September 6, 2026
Mumbai News Kannada
ಪ್ರಕಟಣೆ

ಡೊಂಬಿವಲಿ: ಜಗಜ್ಯೋತಿ ಕಲಾವೃಂದದಿಂದ ಫೆ. 15 ರಂದು ಮಹಾಶಿವರಾತ್ರಿ ಪೂಜೆ





ಡೊಂಬಿವಲಿ: ಇಲ್ಲಿನ ಮಹಾತ್ಮ ಫುಲೆ ರಸ್ತೆಯಲ್ಲಿರುವ ಜಗಜ್ಯೋತಿ ಕಲಾವೃಂದದ (ರಿ.) ವತಿಯಿಂದ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 15ರ ಭಾನುವಾರ ಪಶ್ಚಿಮ ದೊಂಬಿವಲಿಯ ವಿವೇಕಾನಂದ ಶಾಲೆಯ ಸಮೀಪವಿರುವ ‘ಪಂಚಮ್’ ಸಹಕಾರಿ ಗೃಹನಿರ್ಮಾಣ ಸಂಘದ ಸಂಕೀರ್ಣದಲ್ಲಿರುವ ವೃಂದದ ಕಚೇರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದ ವಿವರ:

ಅಂದು ಮಧ್ಯಾಹ್ನ 4.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಭಕ್ತಾದಿಗಳಿಂದ ಮತ್ತು ಕಲಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.15ಕ್ಕೆ ಮಹಾಶಿವರಾತ್ರಿಯ ಮಂಗಳಾರತಿ ನೆರವೇರಲಿದ್ದು, ತದನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

​ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ವೃಂದದ ಎಲ್ಲಾ ಸದಸ್ಯರು, ಹಿತೈಷಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಗಜ್ಯೋತಿ ಕಲಾವೃಂದದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸ್ಥಳ: ಜಗಜ್ಯೋತಿ ಕಲಾವೃಂದ (ರಿ.),

ಪಂಚಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ,

ಮಹಾತ್ಮ ಫುಲೆ ರಸ್ತೆ, ಡೊಂಬಿವಲಿ (ಪಶ್ಚಿಮ) – 421 202.



Related posts

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಶ್ರೀ ನೀಲಕಂಠೇಶ್ವರ ದೇವಸ್ಥಾನ, ಜಂಗಮ ಮಠ ಗುರುಪುರ ಜೀರ್ಣೋದ್ಧಾರ: ಆಗಸ್ಟ್ 4 : ಸಯನ್ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಪೂರ್ವಭಾವಿ ಸಭೆ

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ

Mumbai News Desk

ಸೆ. 5 ರಂದು ಭಾರತದ “Metro Man of India” ಪದ್ಮವಿಭೂಷಣ ಡಾ. ಇ ಶ್ರೀಧರನ್ ಗೆ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ಪ್ರಶಸ್ತಿ ‘

Mumbai News Desk