July 7, 2026
Mumbai News Kannada
ಪ್ರಕಟಣೆ

ಮಾ. 22: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ





ವಸಾಯಿ, ಮಾ. 20: ವಸಾಯಿ ಪರಿಸರದ ಜಾತೀಯ ಸಂಘಟನೆಗಳಲ್ಲಿ ಒಂದಾಗಿರುವ ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಾ. 22ರಂದು ಅಪರಾಹ್ನ 3ರಿಂದ ವಸಾಯಿ ಪಶ್ಚಿಮದ ವಸಾಯಿ ಕರ್ನಾಟಕ ಸಂಘದ ಸಮೀಪದ ಸ್ವಾಮಿ ನಾರಾಯಣ ಮಂದಿರದ ಮೊದಲ ಅಂತಸ್ತಿನ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

​ಸಂಘದ ಅಧ್ಯಕ್ಷ ಯಶೋಧರ ವಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತಿ ಡಾ| ಜಿ. ಪಿ. ಕುಸುಮಾ ಮತ್ತು ನೂಪುರ್ ಡ್ಯಾನ್ಸ್ ಅಕಾಡೆಮಿ ಘಾಟ್ಕೋಪರ್ ಇದರ ಸ್ಥಾಪಕಿ, ನೃತ್ಯ ನಿರ್ದೇಶಕಿ ಸಂಧ್ಯಾ ಜನಾರ್ಧನ ಸಾಲ್ಯಾನ್ ಅವರು ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷೆ ದಯಾವತಿ ಸುವರ್ಣ, ಜತೆ ಕಾರ್ಯದರ್ಶಿ ಪ್ರೀತಿ ಶ್ರೀಯಾನ್ ಅವರು ಭಾಗವಹಿಸಲಿದ್ದಾರೆ.

​ಈ ಸಂದರ್ಭದಲ್ಲಿ ಸಂಘದ ಹಿರಿಯ ಸಕ್ರಿಯ ಸದಸ್ಯೆ ರಜನಿ ದಯಾನಂದ ಕುಂದರ್ ಅವರನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೂಪುರ್ ಡ್ಯಾನ್ಸ್ ಅಕಾಡೆಮಿ ಘಾಟ್ಕೋಪರ್ ತಂಡದವರಿಂದ ನೃತ್ಯ ವೈವಿಧ್ಯ, ಬಳಿಕ ಮಹಿಳೆಯರಿಗಾಗಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಂತರ ಸಂಘದ ಮಹಿಳಾ ಸದಸ್ಯರಿಂದ ಜಗದೀಶ್ ಶೆಟ್ಟಿ ಕೆಂಚನಕೆರೆ ರಚಿಸಿ, ನಿರ್ದೇಶಿಸಿರುವ ‘ಸಂಸಾರದ ಸಮ್-ಸಾರ’ ತುಳು ಕಿರು ನಾಟಕ ಪ್ರದರ್ಶನಗೊಳ್ಳಲಿದೆ.

​ಸಂಘದ ಸದಸ್ಯ ಬಾಂಧವರು, ಸಮಾಜ ಬಾಂಧವರು ಹಾಗೂ ಪರಿಸರದ ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಉಪಾಧ್ಯಕ್ಷ ದಯಾನಂದ ಕುಂದರ್, ಕಾರ್ಯದರ್ಶಿ ಶೇಖರ್ ಕರ್ಕೇರ, ಕೋಶಾಧಿಕಾರಿ ವಿಶ್ವನಾಥ್ ಬಂಗೇರ, ಸಲಹೆಗಾರ ಮೋಹನ್ ಪುತ್ರನ್, ಸಂಯೋಜಕ ಪ್ರದೀಪ್ ಪುತ್ರನ್, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ನವೀನ್ ಪುತ್ರನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಾ ಎಸ್. ನಾಯ್ಕ, ಉಪಕಾರ್ಯಾಧ್ಯಕ್ಷೆ ಪಲ್ಲವಿ ಪುತ್ರನ್, ಸಲಹೆಗಾರ್ತಿ ಮೋಹಿನಿ ಮಲ್ಪೆ, ಟ್ರಸ್ಟಿಗಳು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ನ. 19 ರಂದು ಶ್ಲೋಕಾ ಸಂತೋಷ್ ಶೆಟ್ಟಿ  ಪನ್ವೆಲ್ ಯವರಿಂದ ಭರತನಾಟ್ಯ ಆರಂಗೇಟ್ರಂ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಕೋಟೆ, ನಾಲಾಸೋಪಾರ : ಫೆ. 1ರಿಂದ 81ನೇ ವಾರ್ಷಿಕ ಶನಿಮಹಾ ಪೂಜೆ ಮತ್ತು ಜಾತ್ರಾ ಮಹೋತ್ಸವ

Mumbai News Desk

ಡಿ. 19ರಂದು ದಹಿಸರ್‌ನಲ್ಲಿ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಅಕ್ಟೋಬರ್ 13ರಂದು ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ ಮೂರನೇ ವರ್ಷದ “ದುಬೈ ಗಡಿನಾಡ ಉತ್ಸವ”

Mumbai News Desk

ವಿದ್ಯಾವಿಹಾರ್ ದೇವಸ್ಥಾನದಲ್ಲಿ ನಾಳೆ (ಮಾರ್ಚ್ 15) ‘ಶ್ರೀ ರಾಮ ವನಗಮನ’ ತಾಳಮದ್ದಳೆ: ಇಬ್ಬರು ಹಿರಿಯ ಕಲಾವಿದರಿಗೆ ಸನ್ಮಾನ

Mumbai News Desk

ಸೆ 1 ರಂದು ಶ್ರೀಕೃಷ್ಣ ವಿಠಲ ಪ್ರತಿಷ್ಠಾನ, ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಸಾಂಸ್ಕೃತಿಕ ವೈಭವ .

Mumbai News Desk