29.9 C
Mumbai
August 12, 2026
Mumbai News Kannada
ಮುಂಬಯಿ

ನಾನಿಲ್ತಾರ್ ಅಭಿಮಾನಿ ಬಳಗ, ಮುಂಡ್ಕೂರು(ಮುಂಬಯಿ) ಸ್ನೇಹ ಸಮ್ಮಿಲನ.





ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ ವಿವಿಧ ರೀತಿಯಲ್ಲಿ ಸಹಕರಿಸಿದೆ. – ಜಯರಾಮ್ ಕುಲಾಲ್ ಮುಂಡ್ಕೂರು

ಮುಂಡ್ಕೂರು : ನಾನಿಲ್ತಾರ್ ಅಭಿಮಾನಿ ಬಳಗ, ಮುಂಡ್ಕೂರು ಮುಂಬೈ ಇವರ ಸಂಯೋಜನೆಯಲ್ಲಿ ಕುಲಾಲ ಸಂಘ ನಾನಿಲ್ತಾರ್ ಇವರ ಸಂಪೂರ್ಣ ಸಹಕಾರದೊಂದಿಗೆ ಕುಲಾಲ ಭವನ ನಾನಿಲ್ತಾರ್, ಮುಲ್ಲಡ್ಕ, ಮುಂಡ್ಕೂರು ಇಲ್ಲಿ ಶ್ರೀಮತಿ ರುಕ್ಮಿಣಿ ಯಶೋಧರ ಸಾಲ್ಯಾನ್ ವೇದಿಕೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮೇ 5 ರಂದು ವಿಜೃಂಭಣೆಯಿಂದ ನಡೆಯಿತು.

ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ಶ್ರೀ ರಾಮದಾಸ್ ಆಚಾರ್ಯ ಅವರು ನಾನಿಲ್ತಾರ್ ಅಭಿಮಾನಿ ಬಳಗ ನೀಡಿದ ಜನ್ ರೇಟರನ್ನು ದಿವ್ಯ ಹಸ್ತದಲ್ಲಿ ಹಸ್ತಾಂತರಿಸಿದರು. ಬಳಿಕ ಸಮಾಜದಲ್ಲಿ ಒಗ್ಗಟ್ಟಿನಿಂದ ಈ ಭವನದಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಅದರಿಂದ ಪಡೆದ ಆರ್ಥಿಕ ಸಹಕಾರ ಸಮಾಜದ ಜನರಿಗೆ ಉಪಯೋಗವಾಗಲಿ. ಮುಂಬೈ ನಗರದಲ್ಲಿ ಧಾರ್ಮಿಕ ಸೇವೆ ಮಾಡುವ ಅಭಿಮಾನಿ ಬಳಗದ ಎಲ್ಲರಿಗೂ ದೇವರು ಅನುಗ್ರಹಿಸಲಿ ಎಂದರು.

ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ಅವರು ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿ‌ ಮಾತನಾಡುತ್ತಾ ನಾನಿಲ್ತಾರ್ ಕುಲಾಲ ಸಂಘಕ್ಕೆ ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು ಮುಂಬೈ ಈಗಾಗಲೇ ಸಂಘದ ಅನೇಕ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸಿದ್ದು ಈ ವರ್ಷ ಜನ್ ರೇಟರ್ ನೀಡುವುದರ ಮೂಲಕ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದೀರಿ. ಇದು ಎಂದೆಂದಿಗೂ ಶಾಶ್ವತ ನೆನಪು. ನಿಮ್ಮ ಪ್ರೀತಿ ಅಭಿಮಾನಕ್ಕೆ ಮನ ತುಂಬಿದೆ ಎಂದು ನುಡಿದರು.

ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿದ ಬೋಳ, ಡಾನ್ ಬೋಸ್ಕೋ ಚರ್ಚ್ ನ ಧರ್ಮಗುರುಗಳಾದ ಫಾ. ಮಿಲ್ಟನ್ ಫೆರ್ನಾಂಡಿಸ್ ಶುಭ ಹಾರೈಸಿದರು. ವೇದಿಕೆಯಲ್ಲಿ ಮಯೂರ್ ಉಳ್ಳಾಲ್,ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಯಾನೆ ಮೂಲ್ಯರ ಕುಲಾಲರ ಸಂಘ, ಮಂಗಳೂರು, ಪದ್ಮನಾಭ ಬಂಗೇರ, ಹೋಟೆಲ್ ಉದ್ಯಮಿ, ಮುಂಬೈ, ಪ್ರೇಮಾನಂದ ಕುಲಾಲ್, ಕೋಡಿಕಲ್, ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ.), ಕುಲಶೇಖರ, ಸತೀಶ್ ಪೂಜಾರಿ, ಮಾಜಿ ಅಧ್ಯಕ್ಷರು, ಬೋಳ ಗ್ರಾಮ ಪಂಚಾಯಿತಿ, ಕುಶ ಆರ್ ಮೂಲ್ಯ, ಇನ್ನ ಕಾರ್ಯಾಧ್ಯಕ್ಷರು, ಕುಂಭ ನಿಧಿ ಕೋ- ಆಪರೇಟಿವ್ ಸೊಸೈಟಿ, ಬೆಳ್ಮಣ್, ದಿವ್ಯರಾಜ್ ಕುಲಾಲ್, ಬಿ. ಸಿ ರೋಡ್, ಸ್ಥಾಪಕರು ಮತ್ತು ವ್ಯವಸ್ಥಾಪಕ ಪಾಲುದಾರರು, ವಿಜ್ಞಾನ ವಲಯ ಲ್ಯಾಬೋರಿಟೀಸ್ ಮಂಗಳೂರು- ಬೆಂಗಳೂರು- ಮಸ್ಕತ್, ಜಗದೀಶ್ ಕುಲಾಲ್, ಪಾಲುದಾರರು, ಸಮ್ಯಮ ಟೆಕ್ನೋಲಜಿ ಮಂಗಳೂರು, ಬಿ. ದಿನೇಶ್ ಕುಲಾಲ್, ಮುಂಬೈ, ಟ್ರಸ್ಟೀ, ಕುಲಾಲ ಪ್ರತಿಷ್ಠಾನ, ಮಂಗಳೂರು, ರುಕ್ಮಿಣಿ ಯಶೋಧರ ಸಾಲ್ಯಾನ್, ಸಮಾಜ ಸೇವಕಿ, ಮುಂಬೈ, ಸುಕುಮಾರ ಸಾಲ್ಯಾನ್, ಕಾರ್ಯಾಧ್ಯಕ್ಷರು, ಕುಲಾಲ ಸಂಘ ಮುಂಬೈ, ಸದಸ್ಯತನ ನೋಂದಣಿ ಸಮಿತಿ, ಹಿರಿಯರಾದ ಬೊಗ್ಗು ಮೂಲ್ಯ ಬೇಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾನಿಲ್ತಾರ್ ಅಭಿಮಾನಿ ಬಳಗದ ಮುಂಡ್ಕೂರು ಮುಂಬೈ ಇದರ ಸಂಚಾಲಕ ಕೃಷ್ಣ ಎಸ್ ಮೂಲ್ಯ ನಾಲಾಸೋಪಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕುಲಾಲ ಸಮಾಜದ ಹಿರಿಯರಾದ ಮೀನಾ ಮೂಲ್ಯ ಮಡಿಕೆ ಮನೆ, ವಾರಿಜ ಮೂಲ್ಯ, ಹೊಸ ಹಿತ್ಲು, ಶ್ರೀನಾಥ್ ಸಾಲ್ಯಾನ್ , ಹರೀಶ್ ಮೂಲ್ಯ ಮತ್ತು ಸರೋಜಾ ಮೂಲ್ಯ ಮುಂಬೈ, ಮಂಜಪ್ಪ ಮೂಲ್ಯ, ಏಳಿಂಜೆ( ನಿವೃತ್ತ ಉಪಾಧ್ಯಾಯರು) ಇವರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಅರುಣಾ ಕುಲಾಲ್, ಉಳೆಪಾಡಿ ಸ್ವಾಗತಿಸಿ, ನಿರೂಪಿಸಿದರು. ಸುಧಾಕರ್ ಮೂಲ್ಯ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಹರ್ಷಿತಾ ಕುಲಾಲ್ ನಿರೂಪಿಸಿದರು . ಅತಿಥಿ ಗಣ್ಯರನ್ನು ದಿನೇಶ್ ಕುಲಾಲ್, ಬೆಳ್ಮಣ್ . ದಿನೇಶ್ ಮೂಲ್ಯ ಅಂಧೇರಿ. ದಿನೇಶ್ ಬಂಗೇರ, ಕೇಶವ ಬಂಜನ್, ರೋಹಿದಾಸ್ ಕೆ ಬಂಜನ್, ಲೋಕೇಶ್ ಸಾಲ್ಯಾನ್. ನಾರಾಯಣ ಬಂಜನ್. ದೇವೇಂದ್ರ ಸಾಲಿಯಾನ್. ಸರೋಜಾ ಎ ಮೂಲ್ಯ. ನಳಿನಿ ಬಂಜನ್. ಜ್ಯೋತಿ ಸಾಲಿಯಾನ್. ದಿವ್ಯ ಸಾಲ್ಯಾನ್. ಶೋಭಾ ಬಂಜನ್. ಕವಿತಾ ಸಾಲ್ಯಾನ್, ನಾನಿಲ್ತಾರ್ ಕುಲಾಲ ಸಂಘದ ಕಾರ್ಯದರ್ಶಿ ದಿನೇಶ್ ಕುಲಾಲ್ ಇವರು ಗೌರವಿಸಿದರು.ಸನ್ಮಾನಿತರ ಪರಿಚಯವನ್ನು ಶಿಕ್ಷಕಿ ಪುಷ್ಪ ಕುಮಾರಿ, ರಕ್ಷಿತ ಕುಲಾಲ್, ಸರೋಜಾ ಮೂಲ್ಯ, ನಳಿನಿ ಬಂಜನ್, ಖುಷಿ ಮೂಲ್ಯಪರಿಚಯಿಸಿದರು.

