July 23, 2026
Mumbai News Kannada
ಮುಂಬಯಿ

ಅಭಿನವ ಮಂತ್ರಾಲಯ ಜೋಗೇಶ್ವರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಸಂಪನ್ನ







———-

ಚಿತ್ರ, ವರದಿ: ರಮೇಶ್ ಉದ್ಯಾವರ

ಚಲನಶೀಲ ಬದುಕಿಗೆ ವರ್ತಮಾನದಲ್ಲಿ ಜೀವನ ಮೌಲ್ಯಗಳೇ ಮುಖ್ಯವೆಂಬುದನ್ನು ಸಾರಿದವರು ಶ್ರೀ ರಾಘವೇಂದ್ರ ಸ್ವಾಮಿಗಳು: ಜೋರಾಪುರ ನರಸಿಂಹ ಮೂರ್ತಿ

ಜೊಗೇಶ್ವರಿ, ಆ 12:. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಆ. 10 ರಂದು ಜೋಗೇಶ್ವರಿ ಪಶ್ಚಿಮದ ರಿಲೀಫ್ ರೋಡ್ ಗುಲ್ಶನ್ ನಗರದ ರಾಯರ ಅಭಿನವ ಮಂತ್ರಾಲಯ ಮಠದಲ್ಲಿ ಮಧ್ವಾಚಾರ್ಯ ಮೂಲ ಸಂಸ್ಥಾನದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುಧೇಂದ್ರ ತೀರ್ಥರ ಶುಭಾಶೀರ್ವಾದೊಂದಿಗೆ ಪೂರ್ವಾರಾಧನೆಯಿಂದ, ಮಧ್ಯಾರಾಧನೆ,  ಉತ್ತಾರಾರಾಧನೆ ಸಹಿತ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳೊಂದಿಗೆ ಭಕ್ತಿ ಭಾವದೊಂದಿಗೆ ಜರಗಿತ್ತು.

        ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಕುರಿತು ಮಾತನಾಡಿದ ಜೋರಾಪುರ ನರಸಿಂಹ ಮೂರ್ತಿ, ವಿಶ್ವ ಹಿತಬಯಸಿ,  ವಿಶ್ವಧರ್ಮದ ಉದ್ದಾರಕರಾಗಿ ಚಲನಶೀಲ ಬದುಕಿಗೆ ವರ್ತಮಾನದಲ್ಲಿ ಜೀವನ ಮೌಲ್ಯಗಳೇ ಮುಖ್ಯವೆಂಬುದನ್ನು ಸಾರಿದವರು ಶ್ರೀ ರಾಘವೇಂದ್ರ ಸ್ವಾಮಿಗಳು. ಪರಮಾತ್ಮನ ಸೇವೆಯಿಂದ ಜೀವನ, ಅದರಲ್ಲಿ ದೇವರ ಸೇವೆ ಮಾಡುವವರೇ ಅತ್ಯಂತ ಶ್ರೇಷ್ಠರು. ಜಗತ್ತಿನ ನಿರ್ಮಾಣದಲ್ಲಿ ಪರಮಾತ್ಮನು ಆದಿಕಾಲದಿಂದಲೂ ಇದ್ದು ಅನಾದಿಕಾಲದ ವರೆಗೆ ಜೊತೆಗೆ ಇರುವನು , ಮಾನವ ಜನ್ಮ ಅತ್ಯಂತ ದೊಡ್ಡದು, ಮಾನವ ಧರ್ಮ ಎಲ್ಲಕ್ಕಿಂತ ಶ್ರೇಷ್ಠ.  ಪಶು ಪಕ್ಷಿ  ಜೀವ ಇದ್ದರೂ ಅವರಲ್ಲಿ ಪಾಪ ಪುಣ್ಯದ ವ್ಯವಸ್ಥೆ ಇಲ್ಲ. ಪುಣ್ಯದ ಕಾರ್ಯದಿಂದ ಭಗವಂತನು ಸೇರುವ ವ್ಯವಸ್ಥೆ ಶ್ರೀರಾಯರಲ್ಲಿ ಕಾಣಬಹುದು.   ಶ್ರೀ ಮೂಲ ರಾಮದೇವರು ರಾಘವೇಂದ್ರ ಯತಿ ಸಾರ್ವಭೌಮರ ಪರಂಪರೆಗೆ ಆರಾಧ್ಯ ದೇವರಾದ ಶ್ರೀರಾಮಚಂದ್ರರ ಅಪ್ರತಿಮ  ಆರಾಧಕರು.  ಹಲವಾರು ಪವಾಡಗಳ ಮೂಲಕ ಮೆರೆದು ಅವಧೂತರಾಗಿ ಲೋಕದ ಒಳಿತನ್ನು ಬಯಸಿದವರು. ಸರ್ವ ಜನಾಂಗದರು ಪೂಜಿತರಾಗಿರುವ ರಾಘವೇಂದ್ರ ಸ್ವಾಮಿಗಳು ಸರ್ವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ..

