July 23, 2026
Mumbai News Kannada
ಪ್ರಕಟಣೆ

ಅ. 5ಕ್ಕೆ : ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ವಸಯಿ ತಾಲೂಕ ಮೊಗವೀರ ಸಂಘದಿಂದ, ವಸಯಿಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ







.

​ಡಾ. ಜಿ. ಶಂಕರ್ ಅವರ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಆರೋಗ್ಯ ಸೇವೆ ಲೋಕಾರ್ಪಣೆ
​ ಮುಂಬೈನ ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ವಸಾಯಿ ತಾಲೂಕ ಮೊಗವೀರ ಸಂಘವು ಜಂಟಿಯಾಗಿ ಲೈಫ್‌ಕೇರ್ ಚಾರಿಟೇಬಲ್ ಆಸ್ಪತ್ರೆ, ವಸಾಯಿ, ಇದರ ಸಹಯೋಗದೊಂದಿಗೆ, ಸಮಾಜದ ಗಣ್ಯ ನಾಯಕರಾದ ನಾಡೋಜ ಡಾ. ಜಿ. ಶಂಕರ್ ಅವರ ಜನ್ಮದಿನದ ಸುಸಂದರ್ಭದಲ್ಲಿ ಉಚಿತ ಡಯಾಲಿಸಿಸ್ ಮತ್ತು ರಿಯಾಯಿತಿ ದರದ ಆರೋಗ್ಯ ಸೇವೆಗೆ ಮಹಾ ಚಾಲನಾ ಸಮಾರಂಭವನ್ನು ಆಯೋಜಿಸಿದ್ದು,
​ವಸಾಯಿ (ಪೂರ್ವ)ದ ಐಸಿಸ್ ಆಸ್ಪತ್ರೆ (IASIS Hospital), ಎವರ್‌ಶೈನ್ ಸಿಟಿಯಲ್ಲಿ ಅಕ್ಟೋಬರ್ 5, 2025 ರ ಭಾನುವಾರ, ಬೆಳಗ್ಗೆ 11:30 ಕ್ಕೆ ಉದ್ಘಾಟನಾ ಸಮಾರಂಭವು ವಿಧ್ಯುಕ್ತವಾಗಿ ಜರಗಲಿದೆ.
​ಡಯಾಲಿಸಿಸ್ ಯಂತ್ರದ ದಾನಿಗಳಾದ ಸೇವೆಯನ್ನು
​ ವೇದಪ್ರಕಾಶ್ ಎಂ. ಶ್ರೀಯಾನ್ (ಮೆ. ದಿವ್ಯಾ ಶಿಪ್ಪಿಂಗ್ ಮತ್ತು ಕ್ಲಿಯರಿಂಗ್ ಸರ್ವಿಸಸ್ ಪ್ರೈ. ಲಿಮಿಟೆಡ್) ಅವರು ಉದ್ಘಾಟಿಸಲಿರುವರು.
​ಸಮಾರಂಭಕ್ಕೆ
​ಮುಖ್ಯ ಅತಿಥಿಗಳಾಗಿ ಗಣೇಶ್ ಕಾಂಚನ್ (ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ),
​ಡಾ. ಮಹಾಬಲಿ ಸಿಂಗ್ (ಎಂ.ಬಿ.ಬಿ.ಎಸ್., ಪಿ.ಜಿ.ಡಿ.ಸಿ.ಸಿ., ಎಂ.ಫಿಲ್. – ನಿರ್ದೇಶಕರು, ಸ್ಟಾರ್ ವಿವೇಜಾ ಹೆಲ್ತ್ ಸರ್ವಿಸಸ್),
​ಗೌರವ ಅತಿಥಿಗಳಾಗಿ ಸುರೇಶ್ ಕಾಂಚನ್ (ಗೌರವಾಧ್ಯಕ್ಷರು, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ) ಗೋಪಾಲ್ ಪುತ್ರನ್ (ಮಾಜಿ ಅಧ್ಯಕ್ಷರು, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ),
​ ಅಜಿತ್ ಸುವರ್ಣ (ಅಧ್ಯಕ್ಷರು, ಶಿಕ್ಷಣ ಸಮಿತಿ, ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ) ಯಶೋಧರ ವಿ. ಕೋಟ್ಯಾನ್ (ಅಧ್ಯಕ್ಷರು, ವಸಾಯಿ ತಾಲೂಕು ಮೊಗವೀರ ಸಂಘ)
​ಡಾ. ರಘುರಾಮ್ ಕುಳೂರು (ಸಮಾಲೋಚಕ ಶಸ್ತ್ರಚಿಕಿತ್ಸಕರು, ಡಾ. ಕುಳೂರ್ಸ್ ಆಸ್ಪತ್ರೆ, ವಸಾಯಿ (ಪ.)
​ಉಪಸ್ಥಿತರಿರುವರು.
​ಸಮಸ್ತ ಮೊಗವೀರ ಸಮುದಾಯದ ನಾಯಕರು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು “ಒಗ್ಗಟ್ಟಾಗಿ ಆರೋಗ್ಯಪೂರ್ಣ ನಾಳೆಗಾಗಿ” (TOGETHER FOR A HEALTHIER TOMORROW!) ಶ್ರಮಿಸುವ ಸಂಕಲ್ಪ ಮಾಡಿದ್ದು, ಮುಂಬಯಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ವಸಾಯಿ ತಾಲೂಕು ಮೊಗವೀರ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಕಾರ್ಯಕ್ರಮಕ್ಕೆ ಆದರದ ಸ್ವಾಗತ ಬಯಸಿದ್ದಾರೆ.
​ಈ ಹೊಸ ಆರೋಗ್ಯ ಸೇವಾ ಕೇಂದ್ರವು ಸಮುದಾಯದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಒಂದು ಆಶಾಕಿರಣವಾಗಿದ್ದು, ಅದರಲ್ಲೂ ವಿಶೇಷವಾಗಿ ಉಚಿತ ಡಯಾಲಿಸಿಸ್ ಸೇವೆಯು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅನೇಕರಿಗೆ ದೊಡ್ಡ ಸಹಾಯವನ್ನು ಒದಗಿಸಲಿದೆ.



Related posts

ಗೋರೆಗಾಂವ್ ಕರ್ನಾಟಕ ಸಂಘ -ಜುಲೈ19ರಂದು 68ನೇ ವಾರ್ಷಿಕ ಮಹಾ ಸಭೆ.

Mumbai News Desk

ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ : ಮಾ. 14ಕ್ಕೆ ವಾರ್ಷಿಕೋತ್ಸವ (ವಿದ್ಯಾರ್ಥಿಗಳಿಗೆ ಧನ ಸಹಾಯ, ಯಕ್ಷಗಾನ ಪ್ರದರ್ಶನ)

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”

Mumbai News Desk

ಸೆ.21.ಶ್ರೀ ಸಾಯಿಬಾಬಾ ಪೂಜಾ ಸಮಿತಿ,ಕಾಲಘೋಡ (ರಿ).ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ, 31ನೇ ವಾರ್ಷಿಕ ಮಹಾಸಭೆ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಉನ್ನತ ಶಿಕ್ಷಣ ಸಂಸ್ಥೆ,ಫೆ. 26. ವಾರ್ಷಿಕೋತ್ಸವ, ಪದವಿ ಪ್ರಧಾನ ಸಮಾರಂಭ

Mumbai News Desk

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ

Mumbai News Desk