September 6, 2026
Mumbai News Kannada
ಮುಂಬಯಿ

ಒಕ್ಕಲಿಗರ ಸಂಘದ ಮಹಾರಾಷ್ಟ್ರ ಪದಾಧಿಕಾರಿಗಳು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ, ಮುಂಬೈಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಭರವಸೆ





ಮುಂಬಯಿ ಜೂ.26: ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ಸರ್ಕಾರದ ಮಾಜಿ ಸಚಿವ ಡಾ| ಕೆ. ಸಿ ನಾರಾಯಣ ಗೌಡ ನೇತೃತ್ವದ ತಂಡ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬಯಿಯಲ್ಲಿನ ಮುಖ್ಯಮಂತ್ರಿಕಚೇರಿಯಲ್ಲಿ ಭೇಟಿ ಮಾಡಿ ಮುಂಬಯಿಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕಾಗಿ ಸಬ್ಸಿಡಿ ದರದಲ್ಲಿ ಭೂಮಿ ಹಂಚಿಕೆ ಅಥವಾ ನಿವೇಶನ ನೀಡುವರೇ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ (ಐಎಎಸ್) ಅವರನ್ನೂ ಭೇಟಿಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷರಾದ ರಾಜೇ ಗೌಡ, ಮಾಜಿ ಅಧ್ಯಕ್ಷರಾದ ಜಿತೇಂದ್ರ ಜೆ, ಗೌಡ, ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಮತ್ತಿತರರು ಹಾಜರಿದ್ದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರಿಗೆ ಒಕ್ಕಲಿಗರ ಸಂಘದ ಸಮಗ್ರ ಮಾಹಿತಿಯನ್ನು ತಿಳಿಸಿ ಮುಂಬೈಯಲ್ಲಿ ಅಗತ್ಯವಾಗಿ ಒಕ್ಕಲಿಗ ಭವನ ನಿರ್ಮಾಣವಾಗುವಲ್ಲಿ ಸಹಕಾರ ನೀಡಬೇಕೆಂದು ವಿನಂತಿಸಿದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಎಲ್ಲಾ ರೀತಿಯ ಸಹಕಾರವನ್ನು ಸರಕಾರದ ಮೂಲಕ ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಗೌರವಿಸಲಾಯಿತು.

B. Dinesh Kulal
Mob.: 9821868674



Related posts

ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬೈ ಸ್ಥಳೀಯ ಸಮಿತಿಯ ಸತ್ಯನಾರಾಯಣ ಪೂಜೆ, 150 ನೇ ತಿಂಗಳ ಭಜನೆ, ಹಳದಿ ಕುಂಕುಮ

Mumbai News Desk

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗೆ ಚುನಾವಣಾ ದಿನಾಂಕ ಪ್ರಕಟ : ಜನವರಿ 15ರಂದು ಮತದಾನ, ಜ. 16ಕ್ಕೆ ಫಲಿತಾಂಶ

Mumbai News Desk

ಮುಂಬೈ ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣ : ಗ್ಯಾಂಗ್ ಸ್ಟರ್ ಛೋಟಾ ರಾಜನ್ ಗೆ ಜಾಮೀನು

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ, ಸುವರ್ಣ ಸಂಭ್ರಮದ ಅಂಗವಾಗಿ ವೃದ್ಧಾಶ್ರಮಕ್ಕೆ ಭೇಟಿ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾ ಭಾಯಂದರ್ 16ನೇ ವಾರ್ಷಿಕ ಪಾದಯಾತ್ರೆ.

Mumbai News Desk

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ -ಮೊಸರು ಕುಡಿಕೆ ಸಂಭ್ರಮ, ಭಕ್ತಿ ಸಂಗೀತ ಕಾಠ್ಯಕ್ರಮ,

Mumbai News Desk