     ಆ 11 ರಂದು ಮಧ್ಯಾರಾಧನೆಯ ಪ್ರಯುಕ್ತ ಬೆಳಿಗ್ಗೆ ಪ್ರಾತಃಕಾಲದಲ್ಲಿ ನೈರ್ಮಲ್ಯ ವಿಸರ್ಜನೆ ವೇದಪರಾಯಣ ಪಂಚಾಮೃತ ಅಭಿಷೇಕ ಸರ್ವ ಸೇವೆ ಸಂಕಲ್ಪ ಪೂಜೆ ಜರುಗಿದ ನಂತರ ಗಜರಥದಲ್ಲಿ ರಾಯರ ಪ್ರತಿಬಿಂಬದೊಂದಿಗೆ ಬೃಂದಾವನದ ವೃತ್ತದಲ್ಲಿ ಚಂಡೆ ಭಜನೆಯೊಂದಿಗೆ ರಾಯರ ರಥೋತ್ಸವ ಶೋಭಾಯಾತ್ರೆ ಜರುಗಿತು. ಶ್ರೀ ಪ್ರಹ್ಲಾದರಾಯರ ಕನಕಮ್ಮ ಪೂಜೆ ಬ್ರಾಹ್ಮಣ ಅಲಂಕಾರ ಹಷ್ಟೋಧಕ ನೆರವೇರಿದ ಬಳಿಕ ಮಧ್ಯಾಹ್ನದ ಮಹಾಮಂಗಳಾರತಿ ಜರುಗಿತು ಆಬಳಿಕ ತೀರ್ಥ ಪ್ರಸಾದ ಅನ್ನ ಸಂತರ್ಪಣೆ ನೆರವೇರಿತು. 

     ರಾಯರ ಧಾರ್ಮಿಕ ಆರಾಧನೆಯಲ್ಲಿ ವಿವಿಧ ಭಜನಾ ಸಂಘಟನೆಗಳಿಂದ ಸಾಮೂಹಿಕ ಭಜನಾ ಕಾರ್ಯಕ್ರಮಗಳು ಜರುಗಿದವು.

     ಭೌತಿಕವಾಗಿಯೂ ಆಧ್ಯಾತ್ಮಿಕವಾಗಿ ಗುರುರಾಯರೆಂದೇ ಕರೆಯಲ್ಪಡುವ ಮಹಾ ಗುರುವಿನ ಪ್ರಪಂಚಾದ್ಯಂತ ಸಹಸ್ರಾರು ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುತ್ತಿರುವ ಆರಾಧನೆಯಲ್ಲಿ ರಾಯರ ಜೊಗೇಶ್ವರಿಯ ಅಭಿನಯ ಮಂತ್ರಾಲಯದ ಬೃಂದಾವನದಲ್ಲಿ ಪ್ರಬಂಧಕರಾದ ಕಿಶೋರ್ ದೇಸಾಯಿ ವಿಚಾರಕರ್ತರಾದ ದೀಪಕ್ ವೈದ್ಯ, ಅರ್ಚಕರಾದ ವ್ಯಾಸಾಚರ್ಯ, ಪ್ರಹ್ಲಾದಾಚಾರ್ಯ ಇನ್ನಿತರ ವಿಪ್ರವೃಂದರು ಸೇರಿ ವಿವಿಧ ಪೂಜಾ ಕೖಂಕರ್ಯ  ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ರಾಯರ ಸದ್ಭಕ್ತರಿಗೆ ತೀರ್ಥಪ್ರಸಾದ ಮಂತ್ರಾಕ್ಷತೆ ವಿತರಿಸಿದರು.

