July 23, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ, ಕಲ್ಯಾಣ: ಮಾ.8 ರಂದು ಮಹಿಳಾ ದಿನಾಚರಣೆ








ಕಲ್ಯಾಣ(ಪ) : ಪ್ರತಿ ವರ್ಷದಂತೆ ಈ ವರ್ಷವೂ ಸಂಘದ ವಾರ್ಷಿಕ ಮಹಿಳಾ ದಿನಾಚರಣೆಯನ್ನು ಬರುವ 8 ಮಾರ್ಚ್ ರಂದು ಕಲ್ಯಾಣ(ಪ)ದ ಬ್ರಾಹ್ಮಣ ಸೊಸೈಟಿ ಸಭಾಗ್ರಹದಲ್ಲಿ ಸಂಜೆ 5ದ ರಿಂದ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ DMD Architect ಮಾಲಿಕರಾದ ಶ್ರೀಮತಿ ಶೈಲಜ ವೈದ್ಯರವರು ಹಾಗೂ ಗೌರವ ಅತಿಥಿಯಾಗಿ ಛಾಯಾಕಿರಣ ಪತ್ರಿಕೆಯ ಉಪ ಸಂಪಾದಕಿಯಾದ ಶ್ರೀಮತಿ ಶಾಲಿನಿ ಶೆಟ್ಟಿಯವರು ಆಗಮಿಸಲಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಈ ಸಂದರ್ಭದಲ್ಲಿ ಕಲ್ಯಾಣ ಡೊಂಬಿವಲಿ ಪರಿಸರದ ಸಮಾಜ ಸೇವಕಿ, ಮುಂಬೈ ಮಹಾನಗರ ಕನ್ನಡ ಸಂಘದ ಮಹಿಳಾಧ್ಯಕ್ಷೆಯಾದ ಶ್ರೀಮತಿ ವಿದ್ಯಾ ಸತೀಶ್ ಅಲಗೂರ್ ರವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ತಾವೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕಾಗಿ ಸಂಘದ ಅಧ್ಯಕ್ಷ ಶ್ರೀ ಜಯಂತ ದೇಶಮುಖ್, ಉಪಾಧ್ಯಕ್ಷೆ ಶ್ರೀಮತಿ ಜಯಂತಿ ಗೋಪಾಲ ಹೆಗ್ಡೆ, ಮಹಿಳಾಧ್ಯಕ್ಷೆ ಶ್ರೀಮತಿ ವೀಣಾ ಕಾಮತ್ ಹಾಗೂ ಪೂರ್ವ ಅಧ್ಯಕ್ಷೆ ದರ್ಶನಾ ಸೋನ್ಕರ್ ರವರು ಸಂಘದ ಪರವಾಗಿ ವಿನಂತಿಸಿಕೊಂಡಿದ್ದಾರೆ.



Related posts

ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದ ವತಿಯಿಂದ ತಾ.29/11/2025 ರಂದು ಕೃತಿ ಸಮೀಕ್ಷೆ ಕಾರ್ಯಕ್ರಮ

Mumbai News Desk

ಮೂಲ್ಕಿ : ನ. 30ರಂದು ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ಮುಲ್ಕಿಯ ಕೀರ್ತಿಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭ

Mumbai News Desk

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ

Mumbai News Desk

ಕಾಂದಿವಲಿ ಪೂರ್ವ ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿನ 30 ರಂದು 50 ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹೋತ್ಸವ ಮತ್ತು ಅನ್ನದಾನ

Mumbai News Desk

ಮಿಸ್ಟರ್/ಮಿಸ್/ಮಿಸೆಸ್ ಕರ್ನಾಟಕ ಸ್ಟೈಲ್ ಐಕಾನ್‌-2025: ಗ್ರ್ಯಾಂಡ್ ಫಿನಾಲೆ ಡಿ. 18 ರಂದು ನಿಶಿತಾ ಸೂರ್ಯಕಾಂತ್ ಸುವರ್ಣ ಆಯೋಜನೆಯಲ್ಲಿ ‘ಸೀಸನ್‌ 6’ ರ ಅಂತಿಮ ಹಂತ

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಜೂನ್ 20ರಿಂದ 149ನೇ ಪುಣ್ಯ ಗ್ರಂಥ ಪಾರಾಯಣ ಪ್ರಾರಂಭ

Mumbai News Desk