
ಪಂದ್ಯಾಟದಲ್ಲಿ ಭಾಗವಹಿಸುವುದೇ ಮುಖ್ಯ, ಸೋಲು ಗೆಲುವು ಮುಖ್ಯವಲ್ಲ. :ಅಂಬಲ್ಪಾಡಿ ಗಣೇಶ್ ಕಾಂಚನ್,
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಆ. 20: ನಗರದ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘಟನೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಡಳಿತದಲ್ಲಿರುವ ಎಂವಿಎಂ ಇಂಟರ್ನ್ಯಾಷನಲ್ ಶಾಲೆಯು ಮಹಾರಾಷ್ಟ್ರ ಮತ್ತು ಗೋವಾ ವ್ಯಾಪ್ತಿ ಯ ಇಂಟರ್ನೆಷನಲ್ ಶಾಲಾ ವಿದ್ಯಾರ್ಥಿಗಳಿಗಾಗಿ 3 ದಿನಗಳ ಸಿಬಿಎಸ್ಇ ಕ್ಲಸ್ಟರ್ 9 ವಾಲಿಬಾಲ್ ಪಂದ್ಯಾವಳಿಯು ಆ 20 ರಂದು ಅಂಧೇರಿ ಪಶ್ಚಿಮದ ವೀರ ದೇಸಾಯಿ ಯ ಬಳಿ ಇರುವ ಮೊಗವೀರ ವ್ಯವಸ್ಥಾಪಕ ಮಂಡಳಿಯ ಶಾಲಿನಿ ಜಿ .ಶಂಕರ್ ಸಭಾಂಗಣದಲ್ಲಿ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಂಬಲ್ಪಾಡಿ ಗಣೇಶ್ ಕಾಂಚನ ಅವರ ಅಧ್ಯಕ್ಷತೆಯಲ್ಲಿಉದ್ಘಾಟನೆಗೊಂಡಿತು.
ಅಧ್ಯಕ್ಷತೆಯನ್ನು ವಹಿಸಿದ ಮಂಡಳಿಯ ಅಧ್ಯಕ್ಷ ರಾದ ಅಂಬಲ್ಪಾಡಿ ಗಣೇಶ್ ಕಾಂಚನ್ ಅವರು ವಾಲಿಬಾಲ್ ಟೂರ್ನಮೆಂಟ್ ಆಯೋಜನೆ ಬಗ್ಗೆ ಮಾತನಾಡಿ ಮುಂಬೈಯಲ್ಲಿ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಾಲಿಬಾಲ್ ಪಂದ್ಯಾಟ ಜರಗುತಿದೆ . ನಾನು ಕೂಡ ಒಬ್ಬ ವಾಲಿಬಾಲ್ ಆಟಗಾರ, ಪಂದ್ಯಾಟದಲ್ಲಿ ಭಾಗವಹಿಸುವುದೇ ಮುಖ್ಯ, ಸೋಲು ಗೆಲುವು ಮುಖ್ಯವಲ್ಲ. ಪಂದ್ಯದ ಫಲಿತಾಂಶದ ಬಗ್ಗೆ ಗಮನ ಕೊಡದೆ ನೀವು ಮುನ್ನಡೆಯಿರಿ. ಎರಡು ದಿನಗಳಲ್ಲಿ ಸುರಿದ ಮಳೆಯನ್ನು ಕಂಡಾಗ ಈ ಪಂದ್ಯಾಟ ನಡೆಯುತ್ತದೆಯೋ ಇಲ್ಲವೋ ಎಂಬ ಸಂಶಯ ನಮ್ಮಲ್ಲಿತ್ತು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರೀಡಾಪಟುವನ್ನು ಮುನ್ನಡೆಸಲು ನಾವೆಲ್ಲರೂ ತಯಾರಿ ಮಾಡಿದ್ದೇವೆ. ನೀವೆಲ್ಲರೂ ಉತ್ತಮ ರೀತಿಯಲ್ಲಿ ಆಡುವ ಮೂಲಕ ನಮಗೆ ಸಹಕಾರ ನೀಡಿ. ಎಂದು ನುಡಿದರು.




ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂಧೇರಿ ಪಶ್ಚಿಮದ ಶಾಸಕ ಅಮಿತ್ ಸಾಟಮ್ ಅವರು ದೀಪ ಪ್ರಜ್ವಲನೆ ಮಾಡಿಸ್ಪರ್ಧೆಯನ್ನು ಉದ್ಘಾಟನೆ ಮಾಡಿಬಳಿಕ ಮಾತನಾಡಿದ ಅವರು ಮುಂಬಾಯಿಯಲ್ಲಿ ನಡೆಯುವ ಈ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಮಹಾರಾಷ್ಟ್ರ ರಾಜ್ಯ ಹಾಗೂ ಗೋವಾ ರಾಜ್ಯ ದ ವಿವಿದೆಡೆಯಿಂದ ಬಂದಿರುವ ಕ್ರೀಡಾಗಳನ್ನು ಅಭಿನಂದಿಸುತ್ತಾ ಕಳೆದ 2 ದಿನ ಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಉಪದ್ರವನ್ನು ಲೆಕ್ಕಿಸದೆ, ಪ್ರಯಾಣದ ಅನೇಕ ಸಮಸ್ಯೆಗಳನ್ನು ಎದುರಿಸಿ ಕ್ರೀಡಾ ಕೂಟದಲ್ಲಿ ಭಾಗವಹಿಸಬೇಕೆಂದು ಉತ್ಸಾಹದಿಂದ ಬಂದದ್ದು ಒಂದು ಸಾಹಸವೇ ಆಗಿದೆ. ಇದು ವಿದ್ಯಾರ್ಥಿಗಳ ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶನ ಮಾಡುತ್ತದೆ, ಇದೇ ಉತ್ತಮ ಕ್ರೀಡಾ ಪಟು ಗಳ ಲಕ್ಷಣ . ಕ್ರೀಡೆಯುವಿದ್ಯಾರ್ಥಿಗಳಿಗೆ ಶಾರೀರಿಕ, ಬೌಧಿಕ ಶಕ್ತಿ ಯನ್ನು ನೀಡುತ್ತದೆ. ಸೋಲು ಗೆಲುವು ಕ್ರೀಡೆಯ ಒಂದು ಭಾಗವಾಗಿದೆ.ಎಂದು ನುಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಮಂಡಳಿಯ ಶಿಕ್ಷಣ ಸಮಿತಿಯ ಕಾರ್ಯ ಧ್ಯಕ್ಷ, ಅಜಿತ್ ಜಿ ಸುವರ್ಣ ಅನೇಕ ಸಮಸ್ಯೆಗಳು ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿಕೊಂಡದ್ದು ಸಂತಸ ತಂದಿದೆ ನಿಮ್ಮನ್ನು ನೋಡಿ ನಮ್ಮ ಆತ್ಮಸ್ಥೈರ್ಯವೂ ಹೆಚ್ಚಿದೆ. ಇದು ನಿಜಕ್ಕೂ ನಿಮ್ಮ ಕ್ರೀಡಾ ಸ್ಪೂರ್ತಿಯನ್ನು ತೋರಿಸುತ್ತದೆ. ನಮ್ಮ ಟೀಮ್ ಕೇವಲ 25 ದಿನಗಳ ಒಳಗೆ ಈ ಪಂದ್ಯಾಟವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ. ಇವರೆಲ್ಲರ ಸಂಪೂರ್ಣ ಸಹಕಾರದಿಂದ ಪಂದ್ಯಾಟ ಜರಗುತಿದೆ ಎಂದು ನುಡಿದರು.

ಶಾಲೆ ಪ್ರಾಂಶುಪಾಲರಾದ ಮಹುವಾ ಚಕ್ರವರ್ತಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಉಚಾಹಸಿ ಉಪಾಧ್ಯ ನಿರೂಪಿಸಿ ವಂದಿಸಿದರು,
ವೇದಿಕೆಯಲ್ಲಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಸುಧಾಕರ್ ಹರಾಟೆ , ಉದ್ಯಮಿ , ಬ್ರೂನೋ ಗೋಯೆಸ್, ವ್ಯವಸ್ಥಾಪಕ ಮಂಡಳಿಯಪ್ರಧಾನ ಕಾರ್ಯದರ್ಶಿ ಬಪ್ಪನಾಡು ದಿಲೀಪ್ ಕುಮಾರ್ ಮೂಲ್ಕಿ, ಪ್ರಧಾನ ಕೋಶಾಧಿಕಾರಿಯಾಗಿ ಕದಿಕೆ ದೇವ ರಾಜ್ ಎಚ್. ಕುಂದರ್, ಟ್ರಸ್ಟಿಗಳಾದ ಕಾಡಿ ಪಟ್ಣ ಹರೀಶ್ ವಿ. ಪುತ್ರನ್ ಮತ್ತು ಕಾಪು ಪುರುಷೋತ್ತಮ ಎಲ್, ಕರ್ಕೇರ. ಸಮಾಜ ಸೇವಕ ಉದಯ ಸಾಲಿಯನ್ ಮತ್ತಿತರ ಉಪಸ್ಥಿತರಿದ್ದರು,.

