
ಡೊಂಬಿವಲಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ
ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯು ತನ್ನ 60ನೇ ನವರಾತ್ರೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿ, ಭಕ್ತರ ಹೃದಯದಲ್ಲಿ ಅಳಿಯದ ನೆನಪನ್ನು ಮೂಡಿಸಿದೆ. ಇದೇ ಉತ್ಸಾಹ-ಭಾವದಿಂದ ಮಂಡಳಿ ತನ್ನ 61ನೇ ವರ್ಷದ ಸಾರ್ವಜನಿಕ ನವರಾತ್ರೋತ್ಸವವನ್ನು ಸೆಪ್ಟೆಂಬರ್ 22, 2025 ಸೋಮವಾರದಿಂದ ಅಕ್ಟೋಬರ್ 02, 2025 ಗುರುವಾರದವರೆಗೆ ಸಡಗರದಿಂದ ಆಚರಿಸಲು ಸಿದ್ಧತೆ ನಡೆಸಿದೆ.
ಈ ಅವಧಿಯಲ್ಲಿ ಪ್ರತಿದಿನ ಮಧ್ಯಾಹ್ನ 12:30 ಕ್ಕೆ ಹಾಗೂ ರಾತ್ರಿ 8:30 ಕ್ಕೆ ಶ್ರೀದೇವಿಯ ಪೂಜಾ ವಿಧಿ-ವಿಧಾನಗಳು ನೆರವೇರಲಿದ್ದು, ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ.
ವಿಶೇಷ ಕಾರ್ಯಕ್ರಮಗಳು :
21.09.2025 (ರವಿವಾರ) ಸಂಜೆ 6.00ಕ್ಕೆ ಬ್ರಾಹ್ಮಣ ಸಭಾ, ಡೊಂಬಿವಲಿ (ಪೂರ್ವ) ಇಂದ ಶ್ರೀದೇವಿಯ ಆಗಮನ ಮೆರವಣಿಗೆ ವಿಜೃಂಭಣೆಯಿಂದ ನೆರವೇರಲಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಭಕ್ತರಿಗೆ ಊಟೋಪಚಾರದ ವ್ಯವಸ್ಥೆ ಶ್ರೀಮತಿ ಲತಾ ಸಾಧು ಶೆಟ್ಟಿ ಹಾಗೂ ಮಕ್ಕಳು, ಶ್ರೀಮತಿ ಮತ್ತು ಶ್ರೀ ವಿಜೀತ್ ಶೆಟ್ಟಿ, ಹೊಟೇಲ್ ದ್ವಾರಕಾ, ಡೊಂಬಿವಲಿ ಇವರಿಂದ ಮಾಡಲಾಗಿದೆ.
22.09.2025 (ಸೋಮವಾರ) ಬೆಳಿಗ್ಗೆ 8.00ಕ್ಕೆ ಗಣಹೋಮ, ಬೆಳಿಗ್ಗೆ 9.30ಕ್ಕೆ ಪ್ರಾಣ ಪ್ರತಿಷ್ಠೆ ಹಾಗೂ ಬೆಳಿಗ್ಗೆ 10.30ಕ್ಕೆ ಉಗ್ರಾಣ ಪೂಜೆ ನಡೆಯಲಿದೆ.
23.09.2025 (ಮಂಗಳವಾರ) ಮಧ್ಯಾಹ್ನ 12:30ಕ್ಕೆ ತೆಂಕ ಎರ್ಮಾಳ ಶ್ರೀ ನಾಗೇಶ್ ಸುವರ್ಣ ಅವರ ವಿರಚಿತ “ಶ್ರೀ ಶನಿಗ್ರಂಥ ಪಾರಾಯಣದ ತುಳು ಅರ್ಥ ವಿವರಣೆ” ಕೃತಿಯ ಬಿಡುಗಡೆ ಶ್ರೀದೇವಿಯ ಸನ್ನಿಧಾನದಲ್ಲಿ ಜರುಗಲಿದೆ.
26.09.2025 (ಶುಕ್ರವಾರ) ಮಧ್ಯಾಹ್ನ 3:30ಕ್ಕೆ ಹಳದಿ-ಕುಂಕುಮ ಕಾರ್ಯಕ್ರಮ.
28.09.2025 (ರವಿವಾರ) ಹಾಗೂ 30.09.2025 (ಮಂಗಳವಾರ) ಸಂಜೆ 7.30ಕ್ಕೆ ರಂಗ-ಪೂಜೆ.
01.10.2025 (ಬುಧವಾರ) ಸಂಜೆ 6.00ರಿಂದ ಮಂಡಳಿಯ ಮಕ್ಕಳಿಂದ ನೃತ್ಯ ವೈಭವ, ನಂತರ ಸಂಜೆ 7.00ಕ್ಕೆ ಯಕ್ಷಗಾನ ಬಯಲಾಟ – “ಶ್ರೀದೇವಿ ಮಹಾತ್ಮ” (ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಸಾಂತಾಕ್ರೂಜ್, ಮುಂಬಯಿ) ಪ್ರದರ್ಶನ.
