30.9 C
Mumbai
June 8, 2026
Mumbai News Kannada
ತುಳುನಾಡು

ಕಾಪುವಿನ ಶ್ರೀ ಬಬ್ಬರ್ಯ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿದ ಕಾಲದಿ ನೇಮೋತ್ಸವ





ಅನಾದಿಕಾಲದಿಂದ ನಡೆದು ಬರುತ್ತಿರುವ ಶ್ರೀ ಬಬ್ಬರ್ಯ  ಬಂಟ ದೈವ ಗಳ ಕಾಲದಿ ನೇಮೋತ್ಸವವು ಮೊಗವೀರ ಮಹಾಸಭಾ ಕಾಪು ಹಾಗೂ ಮುಂಬಾಯಿ ಇವರ ವ್ಯವಸ್ಥಾಪಕತ್ವದಲ್ಲಿ ಡಿಸೆಂಬರ್ 24 ಮತ್ತು 25 ರಂದು  ವಿಜೃಂಭಣೆಯಿಂದ ಜರಗಿತು.

​​​ ಡಿಸೆಂಬರ್ 24 ರಂದು ​ಬೆಳಗ್ಗೆ ಗಂಟೆ 8:00ಕ್ಕೆ: ಗಣಹೋಮ ನಡೆಯಿತು. ಬಳಿಕ ಭಕ್ತರಿಗೆ  ಪ್ರಸಾದ ವಿತರಿಸಲಾಯಿತು. ಡಿಸೆಂಬರ್ 25 ರಂದು ಗುರುವಾರ ​ಬೆಳಗ್ಗೆ ಗಂಟೆ 9:00ಕ್ಕೆ ಭಂಡಾರ ಮನೆಯಿಂದ ಭಂಡಾರವನ್ನು ವಾದ್ಯ ಗೋಷ್ಠಿಗಳೊಂದಿಗೆ ದೈವಸ್ಥಾನಕ್ಕೆ ತರಲಾಯಿತು.​ಗಂಟೆ 10:30ಕ್ಕೆ ಧ್ವಜಾರೋಹಣ ಹಾಗೂ  ಚಪ್ಪರ ಮುಹೂರ್ತ ನಡೆಯಿತು. ​ಮಧ್ಯಾಹ್ನ 12:30ಕ್ಕೆ ಪಲ್ಲಕಿ ಪೂಜೆ ಜರಗಿತು. ನಂತರ  ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ & ಕಲ್ಚರಲ್  ಕ್ಲಬ್ ಕಾಪು ಹಾಗೂ ದಿವಂಗತ ಸೀತಾ ಆನಂದ ಕರ್ಕೇರ ಅವರ ಮಕ್ಕಳ ಪ್ರಯೋಜಕತ್ವದಲ್ಲಿ ಅನ್ನ ಸಂತರ್ಪಣೆ ನಡೆಯಿತು.

​ಸಾಯಂಕಾಲ 5 :೦೦ಕ್ಕೆ ಭಂಡಾರದೊಂದಿಗೆ ಚಪ್ಪರ ಪ್ರದಕ್ಷಿಣೆ ಜರಗಿತು . ​ರಾತ್ರಿ ಗಂಟೆ 10:00ಕ್ಕೆ ಶ್ರೀ ಬಬ್ಬರ್ಯ ಬಂಟ ಹಾಗೂ ಪರಿವಾರ ದೈವಗಳ ನೇಮೋತ್ಸವ ಆರಂಭವಾಯಿತು. ಬೆಳಿಗ್ಗೆ ಗಂಟೆ 4:೦೦ ಕ್ಕೆ ಗುರಿಕಾರರ  ಮನೆಯಿಂದ ಹಾಲು ಸ್ವೀಕರಿಸಿ ಬಳಿಕ  ಗಂಗಾ ಬೇಟಿಗೆ ತೆರಳಲಾಯಿತು.

​​ ಡಿಸೆಂಬರ್ 26ರಂದು ಶುಕ್ರವಾರ ಬೆಳಗ್ಗೆ ಗಂಟೆ 5:30ಕ್ಕೆ ಪ್ರಸಾದ ವಿತರಣೆ ನಡೆಯಿತು. ಬೆಳಗ್ಗೆ 7:೦೦ ಕ್ಕೆ ಧ್ವಜಾವರೋಹಣದ  ನಂತರ ಭಂಡಾರವನ್ನು ಭಕ್ತಿ ಶ್ರದ್ದೆಯಿಂದ  ಭಂಡಾರದ ಮನೆಗೆ ತರಲಾಯಿತು

ವಾರ್ಷಿಕ ನೇಮೋತ್ಸವವು  ಯಶಸ್ವಿಯಾಗಿ ನಡೆಯಲು ಗುರಿಕಾರರು, ಮುಕ್ಕಾಲ್ದಿ ಪದಾಧಿಕಾರಿಗಳು, ಕಾಪು ಮೊಗವೀರ ಮಹಾಸಭಾ ಮತ್ತು ಮುಂಬಾಯಿ ಮೊಗವೀರ ಮಹಾಸಭಾ, ಕಾಪು ಮೊಗವೀರ ಮಹಿಳಾ ಮಂಡಳಿ ಮತ್ತು ಮುಂಬಾಯಿ ಮೊಗವೀರ ಮಹಿಳಾ ಮಂಡಳಿ, ಆಡಳಿತ ಮಂಡಳಿ ಪಧಾದಿಕಾರಿಗಳು ಹಾಗೂ ಸರ್ವ ಸದಸ್ಯರು ಸಹಕಾರ ನೀಡಿದರು.



Related posts

ಬನ್ನಂಜೆ ಬಿಲ್ಲವರ ಸೇವಾ ಸಂಘ: ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ.

Mumbai News Desk

ಉಡುಪಿ : ಪರ್ಯಾಯ ಆಚರಣೆಯ ಅಂಗವಾಗಿ ನಡೆದ ಧಾನ್ಯ ಮುಹೂರ್ತ

Mumbai News Desk

ಉಡುಪಿಯಲ್ಲಿ ನಡೆದ ಕುಣಿತ ಭಜನಾ ಸೇವೆಯಲ್ಲಿ ಎಲ್ಲರ ಗಮನ ಸೆಳೆದ ಲಕ್ಷ್ಮಿ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ತಂಡದ ಪುಟಾಣಿಗಳು

Mumbai News Desk

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ

Mumbai News Desk

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ಮತ್ತು ನಟಿ ರೂಪ ಐಯ್ಯರ್ : ನವದುರ್ಗಾ ಲೇಖನ ಯಜ್ಞ ಸಂಕಲ್ಪ

Mumbai News Desk

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ – ಇಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ತುರ್ತು ಸಭೆ

Mumbai News Desk