ಪ್ರಾರಂಭದಲ್ಲಿ ಮಾರ್ಚ್ ಫಾಸ್ಟ್. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ. ನಡೆಯಿತು.
ಕಾರ್ಯಕ್ರಮದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್. ಮಾಜಿ ಅಧ್ಯಕ್ಷರಾದ ಗೋಪಾಲ್ ಪುತ್ರನ್. ರಮೇಶ್ ಬಂಗೇರ, ಮೊಗವೀರ ಸಮಾಜದ ನಾಯಕ ವೇದ ಪ್ರಕಾಶ್ ಶ್ರೀ ಯಾನ್, ಉದ್ಯಮಿ ಸಂತೋಷ್ ಪುತ್ರನ್, ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷರಾದ ಬೈಕಂಪಾಡಿ ಬಿ. ಕೆ. ಪ್ರಕಾಶ್ , ಒಡೆಯರಬೆಟ್ಟು ಅಶೋಕ ಎಸ್. ಸುವರ್ಣ, ಪ್ರಧಾನ ಕಾರ್ಯದರ್ಶಿ ಬಪ್ಪನಾಡು ದಿಲೀಪ್ ಕುಮಾರ್ ಮೂಲ್ಕಿ, ಪ್ರಧಾನ ಕೋಶಾಧಿಕಾರಿಯಾಗಿ ಕದಿಕೆ ದೇವ ರಾಜ್ ಎಚ್. ಕುಂದರ್, ಟ್ರಸ್ಟಿಗಳಾದ ಕಾಡಿ ಪಟ್ಣ ಹರೀಶ್ ವಿ. ಪುತ್ರನ್ ಮತ್ತು ಕಾಪು ಪುರುಷೋತ್ತಮ ಎಲ್. ಕರ್ಕೇರ ಜತೆ ಕಾರ್ಯದರ್ಶಿಗಳಾದ ಬಪ್ಪನಾಡು ಪ್ರೀತಿ ಹರೀಶ್ ಶ್ರೀಯಾನ್, ಪೊಲಿಪು ದಯಾವತಿ ಎಂ. ಸುವರ್ಣ ಮತ್ತು ಕಲ್ಯಾಣಪುರ ಪ್ರಶಾಂತ್ ತಿಂಗಳಾಯ, ಜತೆ ಕೋಶಾಧಿಕಾರಿ ಗುಡ್ಡೆ ಕೊಪ್ಪಲ ಚಂದ್ರಕಾಂತ್ ಪಿ. ಸಾಲ್ಯಾನ್ , ಸಮಿತಿ ಸದಸ್ಯರಾದ ಕುಳಾಯಿ ಹರೀಶ್ ಡಿ. ಸುವರ್ಣ
ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾದ ಹೊಯ್ಗೆ ಬಜಾರ್ ಮನ್ ಮೋಹನ್ ವೈ. ಕರ್ಕೇರ, . ,ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷ ರಾದ ಎರ್ಮಾಳ್ ಬಡಾ ಚಂದ್ರಶೇಖರ್ ಎಸ್. ಕರ್ಕೇರ, ಕಾನೂನು ಮತ್ತು ಚಾರಿಟಿ ಕಚೇರಿ ಸಮಿತಿ ಕಾರ್ಯಧ್ಯಕ್ಷರಾದ ಮೂಲ್ಕಿ ವರದರಾಜ್ ಎಸ್. ಶ್ರೀಯಾನ್, ಸದಸ್ಯತನ ಸಮಿತಿ ಕಾರ್ಯಾಧ್ಯಕ್ಷರಾದ ಉಚ್ಚಿಲ ಕುಮಾರ್ ಕೆ. ಮೆಂಡನ್, ಮೊಗವೀರ ಗೌರ್ಡ್ಸ್ ಕಾರ್ಯಾಧ್ಯಕ್ಷೆ ಉದ್ಯಾವರ ಹೇಮಲತಾ ಶಶಿಧರ, ಸದಸ್ಯರಾದ ಕಾಡಿಪಟ್ಣ ಮಹೇಂದ್ರ ಜಿ. ಕಾಂಚನ್, ,ಚಿತ್ರಾಪು ರಾಜೇಶ್ ಎಸ್. ಪುತ್ರನ್,, ಕೊಕ್ಕರ್ಣೆ ಸಂತೋಷ ಬಿ. ಕೋಟ್ಯಾನ್, ಕಿರಿ ಮಂಜೇಶ್ವರ ಅರವಿಂದ್ ಪುತ್ರನ್, ಮೊಗವೀರ ಪತ್ರಿಕೆಯ ಮ್ಯಾನೇಜರ್ ಚಿತ್ರಾಪು ಪ್ರಮೋದ್ ಆರ್. ಪುತ್ರನ್, ಯುವ ವಿಭಾಗದ ಕಾರ್ಯದರ್ಶಿ ಪ್ರಾಪ್ತಿ ಸುವರ್ಣ, ಮಹಿಳಾ ವಿಭಾಗ ಕಾರ್ಯಧ್ಯಕ್ಷೆ ನಿವೇದಿತಾ ಸಾಲ್ಯಾನ್,ಕಾರ್ಯದರ್ಶಿ ರಾಜೇಶ್ವರಿ ಉಪ್ಪುರು, ಸುಮತಿ ತಿಂಗಳಾಯ, ಭಾರತಿ ಕರ್ಕೇರ, ಯಶೋಧ ಕರ್ಕೇರ, ಮೋಹಿತಾ ಕರ್ಕೇರ, ಹರೀಣಾಕ್ಷಿ ಪುತ್ರನ್, ಪ್ರೇಮಲತಾ ಪುತ್ರನ್, ರೂಪ ಪುತ್ರನ್, ಸುರೇಖಾ ಪುತ್ರನ್, ಶೈಲಜಾ ಮೆಂಡನ್,ಹರ್ಷ ಕೋಟ್ಯಾನ್ ಶಾಲೆಯ ವಿವಿಧ ವಿಭಾಗಗಳ ಮುಖ್ಯಸ್ಥರು . ಸಮಾಜ ಬಾಂಧವರು ವಿದ್ಯಾರ್ಥಿಗಳ ಪಾಲಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು,
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಂಡಳಿಯ ಆವರಣದಲ್ಲಿ ಅತಿಥಿ ಗಣ್ಯರು ಸಂಕೇತಿಕವಾಗಿ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿದರು,
ವಾಲಿಬಾಲ್ ಪಂದ್ಯಾಟ ದಲ್ಲಿ ಆಟ ಆಡಲು ಮಹಾರಾಷ್ಟ್ರ, ಗೋವಾ, ದಮನ್, ಡಿಯು ಮತ್ತು ದಾದ್ರಾ ನಗರ ಹವೇಲಿಯ ಪ್ರಮುಖ CBSE ಶಾಲೆಗಳನ್ನು ಪ್ರತಿನಿಧಿಸುವ ಸುಮಾರು 2000 ವಾಲಿಬಾಲ್ ಆಟಗಾರರು ಎಂವಿಎಂ
ಇಂಟರ್ನ್ಯಾಷನಲ್ ಸ್ಕೂಲ್ ಆಯೋಜಿಸಿರುವ CBSE ಕ್ಲಸ್ಟರ್ IX ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸೇರಿಕೊಂಡಿದ್ದರು.
ಪಂದ್ಯಾಟವು ಅಂದೇರಿ ಸ್ಪೋರ್ಟ್ಸ್ ಕ್ಲಬ್ ಇಂದಿನಿಂದ 3 ದಿನಗಳ ಪಂದ್ಯಾವಳಿಯು ನಡೆಯಲಿದೆ. ಅದಕ್ಕಾಗಿ ಸರ್ವ ವ್ಯವಸ್ಥಿತ ರೀತಿಯ ಸಿದ್ಧತೆಗಳು ನಡೆದಿದ್ದವು.
