September 6, 2026
Mumbai News Kannada
ಸುದ್ದಿ

ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯ ಉಪಾಧ್ಯಕ್ಷರಾಗಿ ಜೀವನ್ ಶೆಟ್ಟಿ ಮುಲ್ಕಿ ಆಯ್ಕೆ






ಮುಲ್ಕಿ: ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯ 2026–2028ರ ಅವಧಿಯ ಚುನಾವಣೆಯು ಇತ್ತೀಚೆಗೆ ನೆರವೇರಿದ್ದು, ರಾಜ್ಯದ ವಿವಿಧ ಹುದ್ದೆಗಳಿಗೆ ಏಕಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.


Karnataka Professional (KPCE-SC) ಸಂಸ್ಥೆಯು ರಾಜ್ಯದಲ್ಲಿ ಸಿವಿಲ್ ಇಂಜಿನಿಯರ್‌ಗಳ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾರ್ಗದರ್ಶನ ನೀಡುವ ಪ್ರಮುಖ ವೇದಿಕೆಯಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶಗಳು ಹೀಗಿವೆ:



  • ​ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವುದು.

  • ​ಇಂಜಿನಿಯರ್‌ಗಳ ನೋಂದಣಿ ಮತ್ತು ಜವಾಬ್ದಾರಿಯನ್ನು ವ್ಯವಸ್ಥಿತಗೊಳಿಸುವುದು.

  • ​ನೈತಿಕ ಮೌಲ್ಯಗಳು ಮತ್ತು ಗುಣಮಟ್ಟದ ನಿರ್ಮಾಣವನ್ನು ಉತ್ತೇಜಿಸುವುದು.

  • ​ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಇಂಜಿನಿಯರ್‌ಗಳ ನಡುವೆ ಸಮನ್ವಯ ಸಾಧಿಸುವುದು.

  • ​ದೇಶದಲ್ಲಿ ‘ಸಿವಿಲ್ ಇಂಜಿನಿಯರಿಂಗ್ ಕೌನ್ಸಿಲ್’ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

  • ​ದೇಶದ ಸಿವಿಲ್ ಪಠ್ಯವಿಷಯದಲ್ಲಿ ಪರಿವರ್ತನೆ ತರಲು ಪ್ರಯತ್ನಿಸುವುದು.

  • ​BIS (Bureau of Indian Standards) ನೊಂದಿಗೆ ಸಮಾಲೋಚನೆ ನಡೆಸಿ NBC 2016 ಅನ್ನು ಬದಲಾಯಿಸದಂತೆ (Dilution) ಒತ್ತಾಯಿಸುವುದು.


​ಈ ಚುನಾವಣೆಯಲ್ಲಿ ಮುಲ್ಕಿಯ ‘ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್’ ಅಧ್ಯಕ್ಷರು ಹಾಗೂ ‘ಶಾರದಾ ಗ್ರೂಪ್’ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ Er. ಜೀವನ್ ಕೆ. ಶೆಟ್ಟಿ ಅವರು ಮೈಸೂರು ಕಂದಾಯ ವಿಭಾಗದ (Revenue Division) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


​ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆದಿದ್ದು, ಎಲ್ಲಾ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆದಿದೆ.




Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (19/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸಭೆ.

Mumbai News Desk

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ದೀಪಾ ಭಾಸ್ಕರ್ ಕಾಂಚನ್ ಗೆ  ಶೇ 85.67% ಅಂಕ 

Mumbai News Desk

ಕನ್ಯಾನ ಸದಾಶಿವ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ವಿವಾದಕ್ಕೆ ತೆರೆ:ಸಮಾಜದ ಉನ್ನತಿಗೆ, ಒಗ್ಗಟ್ಟಿನ ಬದ್ಧತೆಗೆ ನಿರ್ಧಾರ.

Mumbai News Desk

ಶ್ರದ್ಧಾಂಜಲಿ: ದಿನೇಶ್ ಆನಂದ್ ಹೆಗ್ಡೆ ಅವರ ನಿಧನ

Mumbai News Desk