September 6, 2026
Mumbai News Kannada
ಮುಂಬಯಿ

​ಮುಂಬೈನಲ್ಲಿ ಭಕ್ತಿಪೂರ್ವಕವಾಗಿ ನಡೆದ ‘ಶುಭ ಶುಕ್ರವಾರ’: ಸಾಂತಾಕ್ರೂಜ್‌ನಲ್ಲಿ ಗಮನಸೆಳೆದ ‘ಶಿಲುಬೆಯ ನೇರ ಹಾದಿ’ ನಡಿಗೆ





ಮುಂಬೈನಾದ್ಯಂತ ಕ್ರಿಶ್ಚಿಯನ್ನರು ಪ್ರಾರ್ಥನೆಗಳು, ಮೆರವಣಿಗೆಗಳು ಮತ್ತು ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆಯ ನೇರ ಪ್ರದರ್ಶನಗಳೊಂದಿಗೆ ಶುಭ ಶುಕ್ರವಾರವನ್ನು ಆಚರಿಸಿದರು.
ಸಾಂತಾಕ್ರೂಜ್ ಪಶ್ಚಿಮದ ಸೆಕ್ರೇಡ್ ಹಾರ್ಟ್ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಯಿತು.


ಇಲ್ಲಿ ಬೆಳ್ಳಿಗ್ಗೆ 10ರಿಂದ ಸಂಜೆ 4ಗಂಟೆ ತನಕ “ಶಿಲುಬೆಯ ನೇರ ನಡಿಗೆ ಕೇಂದ್ರಗಳು” ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನು ಬ್ರದರ್ ಜೋ ಡಯಾಸ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು,
ಕ್ರಿಸ್ಟಿ ಸೇವಕ್ ಫೆಡರೇಶನ್ (CSF) ತನ್ನ 37 ನೇ ವಾರ್ಷಿಕ “ಲೈವ್ ವೇ ಆಫ್ ದಿ ಕ್ರಾಸ್” ನಡಿಗೆ ತೀರ್ಥಯಾತ್ರೆಯನ್ನು ಬೆಳಿಗ್ಗೆ 9:30 ಕ್ಕೆ ಸಾಂತಾಕ್ರೂಜ್ (ಪಶ್ಚಿಮ) ದ ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಪ್ರಾರಂಭಿಸಿತು. “ಟಾಕಿಂಗ್ ವಿತ್ ಜೀಸಸ್” ಎಂಬ ಶೀರ್ಷಿಕೆಯ ಲೆಂಟನ್ ಸಂಗೀತ ಪ್ರತಿಬಿಂಬವಾಗಿ ಪ್ರಸ್ತುತಪಡಿಸಲಾದ ಮೆರವಣಿಗೆ, ಸಾಂತಾಕ್ರೂಜ್, ವಕೋಲಾ ಮತ್ತು ಕಲಿನಾ ಮೂಲಕ ಸಾಗಿತು.

ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ’ (ವೇ ಆಫ್ ದಿ ಕ್ರಾಸ್) ಪ್ರಮುಖ ಕಾರ್ಯಕ್ರಮವಾಗಿತ್ತು.
ಬಾಂದ್ರ, ಸಾಂತಾಕ್ರೂಜ್, ವಕೋಲ, ಕಲೀನ ಪರಿಸರದ ಕ್ರೈಸ್ತ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



Related posts

ಪ್ರಭಾತ್ ಕಾಲೋನಿ ಪರಿಸರದಲ್ಲಿ ಜೂನ್ 5ರಂದು ವೃಕ್ಷಾರೋಪಣ ಕಾರ್ಯಕ್ರಮ

Mumbai News Desk

ಡೊಂಬಿವಲಿ: ಶ್ರೀ ಜೈ ಭವಾನಿ ಶನೀಶ್ವರ ಮಂದಿರದಲ್ಲಿ ಶನಿ ಮಹಾಪೂಜಾ ಮಹೋತ್ಸವ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು-ಮುಂಬಯಿ: 18ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಮುಂಬೈನಲ್ಲಿ ಈದ್ -ಎ -ಮಿಲಾದ್ ರಜೆಯನ್ನು ಸೆಪ್ಟಂಬರ್ 8ಕ್ಕೆ ಬದಲಾಯಿಸಿದ ಮಹಾರಾಷ್ಟ್ರ ಸರಕಾರ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ ಕೋಟ್ಯಾನ್ ಆಯ್ಕೆ.

Mumbai News Desk

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk