, 2026
Mumbai News Kannada
ಮುಂಬಯಿ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ 35ನೇ ವಾರ್ಷಿಕ ಮಹಾಪೂಜೆ





ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ಚಿಂತನೆಯ ಮೇಲೆ ಧನಾತ್ಮಕ ಪರಿಣಾಮ :  ಸಾಣೂರು ಸಾಂತಿಂಜ ಜನಾರ್ದನ ಭಟ್

ಚಿತ್ರ, ವರದಿ: ರಮೇಶ್ ಉದ್ಯಾವರ

ಮೀರಾರೋಡ್, ಜೂ: 17;   ದೇವರ ಉತ್ಸವ ಪ್ರಾಂತೀಯ ವಲಯ, ಗ್ರಾಮಗಳ ಒಂದು ಪರಂಪರೆ. ಇದು ಎಲ್ಲರನ್ನುಸಮಾನತೆಯ ಮೂಲಕ ಒಗ್ಗೂಡಿಸುವ ಹಬ್ಬವಾಗಿವೆ. ಧಾರ್ಮಿಕ, ಸಾಮಾಜಿಕ ಕಳಕಳಿಯೇ ಇದರ ಮೂಲ ಉದ್ದೇಶ. ದೇವಸ್ಥಾನದಲ್ಲಿನ ಶಂಖ, ಜಾಗಟೆ, ಗಂಟೆಗಳ ನಾದ ಮಾನಸಿಕ ಚಿಂತನೆಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ಒತ್ತಡ ಹಾಗೂ ಭಾವತ್ಮಕ ಹಿಡಿತವನ್ನು ಸಾಧಿಸುವ ಶಕ್ತಿಯನ್ನು ಕ್ರಿಯಾಶೀಲಗೊಳಿಸುವುದು. ಭವ್ಯ ಪರಂಪರೆಯ ದೇವಾಲಯಗಳ ರಚನೆಯಿಂದ ಸನಾತ ಧರ್ಮಗಳ ಅನುಷ್ಠಾನ ಭದ್ರತಳಹದಿಯ ಮೇಲೆ ನೆಲೆಸುವುದು ಎಂದು ಮೀರಾಗಾಂವ್ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಆರ್ಚಕ   ಸಾಂತಿಂಜ ಜನಾರ್ಧನ ಭಟ್ ತಿಳಿಸಿದರು.

ಮೀರಾರೋಡ್ ಪೂರ್ವದ ಮೀರಾಗಾಂವ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಸಂಚಾಲಕತ್ವದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೂ. 14 ರಂದು  35 ನೇ ಮಹಾಪೂಜೆಗೆ  ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವವಚಿಸಿದ ಅವರು  ಇಂದಿನ ದಿನವಿಡೀ ಜರುಗಿದ ಧಾರ್ಮಿಕ ಆರಾಧನೆಗಳು ಸಂಕುಚಿತ ಭಾವನೆಯನ್ನು ದೂರಗೊಳಿಸಿ ಸಮಾನತೆಯ ವಾತಾವರಣ ಸೃಷ್ಠಿಸಲಿ. ಗತ ಕಾಲದ ಪ್ರತಿ ಮನೆಗಳ ಸಂಜೆಯ ಭಜನೆ ಮರುಕಳಿಸಲಿ  ಎಂದು ಹೇಳಿದ ಅವರು ಭಕ್ತರಿಗೆ ಪ್ರಸಾದ ನೀಡಿ ಹರಸಿದರು.

 (BOX) ಹಬ್ಬ – ಹರಿದಿನ ಉತ್ಸವಗಳು ಪರಸ್ಪರ ಸ್ನೇಹ, ಬಾಂಧವ್ಯ, ಸಹ ಭಾಳ್ವೆ ಸಮಾನತೆಯ ಭಾವನೆಯನ್ನು ಬೆಸೆಯುತ್ತವೆ. ನಮ್ಮ ದೇಶದಲ್ಲಿ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ, ಸಾಂಪ್ರದಾಯಿಕ ಸಾಂಸ್ಕ್ರತಿಕ ಕಾರ್ಯಗಳು ದೈವಸ್ಥಾನ, ದೇಗುಲಗಳಲ್ಲಿ ಮುಂದುವರಿಯ ಬೇಕು — — ಶಿಮಂತೂರು  ಮಜಲಗುತ್ತು  ಬಾಬಾ ರಂಜನ್ ಶೆಟ್ಟಿ ದೇವಸ್ಥಾನದ   ಆಡಳಿತ ಮೊಕ್ತೇಸರರು