ಈ ಯಕ್ಷಗಾನ ಕಾರ್ಯಕ್ರಮಕ್ಕೆ ಪ್ರಾಯೋಜಕರು — ಶ್ರೀಮತಿ ಲತಾ ಸಾಧು ಶೆಟ್ಟಿ ಹಾಗೂ ಮಕ್ಕಳು, ಶ್ರೀಮತಿ ಮತ್ತು ಶ್ರೀ ವಿಜೀತ್ ಶೆಟ್ಟಿ, ಶ್ರೀಮತಿ ಮತ್ತು ಶ್ರೀ ವೇಣುಗೋಪಾಲ್ ರೈ, Hotel Dwarka NX.
ಇನ್ನ, ಕುರ್ಕಿಲಬೆಟ್ಟು ಬಾಳಿಕೆ ದಿ| ದಾಸು ಬಾಬು ಶೆಟ್ಟಿಯವರ (ಮಂಡಳಿಯ ಸಂಸ್ಥಾಪಕರು) ಸಂಸ್ಮರಣಾರ್ಥವಾಗಿ ಶ್ರೀ ರತನ್ ಜಗನ್ನಾಥ ಪೂಜಾರಿ (President: South Indian Cell, BJP, Dombivli) ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

02.10.2025 (ಗುರುವಾರ) ಸಂಜೆ 5.00ಕ್ಕೆ ಶ್ರೀದೇವಿಯ ವಿಸರ್ಜನಾ ಮೆರವಣಿಗೆ ವೈಭವದ ವೇಷ ಭೂಷಣ ಗಳೊಂದಿಗೆ, ಚಂದದ ಕಳೆ-ಗಂಭೀರತೆಯೊಂದಿಗೆ ನೆರವೇರಲಿದೆ.
ಪ್ರತಿದಿನ ಬೆಳಿಗ್ಗೆ 9:00 ರಿಂದ 11:00 ಗಂಟೆಯವರೆಗೆ ತುಲಾಭಾರ ಸೇವೆ ನಡೆಯಲಿದೆ.
(ವಿ.ಸೂ.: ತುಲಾಭಾರ ಮಾಡಲಿಚ್ಛಿಸುವ ಭಕ್ತರು ಮುಂಚಿತವಾಗಿ ತಿಳಿಸಿದಲ್ಲಿ, ಅದರಿಗಾಗಿ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು.)
ಪೂಜೆ ಕೊಡಲಿಚ್ಛಿಸುವವರು ಪೂಜಾ-ರಶೀದಿ ಪಡೆದು, ಪೂಜೆಯ ನಂತರ ಪ್ರಸಾದ ಸ್ವೀಕರಿಸಬೇಕೆಂದು ಮಂಡಳಿ ತಿಳಿಸಿದೆ. ಹೂವಿನ ಪೂಜೆ ಸಲ್ಲಿಸಿದ ಭಕ್ತರು ಬೆಳಿಗ್ಗೆ 8:30 ರಿಂದ ರಾತ್ರಿ 11:30ರವರೆಗೆ ರಶೀದಿ ತೋರಿಸಿ ಪ್ರಸಾದ ಪಡೆಯಬಹುದು.

ಆಮಂತ್ರಿತ ಭಜನಾ ಮಂಡಳಿ
26.09.2025, ಶುಕ್ರವಾರ
ಮಧ್ಯಾಹ್ನ 12:00 ಗಂಟೆಗೆ – ಶ್ರೀ ಹರೀಶ್ ಶೆಟ್ಟಿ ಎರ್ಮಾಳ್, ಪಕ್ರಿಯೇಶನ್, ಮುಂಬಯಿ
ಸಂಜೆ 7:00 ಗಂಟೆಗೆ – ಭಕ್ತಿ ಭಜನಾ ಲಹರಿ, ಪುತ್ತೂರು ಶ್ರೀ ಚಂದ್ರಹಾಸ್ ರೈ ಹಾಗೂ ಬಳಗದವರು
27.09.2025, ಶನಿವಾರ, ಮಧ್ಯಾಹ್ನ 12:00 ಗಂಟೆಗೆ –
ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ ಅವರಿಂದ ಭಜನಾ ಸೇವೆ.
ಪ್ರತಿದಿನ ಶ್ರೀದೇವಿಗೆ ಭಜನಾ ಸೇವೆ ನಡೆಯಲಿದೆ. ಆಸಕ್ತ ಭಜನಾ ಮಂಡಳಿಗಳು ಮುಂಚಿತವಾಗಿ ತಿಳಿಸಿದಲ್ಲಿ, ಭಜನಾ ಸೇವೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿರಿ:
ಶ್ರೀಮತಿ ಆರತಿ ರೈ – 9702467616
ಶ್ರೀಮತಿ ಸುಜಾತ ಹೆಗ್ಡೆ – 8369889806
ಮಹಾನಗರದ ಎಲ್ಲಾ ಭಕ್ತಾಭಿಮಾನಿಗಳು ನವರಾತ್ರಿಯ ಹಾಗೂ ವಿಜಯ ದಶಮಿಯ ಎಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಧರ್ಮದರ್ಶಿಗಳಾದ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆಯಾದ ವಿಲಾಸಿನಿ ಶೆಟ್ಟಿ ಹಾಗೂ ಎಲ್ಲಾ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.