     ಆಗಸ್ಟ್ 10 ರಿಂದ ಪ್ರಾರಂಭಗೊಂಡು ಆ 12. ರಂದು ಉತ್ತರಾಧನೆಯೊಂದಿಗೆ ಕೊನೆಗೊಂಡ ಮೂರು ದಿನಗಳ ಆರಾಧನೆಯಲ್ಲಿ ದಿನಂಪ್ರತಿ ರಾಯರ ಬೃಂದಾವನಕ್ಕೆ ಅಭಿಷೇಕ, ಪೂಜಾ ವಿಧಿ ವಿಧಾನಗಳ ಜೊತೆಗೆ ರಥೋತ್ಸವ ಶೋಭಾಯಾತ್ರೆ ಜರಗುತ್ತಿದ್ದು ಭಕ್ತರಿಗೆಲ್ಲಾ ಅನ್ನ ಸಂತರ್ಪಣೆ ನೆರವೇರಿತು.

   ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಕುರಿತು ಮಾತನಾಡಿದ ಜೋರಾಪುರ ನರಸಿಂಹ ಮೂರ್ತಿ, ವಿಶ್ವ ಹಿತಬಯಸಿ,  ವಿಶ್ವಧರ್ಮದ ಉದ್ದಾರಕರಾಗಿ ಚಲನಶೀಲ ಬದುಕಿಗೆ ವರ್ತಮಾನದಲ್ಲಿ ಜೀವನ ಮೌಲ್ಯಗಳೇ ಮುಖ್ಯವೆಂಬುದನ್ನು ಸಾರಿದವರು ಶ್ರೀ ರಾಘವೇಂದ್ರ ಸ್ವಾಮಿಗಳು. ಪರಮಾತ್ಮನ ಸೇವೆಯಿಂದ ಜೀವನ ಅದರಲ್ಲಿ ದೇವರ ಸೇವೆ ಮಾಡುವವರೇ ಅತ್ಯಂತ ಶ್ರೇಷ್ಠರು ಜಗತ್ತಿನ ನಿರ್ಮಾಣದಲ್ಲಿ ಪರಮಾತ್ಮನು ಆದಿಕಾಲದಿಂದಲೂ ಇದ್ದು ಅನಾದಿಕಾಲದ ವರೆಗೆ ಜೊತೆಗೆ ಇರುವನು , ಮಾನವ ಜನ್ಮ ಅತ್ಯಂತ ದೊಡ್ಡದು ಮಾನವ ಧರ್ಮ ಎಲ್ಲಕ್ಕಿಂತ ಶ್ರೇಷ್ಠ  ಪಶು ಪಕ್ಷಿ  ಜೀವ ಇದ್ದರೂ ಪಾಪ ಪುಣ್ಯದ ವ್ಯವಸ್ಥೆ ಇಲ್ಲ. ಪುಣ್ಯದ ಕಾರ್ಯದಿಂದ ಭಗವಂತನು ಸೇರುವ ವ್ಯವಸ್ಥೆ ಶ್ರೀರಾಯರಲ್ಲಿ ಕಾಣಬಹುದು.   ಶ್ರೀ ಮೂಲ ರಾಮದೇವರು ರಾಘವೇಂದ್ರ ಯತಿ ಸಾರ್ವಭೌಮರ ಪರಂಪರೆಗೆ ಆರಾಧ್ಯ ದೇವರಾದ ಶ್ರೀರಾಮಚಂದ್ರರ ಅಪ್ರತಿಮ  ಆರಾಧಕರು.  ಹಲವಾರು ಪವಾಡಗಳ ಮೂಲಕ ಮೆರೆದು ಅವಧೂತರಾಗಿ ಲೋಕದ ಒಳಿತನ್ನು ಬಯಸಿದವರು. ಸರ್ವ ಜನಾಂಗದರು ಪೂಜಿತರಾಗಿರುವ ರಾಘವೇಂದ್ರ ಸ್ವಾಮಿಗಳು ಸರ್ವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯವತಿಯಿಂದಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಗ್ರೀಷ್ಮ ಪ್ರಕಾಶ್ ಕರ್ಕೇರ ಗೆ ಶೇ 82 ಅಂಕ.

Mumbai News Desk

ಗೊರೆಗಾಂವ್ ಕರ್ನಾಟಕ ಸಂಘದ 67ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ ಸಮಾರಂಭಕ್ಕೆ ಚಾಲನೆ,

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠಕ್ಕೆ ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವರಾದ ಚಂದ್ರಕಾಂತ್ ಪಾಟೀಲ್ ಭೇಟಿ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬಯಿ ಶಾಖೆಯ ಮಹಿಳಾ ವಿಭಾಗದಿಂದ ಅರಿಶಿನ ಕುಂಕುಮ ಕಾರ್ಯಕ್ರಮ

Mumbai News Desk

 ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

Mumbai News Desk