30 C
Mumbai
April 24, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ನ ಮಲಾಡ್ ಪೂರ್ವದ ಕೊಂಕಣಿಪಾಡದ ಶಾಖೆಗೆ 10 ನೇ ವರ್ಷದ ಸಂಭ್ರಮ.





ಭಾರತ್ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿರುವ ಎಲ್ಲಾ ಗ್ರಾಹಕರಿಗೂ ಸಂತೃಪ್ತಿಯ ಸೇವೆ ನೀಡಿದೆ – ಜನಾರ್ಧನ್ ಪೂಜಾರಿ 

ಚಿತ್ರ ವರದಿ ::ದಿನೇಶ್ ಕುಲಾಲ್ 

ಭಾರತ್ ಬ್ಯಾಂಕ್ ನ  ಮಲಾಡ್ ಪೂರ್ವದ ಕೊಂಕಣಿಪಾಡದ 70ನೇ ಶಾಖೆಗೆ 10 ನೇ ವರ್ಷದ ಸಂಭ್ರಮಾಚರಣೆ ಜು 14 ರಂದು ನಡೆಯಿತು.

 ಬೆಳಿಗ್ಗೆ ಗಣ ಹೋಮವಾದ ಬಳಿಕ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ದೀಪ ಬೆಳಗಿಸಿ 10ನೇ ವರ್ಷದ ಸಂಭ್ರಮಕ್ಕೆ ಚಾಲನೆ ನೀಡಿ, ಸಿಬ್ಬಂದಿಗಳಿಗೆ ಮತ್ತು ಗ್ರಾಹಕರಿಗೆ ಶುಭ ಹಾರೈಸಿದರು.

ಶಾಖಾ ಪ್ರಬಂಧಕರಾದ  ಧನಂಜಯ್ ಕೋಟ್ಯಾನ್ ಸ್ವಾಗತಿಸಿ ಬ್ಯಾಂಕಿನ ವ್ಯವಹಾರಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿದರು. 

 ಬ್ಯಾಂಕಿನ ಜನರಲ್ ಮ್ಯಾನೇಜರ್ ಜನಾರ್ಧನ್ ಪೂಜಾರಿ ಮಾತನಾಡಿ ಅತಿ ಕಡಿಮೆ ಸಮಯದಲ್ಲಿ ಭಾರತ್ ಬ್ಯಾಂಕ್ ದೇಶದಲ್ಲಿ ಉನ್ನತ ಸ್ಥಾನವನ್ನು ಪಡೆದಿದೆ. ಈ ಪರಿಸರದಲ್ಲಿ ಬ್ಯಾಂಕಿನ ವ್ಯವಹಾರಗಳು ಗ್ರಾಹಕರನ್ನು ತಲುಪಿ ಬ್ಯಾಂಕಿನ ಸೌಲಭ್ಯಗಳು ಅವರಿಗೆ ಸಂತೋಷವನ್ನು ನೀಡುವಷ್ಟು ಸೇವೆಯನ್ನು ಸಿಬ್ಬಂದಿ ವರ್ಗದವರು ಮಾಡಿರುವುದು ಅಭಿನಂದನೀಯ. ಬ್ಯಾಂಕಿನ ಕಾರ್ಯಧ್ಯಕ್ಷರಾಗಿರುವ ಸೂರ್ಯಕಾಂತ್ ಜಯ ಸುವರ್ಣ  ಮತ್ತು ನಿರ್ದೇಶಕ ಮಂಡಳಿಯವರು. ಉನ್ನತ ಅಧಿಕಾರಿಗಳು ಬ್ಯಾಂಕಿನ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿದ್ದುರಿಂದ ಹಲವಾರು ಪ್ರಶಸ್ತಿಗಳು ಲಭಿಸಿದೆ. ಭಾರತ್ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿರುವ ಎಲ್ಲಾ ಗ್ರಹಕರಿಗೂ ನಮ್ಮ ಸೇವೆ ಸಂತೃಪ್ತಿಯನ್ನು ನೀಡಿದೆ ಎಂದು ತಿಳಿಸಿದರು.