ಬೆಳಿಗ್ಗೆ ವಾಮಂಜೂರು ಎಡಪದವು ಕೃಷ್ಣರಾಜ ಉಪಾಧ್ಯಾಯರ ನೇತೃತ್ವದಲ್ಲಿ  ಪ್ರಧಾನ ಆರ್ಚಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಮತ್ತು ಸುನಂದಾ ಜನಾರ್ಧನ್ ಭಟ್ ದಂಪತಿಯ ಯಜಮಾನಿಕೆಯಲ್ಲಿ  ಮಾಧವ ಭಟ್ ಮತ್ತು  ದೇವಸ್ಥಾನದ ವಿಪ್ರವೃಂದದ  ಪೌರೋತ್ಯದಲ್ಲಿ ಶ್ರೀ ಗಣಪತಿಯಾಗ ಹೋಮ,  ನವಕ ಕಲಶಾಭಿಷೇಕ, ಪ್ರಸನ್ನ ಪೂಜೆ,  ಸಂಜೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನ ಮಂಡಳಿಯವರಿಂದ ಭಜನೆ,  ರಂಗ ಪೂಜೆ, ಮತ್ತು ಮಹಾ ಮಂಗಳಾರತಿ, ಕುಂಟಾಡಿ ಸುರೇಶ್ ಭಟ್ ಅವರಿಂದ ಉತ್ಸವ ಬಲಿ, ಪರಿವಾರ ದೇವರಾದ ಶ್ರೀ ಗಣಪತಿ,ಶ್ರೀ ದುರ್ಗಾಮಾತೆ, ನವಗ್ರಹಗಳಿಗೆ ವಿಶೇಷ ಪೂಜೆ, ಪೂಜೆ  ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

  ಸೇವಾರ್ಥಿಗಳಾದ ದೇಗುಲದ ಪರಮ ಭಕ್ತೆ ಮೀರಾ ಭಾಯಿಯವರನ್ನು ಪ್ರಸಾದ ನೀಡಿ  ಗೌರವಿಸಲಾಯಿತು

ದೇವಸ್ಥಾನದ   ಆಡಳಿತ ಮೊಕ್ತೇಸರ ಶಿಮಂತೂರು  ಮಜಲಗುತ್ತು  ಬಾಬಾ ರಂಜನ್ ಶೆಟ್ಟಿ.   ಕಾರ್ಯದರ್ಶಿ ಪ್ರಮೋದ್ ವಿ. ಮಾತ್ರೆ, ಕೋಶಾಧಿಕಾರಿ ವೆಂಕಟೇಶ್ ಪಾಟೀಲ್,  ಉಪಾಧ್ಯಕ್ಷ ಅನಿಲ್ ಕೆ. ಶೆಟ್ಟಿ , ಜತೆ ಕಾರ್ಯದರ್ಶಿ ಹೇಮಂತ್  ಡಿ. ಸಂಕಪಾಲ್, ಸದಸ್ಯರಾದ ಸುಂದರ್ ವೈ. ಶೆಟ್ಟಿಗಾರ್,  ಪ್ರಸನ್ನ  ಶೆಟ್ಟಿ ಕುರ್ಕಾಲು,  ಪ್ರಸನ್ನ ಬಿ.ಶೆಟ್ಟಿ,   ಕೃಷ್ಣ ಜಿ. ಶೆಟ್ಟಿ, ಸ್ಥಾಪಕರಾದ ದಿ. ವಿಶ್ವನಾಥ್ ಪೂಂಜಾ ಪರಿವಾರ ಸದಸ್ಯರು ಸೇರಿದಂತೆ ಮಹಿಳಾ ಸದಸ್ಯೆಯರು, ವಿವಿಧ ಸಂಘ ಸಂಸ್ಥೆಗಳ, ಸಮುದಾಯ ಸಂಘಟನೆಗಳ ಪದಾಧಿಕಾರಿಗಳು , ಕನ್ನಡೇತರು ಅಪಾರ ಸಂಖ್ಯೆಯಲ್ಲಿ  ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.



Related posts

ತುಳು ಸಂಘ ಬೊರಿವಲಿ ವತಿಯಿಂದ ಶಾಲಾ ಪರಿಕರಗಳ ವಿತರಣೆ”

Mumbai News Desk

ಜ್ಞಾನ ವಿಕಾಸ ಮಂಡಳದ ಮೆಹತಾ ಕಾಲೇಜಿನಲ್ಲಿ ಘಟಿಕೋತ್ಸವ:

Mumbai News Desk

ಅಭಿನವ ಮಂತ್ರಾಲಯ ಜೋಗೇಶ್ವರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಸಂಪನ್ನ

Mumbai News Desk

ಕರ್ನಾಟಕ ಸಂಘ ಪನ್ವೆಲ್ ಗಣೇಶೋತ್ಸವ, ಸತ್ಯನಾರಾಯಣ ಮಹಾಪೂಜೆ,ಮಾತಾ ಕಿ ಚೌಕಿ, ಭಕ್ತಿ ಸಂಭ್ರಮದೊಂದಿಗೆ ಆಚರಣೆ .

Mumbai News Desk

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಕೋಪರಖೈರನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ 46ನೇ ಸಂಸ್ಥಾಪನಾ ದಿನಾಚರಣೆ

Mumbai News Desk