July 23, 2026
Mumbai News Kannada
ಮುಂಬಯಿ

‘ಶ್ರೀ ರಾಮ ಕಥಾ ಹೃದಯಂ‌’ ಸರಣಿ ತಾಳಮದ್ದಳೆಯ ನಾಲ್ಕನೇ ಪ್ರಸ್ತುತಿ







ಯಕ್ಷಗಾನದ ಮೂಲಕ ಭಾರತೀಯ ಪರಂಪರೆಯನ್ನು ಮಾತ್ರ ಕಾಣಲು ಸಾಧ್ಯ: ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್

ಚಿತ್ರ ವರದಿ: ದಿನೇಶ್ ಕುಲಾಲ್

ಮುಂಬಯಿ, ಮಾ. 31: ರಾಮಾಭಿವಂದ್ಯಾ ಯಕ್ಷ ಸೇವಾ ಬಳಗ ಮತ್ತು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ ಸರಣಿ ತಾಳಮದ್ದಲೆಯ 4ನೇ ಕಂತು ‘ಭರತಾಗಮನ’ ಎಂಬ ಕಥಾಭಾಗವು ಮಾರ್ಚ್ 26ರ ರಾಮನವಮಿಯಂದು ವಿದ್ಯಾ ವಿಹಾರ್‌ನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

​ತಾಳಮದ್ದಲೆ ಕಾರ್ಯಕ್ರಮದ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್, ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ, ಮುಖ್ಯ ಅತಿಥಿಯಾಗಿ ಬಂಟರ ಸಂಘದ ಕುರ್ಲಾ-ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಭೂಮಿಕಾ ಶೆಟ್ಟಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಠಾಣೆ ಪ್ರಮುಖರಾದ ಪೊಲ್ಯ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.

​ಈ ಸಂದರ್ಭದಲ್ಲಿ ಮುಂಬೈ ನಗರದ ಮಹಿಳಾ ಭಾಗವತೆ ಜಯಲಕ್ಷ್ಮಿ ರಘು ದೇವಾಡಿಗ ಮತ್ತು ಯಕ್ಷಗಾನ ಕಲಾವಿದ ಹಾಗೂ ಸಂಘಟಕ ರಾಘವೇಂದ್ರ ಮೊಗವೀರ ಬಗ್ವಾಡಿ ಅವರನ್ನು ಸನ್ಮಾನಿಸಲಾಯಿತು.

​ಇಬ್ಬರು ಕಲಾವಿದರನ್ನು ಸನ್ಮಾನಿಸಿ ಆಶೀರ್ವಚನ ನೀಡಿದ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ಟರು, “ಮುಂಬೈ ಮಹಾನಗರದ ಇಬ್ಬರು ಕಲಾವಿದರನ್ನು ಗೌರವಿಸಿರುವುದು ಸೀತಾರಾಮರನ್ನು ಪೂಜಿಸಿದಷ್ಟೇ ಆನಂದ ನೀಡುತ್ತಿದೆ. ಪತಿ-ಪತ್ನಿ ಸಮೇತರಾಗಿ ಗೌರವ ಸ್ವೀಕರಿಸಿದ ಭಾಗವತೆ ಜಯಲಕ್ಷ್ಮಿ ರಘು ದೇವಾಡಿಗ ಹಾಗೂ ಕಲಾವಿದ ರಾಘವೇಂದ್ರ ಮೊಗವೀರ ಬಗ್ವಾಡಿ ಅವರ ಸೇವೆ ಶ್ಲಾಘನೀಯ. ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಮುಂದಿನ ಜನಾಂಗದ ಭದ್ರ ಬುನಾದಿಯಾದ ಇಂದಿನ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಬೀಜ ಬಿತ್ತಲು ಸಹಕಾರಿಯಾಗಿದೆ,” ಎಂದರು.

​ಮುಂದುವರಿದು ಮಾತನಾಡಿದ ಅವರು, “ರಾಮಾಯಣ ಮಹಾಕಾವ್ಯವು ಮನಸ್ಸಿಗೆ ಶಾಂತಿ ನೀಡುವುದರೊಂದಿಗೆ, ಇಂದಿನ ‘ಭರತಾಗಮನ’ ಪ್ರಸಂಗವು ಅಣ್ಣ-ತಮ್ಮಂದಿರ ಭ್ರಾತೃ ಪ್ರೇಮ ಹೇಗಿರಬೇಕು ಎಂಬ ಸಂದೇಶ ನೀಡುತ್ತದೆ. ಅಣ್ಣನೊಂದಿಗೆ ಸದಾ ನಿಲ್ಲುವ ತಮ್ಮಂದಿರು, ತಮ್ಮಂದಿರನ್ನು ಅರ್ಥೈಸಿ ನಡೆಸುವ ಜೇಷ್ಠ ಅಣ್ಣ—ಹೀಗೆ ತಾಯಿ ತಪ್ಪಿದರೂ ಮಗ ತಪ್ಪಬಾರದು ಎನ್ನುವ ಜೀವನ ಮೌಲ್ಯಗಳನ್ನು ಈ ಪ್ರಸಂಗ ಸಾರುತ್ತದೆ. ಇಂತಹ ಮೌಲ್ಯಗಳನ್ನು ನಾವು ಭಾರತೀಯ ಪರಂಪರೆಯಲ್ಲಿ ಮಾತ್ರ ಕಾಣಲು ಸಾಧ್ಯ,” ಎಂದು ತಿಳಿಸಿದರು.

