32.1 C
Mumbai
June 7, 2026
Mumbai News Kannada
ಪ್ರಕಟಣೆ

ನಾಳೆ (ಜ. 26)ಗೊರೇಗಾoವ್ ಜಯಲೀಲಾ ಬ್ಯಾಂಕ್ಟ್ ಟ್ ಹಾಲ್ ನಲ್ಲಿ,ಜಯ ಸಿ ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು ಅರಸಿನ ಕುಂಕುಮ ಕಾರ್ಯಕ್ರಮ





ಜಯ ಸಿ ಸುವರ್ಣ ಅಭಿಮಾನಿಗಳು ಮಹಿಳಾ ಅಭಿಮಾನಿಗಳು, ಮುಂಬಯಿ ಬಿಲ್ಲವರು ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬಯಿ, ಇವರ ಆಯೋಜನೆಯಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ ಜ.26ರಂದು ಸೋಮವಾರ ಅಪರಾನ್ಹ ಗಂಟೆ 3 ರಿಂದ ಗೊರೇಗಾoವ್ ಜಯಲೀಲಾ ಬ್ಯಾಂಕ್ಟ್ ಟ್ ಹಾಲ್ ನಲ್ಲಿ ನಡೆಯಲಿದೆ,

ಇದೇ ಸಂಧರ್ಭದಲ್ಲಿ ಮುಂಬಯಿಯ ವಿವಿಧ ಉಪನಗರಗಳ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಯವರಿಂದ ಕುಣಿತ ಭಜನೆ ನಡೆಯಲಿದೆ.
ಸಂಜೆ 5:30 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು
ಜಯ ಸಿ ಸುವರ್ಣ ಮಹಿಳಾ ಅಭಿಮಾನಿಗಳ ಕಾರ್ಯಧ್ಯಕ್ಷೆ ನಿಶಿತಾ ಸೂರ್ಯಕಾಂತ್ ಸುವರ್ಣ ವಹಿಸಲಿದ್ದಾರೆ.
ಅತಿಥಿಗಳಾಗಿ ನಗರ ಸೇವಕಿ ಮೀನಾಕ್ಷಿ ಶಿಂದೆ , ಪುಷ್ಪ ಶ್ರೀನಿವಾಸ್ ಕೋಟ್ಯಾನ್, ಗೌರವ ಅತಿಥಿಗಳಾಗಿ ನಗರ ಸೇವಕಿ ಜಗದೀಶ್ವರಿ ಜಗದೀಶ್ ಅಮೀನ್, ನಗರ ಸೇವಕಿ ನಿಶಾ ಸುರೇಶ್ ಬಂಗೇರ, ನಗರಸೇವಕ ಹರೀಶ್ ಶಾಸ್ತ್ರಿ, ಸಮಾಜ ಸೇವಕಿರಾದ ತನ್ವಿ ದಿನೇಶ್ ರಾವ್, ಹಿಮಾಲಿನಿ ಸದಾಶಿವ ಸುವರ್ಣ, ಹರಿನಾಕ್ಷಿ ಮೋಹನ್, ಇವರು ಪಾಲ್ಗೊಳ್ಳಲಿದ್ದಾರೆ,
ಈ ಸಂದರ್ಭದಲ್ಲಿ ಕರ್ನಾಟಕ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಸ್ವೀಕರಿಸಿದ ರಿಕಿತ ಸಾಲಿಯಾನ್, ವೀಣಾ ಶೆಟ್ಟಿ, ಅಶ್ವಿನಿ ಕೋಟ್ಯಾನ್ ಇವರನ್ನು ಸನ್ಮಾನಿಸಲಾಗುವುದು

ಈ ಪ್ರಯುಕ್ತ ಎಲ್ಲಾ ಪರಿಸರದ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಜಯ ಸಿ ಸುವರ್ಣ ಅಭಿಮಾನಿಗಳು, ಮಹಿಳಾ ಅಭಿಮಾನಿಗಳು, ಯುವ ಅಭಿಮಾನಿಗಳು,ಮುಂಬಯಿ ಬಿಲ್ಲವರು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.



Related posts

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk

ಜ. 1 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ನಲ್ಲಿ ಸತ್ಯನಾರಾಯಣ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ

Mumbai News Desk

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜೋಡು ಜೀಟಿಗೆ ನಾಟಕ : ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಕಾರ್ಯಕ್ರಮ

Mumbai News Desk

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Mumbai News Desk

ಮೇ 4 ಮತ್ತು 5ರಂದು ನಿಟ್ಟೂರು ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವ.

Mumbai News Desk