+++++++
ಕ್ರೀಡಾಳುಗಳುರಾಷ್ಟ್ರಮಟ್ಟದಪಂದ್ಯದಲ್ಲಿ ಭಾಗವಹಿಸುದೆ ಅಭಿಮಾನ ಪಡಬೇಕು: ರತ್ನಾಕರ್ ಶೆಟ್ಟಿ ಮುಂಡ್ಕೂರು,
ಬಂಟರ ಸಂಘದ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ
ರತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಈ ಪರಿಸರದಲ್ಲಿ ಶಾಸಕರಾದ ಅಮಿತ ಸಟಂ ಮಾಡುತ್ತಿರುವ ಜನಪರ ಕಾರ್ಯಗಳು ಮೆಚ್ಚ ತಕ್ಕದ್ದು. ಇಂತಹ ಶಾಸಕರು ಎಲ್ಲೆಡೆ ಇರಲಿ ಎಂಬುದೇ ನನ್ನ ಆಶಯ. ಎರಡು ದಿನಗಳಲ್ಲಿ ಸುರಿಯುತ್ತಿರುವ ಭೀಕರ ಮಳೆ ನಡೆಯುವೆಯು ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ, ಅವರಿಗೆ ನನ್ನ ಸೆಲ್ಯೂಟ್. ಇದು ಅವರಿಗೆ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸುವ ಧೈರ್ಯವನ್ನು ತೋರಿಸುತ್ತದೆ. ಬಂಟರ ಸಂಘ ಎಸ್ ಎಂ ಶೆಟ್ಟಿ ವಿದ್ಯಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಕಳೆದ ವರ್ಷ ಬೆಸ್ಟ್ ಇಂಟರ್ನ್ಯಾಷನಲ್ ಸ್ಕೂಲ್ ಪ್ರಶಸ್ತಿ ಸಿಕ್ಕಿದೆ. ಎಂವಿಎಂ ಮಂಡಳಿ ಕೂಡ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾ ಕ್ರೀಡಾಳುಗಳಿಗೆ ಸ್ಪೂರ್ತಿ ನೀಡುವ ರಾಷ್ಟ್ರಮಟ್ಟದಪಂದ್ಯದಲ್ಲಿ ಭಾಗವಹಿಸುವ ಎಲ್ಲರಿಗೂ ನನ್ನ ಶುಭಾಶಯಗಳು.
ಮಂಡಳಿಯ,
———
ತುಳು ಕನ್ನಡಿಗರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಿಂದಾಗಿ ಶಿಕ್ಷಣದ ಬಗ್ಗೆಗಿನ ಕಾಳಜಿಯನ್ನು ತೋರಿಸುತ್ತದೆ: ಪ್ರವೀಣ್ ಭೋಜ ಶೆಟ್ಟಿ,,
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟರ ಸಂಘ ಮುಂಬೈಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ ಮಹಾರಾಷ್ಟ್ರದ ಅದ್ಯಂತ ಆಗಮಿಸಿದ ಎಲ್ಲಾ ಕ್ರೀಡಾಳುಗಳಿಗೆ ಅಧಿಕ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು. ಸದಾ ಉತ್ತಮ ಕೆಲಸ ಮಾಡುವ ಶಾಸಕರಾದ ಅಮಿತ್ ಸಟಂ ಅವರೊಂದಿಗೆ ವೇದಿಕೆ ಹಂಚಿಕೊಂಡದ್ದು ನನ್ನ ಹೆಮ್ಮೆಯ ವಿಷಯ. ಸ್ವತಃ ವಾಲಿಬಾಲ್ ನಲ್ಲಿ ಬಂಗಾರದ ಪದಕವನ್ನು ಗಳಿಸಿರುವ ಗಣೇಶ್ ಕಾಂಚನ್ ಅವರು ತಮ್ಮ ಕ್ರೀಡಾ ಸ್ಪೂರ್ತಿಯನ್ನು ಇಂದು ಮೆರೆದಿದ್ದಾರೆ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಆಗಮಿಸಿದ ನಾವೆಲ್ಲರೂ ಶೈಕ್ಷಣಿಕ ಸಂಸ್ಥೆಯನ್ನು ನಡೆಸುತ್ತಾ, ನಮ್ಮ ಸಂಸ್ಕೃತಿಯನ್ನು ಸಂಘಟನಾ ಶಕ್ತಿಯನ್ನು ಕಟ್ಟಿಗೊಳಿಸಿದ್ದೇವೆ. ಮಹಾರಾಷ್ಟ್ ದ್ಯಂತ ಮಕ್ಕಳಿಗೆ ಇಂತಹ ವಾಲಿಬಾಲ್ ಟೂರ್ನಮೆಂಟ್ ನಡೆಸುತ್ತಿರುವುದು ಮಹಾರಾಷ್ಟ್ರದ ಜನತೆಗೆ, ನಮ್ಮ ಬಗ್ಗೆ ಅಭಿಮಾನ ಮೂಡಿಸುತ್ತದೆ. ನಮ್ಮ ಬಂಟರ ಸಂಘ ಮೂರು ಶಾಲೆಗಳನ್ನು ಮುನ್ನಡೆಸುತ್ತದೆ, ಇದು ನಮಗೆ ಶಿಕ್ಷಣದ ಬಗ್ಗೆಗಿನ ಕಾಳಜಿಯನ್ನು ತೋರಿಸುತ್ತದೆ ಎಂದು ನುಡಿದರು,