ಬ್ಯಾಂಕ್ ನ , ಉಪಕಾರ್ಯಧ್ಯಕ್ಷ ನ್ಯಾಯವಾದಿ ಸೋಮನಾಥ್ ಅಮೀನ್. ನಿರ್ದೇಶಕರುಗಳಾದ ಗಂಗಾಧರ್ ಜೆ ಪೂಜಾರಿ, ಭಾಸ್ಕರ್ ಎಂ ಸಾಲ್ಯಾನ್,  ಸಂತೋಷ್ ಕೆ ಪೂಜಾರಿ,  ಮೋಹನ್ ಜಿ ಪೂಜಾರಿ, ನಿರಂಜನ್ ಲಕ್ಷ್ಮಣ್ ಪೂಜಾರಿ. ಸುರೇಶ್ ಬಿ ಸುವರ್ಣ
ಸಿಬ್ಬಂದಿಗಳನ್ನು ಮತ್ತು ಗ್ರಾಹಕರನ್ನು ಗೌರವಿಸಿದರು. 

 ಈ ಸಂದರ್ಭದಲ್ಲಿ ಗ್ರಾಹಕರುಗಳಾದ  ಸಯ್ಯದ್ ಸಲೀಮ್, ರಘುನಾಥ್ ಕೊಠಾರಿ,  ಪ್ರಭಾಕರ್ ಶೆಟ್ಟಿ,   ನವೀನ್ ಕರ್ಕೇರ .ಸುರೇಶ್ ಕರ್ಕೇರ, ಸಂತೋಷ್ ಶೆಟ್ಟಿ,  ಚಂದ್ರಶೇಖರ್ ಶೆಟ್ಟಿ,  ನಿತ್ಯಾನಂದ ಪೂಜಾರಿ,  ರಾಮ ಡಿ ಪೂಜಾರಿ,  ಜಯ ಪೂಜಾರಿ, ಮತ್ತಿತರ ಗ್ರಾಹಕರು ಉಪಸ್ಥರಿದ್ದರು.

ಶಾಖಾ ಸಿಬ್ಬಂದಿಗಳಾದ ಜಯಲಕ್ಷ್ಮಿ ತೋನ್ಸೆ, ಹರಿಣಿ ಎಸ್ ಮಲ್ಪೆ, ಧೀರಜ್ ಪೂಜಾರಿ, ಅವಿನಾಶ್ ಪೂಜಾರಿ. ದೀಪ್ತಿ ಆರ್ ಪೂಜಾರಿ, ತನ್ವಿ ಪೂಜಾರಿ. ಮತ್ತಿತರ ಶಾಖೆಗಳ ಪ್ರಬಂಧಕರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ದೀಪ್ತಿ ಪೂಜಾರಿ ಪ್ರಾರ್ಥನೆ ಮಾಡಿದರು, ತನ್ವಿ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ನೀಡಿದರು.

ಪುರೋಹಿತರಾದ ಶೇಖರ್ ಶಾಂತಿ ಉಳ್ಳೂರು ಗಣಹೋಮ ನಡೆಸಿದರು .ದಯಾನಂದ ಶಾಂತಿ ಸಹಕರಿಸಿದರು.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬೈ ಶಾಖೆಯಲ್ಲಿ ಮಂಡಳಿಯ 124ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಶ್ರೀಮದ್ಭಾರತ ಮಂಡಳಿಯ ೧೪೬ ನೇ ಮಂಗಳೋತ್ಸವ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿ, ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ  ರತ್ನಾ ಡಿ ಕುಲಾಲ್  ಆಯ್ಕೆ

Mumbai News Desk

ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆ, ಮಾಹಿಮ್ ಘಟಕದ ವಿಸ್ತರಣೆಯ ಉದ್ಘಾಟನೆ

Mumbai News Desk

ಬಂಟರ ಸಂಘ, ಮುಂಬಯಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ‌ ವಿಭಾಗ- ಆಟಿದ ಪೊರ್ಲ್ ತಿರ್ಲ್ ಕಾರ್ಯಕ್ರಮ

Mumbai News Desk

ಪಾಲ್ಗರ್ ಜಿಲ್ಲಾ ಬಿಲ್ಲವರಿಂದ ವಿಹಾರ ಕೂಟ : ಮುಂಬೈ ಬಿಲ್ಲವರ   ಒಗ್ಗಟ್ಟು ಬಲಿಷ್ಠ ಗೊಳಿಸಲು ಚಂದ್ರಶೇಖರ್ ಪೂಜಾರಿ ಕರೆ

Mumbai News Desk