​ಅತಿಥಿ ಭೂಮಿಕಾ ಶೆಟ್ಟಿ ಮಾತನಾಡಿ, “ಇದೊಂದು ಅಪೂರ್ವ ಕಾರ್ಯಕ್ರಮ. ನಮ್ಮ ಸನಾತನ ಪರಂಪರೆಯಲ್ಲಿ ಇತಿಹಾಸ ಮತ್ತು ಪುರಾಣವನ್ನೊಳಗೊಂಡ ರಾಮಾಯಣವು ಜಗತ್ತಿಗೆ ಮಾದರಿ. ಪ್ರಪಂಚದಲ್ಲಿ ಪ್ರೀತಿ-ಪ್ರೇಮದ ಸಂಕೇತ ಎಂದರೆ ಅದು ತಾಜ್ ಮಹಲ್ ಅಲ್ಲ, ಬದಲಾಗಿ ‘ರಾಮ ಸೇತುವೆ’ ಆಗಬೇಕಿತ್ತು,” ಎಂದು ಅಭಿಪ್ರಾಯಪಟ್ಟರು.

​ಇನ್ನೋರ್ವ ಅತಿಥಿ ಪೊಲ್ಯ ಉಮೇಶ್ ಶೆಟ್ಟಿ ಮಾತನಾಡಿ, “ಹಿಂದೆ ವಾಸುದೇವ ಮಾರ್ನಾಡ್ ಅವರು ಆಹ್ವಾನ ನೀಡಿದ್ದರೂ ಅನಿವಾರ್ಯ ಕಾರಣಗಳಿಂದ ಬರಲಾಗಿರಲಿಲ್ಲ. ಇಂದು ತಾಳಮದ್ದಲೆ ನೋಡಲೆಂದೇ ಬಂದಿರುವೆ. ಇಲ್ಲಿ ನೀಡಿದ ಗೌರವಕ್ಕೆ ನಾನು ಚಿರಋಣಿ. ಈ ಸರಣಿ ತಾಳಮದ್ದಲೆಯ ಸಮಾರೋಪ ಸಮಾರಂಭವನ್ನು ನನ್ನ ಸಂಪೂರ್ಣ ಸಹಕಾರದೊಂದಿಗೆ ಅದ್ಧೂರಿಯಾಗಿ ನಡೆಸೋಣ,” ಎಂದು ಹಾರೈಸಿದರು.

​ಕಾರ್ಯಕ್ರಮವನ್ನು ಸಂಯೋಜಕರಾದ ವಾಸುದೇವ ಮಾರ್ನಾಡ್ ನಿರೂಪಿಸಿದರು. ಕನ್ನಡ ಭವನದ ಪ್ರಾಂಶುಪಾಲರಾದ ಅಮೃತಾ ಶೆಟ್ಟಿ ಸ್ವಾಗತಿಸಿ, ಸಂಯೋಜಕ ಸುರೇಶ್ ಶೆಟ್ಟಿ ನಂದ್ರೊಳ್ಳಿ ಸನ್ಮಾನಿತರನ್ನು ಪರಿಚಯಿಸಿದರು. ಸಿ.ಎ. ರಾಜಶ್ರೀ ಜೆ. ಶೆಟ್ಟಿ ವಂದನಾರ್ಪಣೆ ಮಾಡಿದರು.

​ಸಭಾ ಕಾರ್ಯಕ್ರಮದ ನಂತರ ತಾಳಮದ್ದಲೆ ಮುಂದುವರಿಯಿತು.

  • ಭಾಗವತಿಕೆ: ಜಯಲಕ್ಷ್ಮಿ ರಘು ದೇವಾಡಿಗ.
  • ಹಿಮ್ಮೇಳ: ಪ್ರವೀಣ್ ಶೆಟ್ಟಿ ಕಟೀಲು (ಚೆಂಡೆ-ಮದ್ದಲೆ), ಹರೀಶ್ ನಾರಾಯಣ ಸಾಲ್ಯಾನ್, ಪ್ರಥಮ್ ಶೆಟ್ಟಿ.
  • ಅರ್ಥಧಾರಿಗಳು: ವಾಸುದೇವ ಮಾರ್ನಾಡ್, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಟಿ.ಆರ್. ಶೆಟ್ಟಿ, ನಾರಾಯಣ ಕುಂಬಳೆ, ರಾಘವೇಂದ್ರ ಬಗ್ವಾಡಿ, ಅಮೃತಾ ಶೆಟ್ಟಿ (ಕೌಸಲ್ಯೆ), ಸಿ.ಎ. ರಾಜಶ್ರೀ ಶೆಟ್ಟಿ ಮತ್ತು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ.

​ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಯಕ್ಷಗಾನ ಅಭಿಮಾನಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.



Related posts

ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗೆ ಚುನಾವಣಾ ದಿನಾಂಕ ಪ್ರಕಟ : ಜನವರಿ 15ರಂದು ಮತದಾನ, ಜ. 16ಕ್ಕೆ ಫಲಿತಾಂಶ

Mumbai News Desk

ಬಂಟರ ಸಂಘ ಮುಂಬಯಿ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,   ಆರ್ಥಿಕ ನೆರವು ವಿತರಣೆ,

Mumbai News Desk

ಬಿಲ್ಲವರ ಅಸೋಸಿಯೇಷನಿನ ಭಾಯಂದರ್ ಸ್ಥಳೀಯ ಕಚೇರಿಯ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್ : ‘ಬಂಟ ಕೂಟ-2026’ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk