September 6, 2026
Mumbai News Kannada
ಪ್ರಕಟಣೆ

ಜುಲೈ 20 : ವೀರ ಕೇಸರಿ ಸಂಘ ಮೀರಾ -ಭಾಯಂದರ್ ವತಿಯಿಂದ ಭಗವದ್ಗೀತಾ ಪರೀಕ್ಷಾ ಸ್ಪರ್ಧೆ





ಮೀರಾ – ಭಾಯಂದರ್ ಇಲ್ಲಿನ ಹೆಸರಾಂತ ವೀರ ಕೇಸರಿ ಸಂಸ್ಥೆಯು ನಾಸ್ತಿಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಸದಾ ಕಾಪಾಡಿಕೊಳ್ಳುವಲ್ಲಿ ನಿರಂತರ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಸಂಸ್ಥೆಯ ವತಿಯಿಂದ ಕಳೆದ ವರ್ಷ ಸಂಪೂರ್ಣ ರಾಮಾಯಣ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿ ಇದೀಗ ಭಗವದ್ಗೀತೆಯ ಪರೀಕ್ಷೆಯನ್ನು ಕನ್ನಡ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಸ್ಪರ್ಧೆಯನ್ನು ಇದೇ ಬರುವ ಜುಲೈ 20 ರ ರವಿವಾರದಂದು ಆಯೋಜಿಸಿದೆ. ವಿಧ್ವಾನ್ ಶ್ರೀ ರಾಧಾಕೃಷ್ಣ ಭಟ್ ರವರ ಮಾರ್ಗದರ್ಶನದೊಂದಿಗೆ ಮತ್ತು ಶ್ರೀ ಸಾಣೂರು ಸಾಂತಿಂಜ ಜನಾರ್ದನ್ ಭಟ್ ಆಶೀರ್ವಾದದಿಂದ ಹಾಗೂ ವೀರ ಕೇಸರಿ ಮೀರಾ ಭಯಂದರ್ ನ ಅಧ್ಯಕ್ಷರಾದ ಹರೀಶ್ ರೈಯವರ ನೇತೃತ್ವದಲ್ಲಿ ಭಾಯಂದರ್ ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ಭಯಂದರ್ ಇಲ್ಲಿ ನಡೆಯಲಿದೆ.

ಪರೀಕ್ಷೆಯ ನಿಯಮಗಳು : ಪರೀಕ್ಷಾ ಸಮಯ ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದ್ದು, ಬಹು ಆಯ್ಕೆಯ ಪ್ರಶ್ನೆಗಳು (Multiple choice question) ಇರುತ್ತದೆ. ಹಾಗೂ ಭಗವದ್ಗೀತೆಯ ಕುರಿತು 100 ಪದಗಳನ್ನೊಳಗೊಂಡ ಟಿಪ್ಪಣಿ ಬರೆಯಬೇಕು.

ಪರೀಕ್ಷಾ ವಿಭಾಗಗಳು : 06 ವರ್ಷದಿಂದ 15 ವರ್ಷದವರಿಗೆ 15 ಪ್ರಶ್ನೆಗಳ ಪರೀಕ್ಷೆ (50 ಅಂಕಗಳು), 16 ವರ್ಷದಿಂದ 30 ವರ್ಷದವರಿಗೆ 30 ಪ್ರಶ್ನೆಗಳ ಪರೀಕ್ಷೆ (50 ಅಂಕಗಳು), 30ವರ್ಷದಿಂದ 55 ವರ್ಷದವರಿಗೆ 35 ಪ್ರಶ್ನೆಗಳ ಪರೀಕ್ಷೆ (80 ಅಂಕಗಳು), 56 ವರ್ಷದಿಂದ ಮೇಲ್ಪಟ್ಟವರಿಗೆ 30 ಪ್ರಶ್ನೆಗಳ ಪರೀಕ್ಷೆ (100 ಅಂಕಗಳು)

ಆಯ್ಕೆಯಾದ ಎಲ್ಲಾ ವಿಭಾಗದ ಸ್ಪರ್ಧಿಗಳಿಗೆ ಪ್ರಥಮ ರೂ.5,555/-, ದ್ವಿತೀಯ ರೂ. 4,444/-, ತೃತೀಯ ರೂ. 3,333/- ಬಹುಮಾನಗಳನ್ನು ಮತ್ತು ಸ್ಪರ್ಧಿಗಳಿಗೆ ಸಂಸ್ಥೆಯಿಂದ ಸರ್ಟಿಫಿಕೇಟ್ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಹರೀಶ್ ರೈಯವರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.



Related posts

ಕುಲಾಲ ಸಂಘ ಮುಂಬಯಿಯ ಕೇಂದ್ರ ಕಾರ್ಯಾಲಯದಲ್ಲಿ  ಗುರು ಪೂರ್ಣಿಮೆ ಆಚರಣೆ.

Mumbai News Desk

ಕುಲಾಲ ಸಂಘ ಮುಂಬಯಿ, ಮಾ.8ಕ್ಕೆ ಕುಲಾಲ ಭವನ ಮಂಗಳೂರು, ಇದರ ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ.

Mumbai News Desk

ಸೆ. 5 ರಂದು ಭಾರತದ “Metro Man of India” ಪದ್ಮವಿಭೂಷಣ ಡಾ. ಇ ಶ್ರೀಧರನ್ ಗೆ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ಪ್ರಶಸ್ತಿ ‘

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಮಹಿಳಾ ವಿಭಾಗ. ಅ. 4 ರಂದು ”ಆಟಿದ ಒಂಜಿ ಪೊರ್ಲು” ಕಾರ್ಯಕ್ರಮ.

Mumbai News Desk

ಶ್ರೀ ಗುರು ನಾರಾಯಣ ಸೇವಾ ಸಮಿತಿ ವಸಯಿ,  ಮಾ. 9ರಂದು 29ನೇ ವಾರ್ಷಿಕ ಮೂರ್ತಿ ಪ್ರತಿಷ್ಠಾಪನ ದಿನಾಚರಣೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ: ಜು. 16ರಂದು ಮಾಸಿಕಸಂಕ್ರಮಣ ಪೂಜೆ

Mumbai News Desk