ಪ್ರಾರಂಭದಲ್ಲಿ ದುರ್ಗಾ ಭಜನಾ ಮಂಡಳಿ, ನಾನಿಲ್ತಾರ್, ವಿಠೋಬಾ ಭಜನಾ ಮಂಡಳಿ, ಶಂಕರಪುರ ಇವರಿಂದ ಭಜನೆ ನಡೆಯಿತು , ಬಳಿಕ, ಕುಲಾಲ ಸಂಘ ನಾನಿಲ್ತಾರ್ ಮಹಿಳಾ ಸದಸ್ಯರಿಂದ ಹಾಗೂ ಯುವ ವೇದಿಕೆಯ ಸದಸ್ಯರು, ಅಭಿಮಾನಿ ಬಳಗದ ಸದಸ್ಯರಿಂದ ನೃತ್ಯ ವೈಭವ ನಡೆಯಿತು. ರಾತ್ರಿ ಶರತ್ ಶೆಟ್ಟಿ ಮುಂಡ್ಕೂರು ಸಾರಥ್ಯದ ‘ ‘ವಿಜಯ ಕಲಾವಿದರು’ ಕಿನ್ನಿಗೋಳಿ ಇವರ ಸೂಪರ್ ಹಿಟ್ ತುಳು ನಾಟಕ “ಬೈರಾಸ್ ಭಾಸ್ಕರೆ?” ಪ್ರದರ್ಶನಗೊಂಡಿತು.

—- ಸ್ನೇಹ ಸಮ್ಮಿಲನದ ಮೂಲಕ ಸಮಾಜ ಬಲಿಷ್ಠಗೊಂಡಿದೆ: ಹರೀಶ್ ಡಿ ಮೂಲ್ಯ .ಕಾರ್ಯಕ್ರಮದ ಉದ್ಘಾಟಕರಾದ ಅಭಿಮಾನಿ ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು ಮುಂಬೈ ಇದರ ಅಧ್ಯಕ್ಷ ಹರೀಶ್ ಡಿ ಮೂಲ್ಯ ಅಂಧೇರಿ ಮಾತನಾಡುತ್ತಾ 17 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಗಳನ್ನು ಮುಂಬೈ ನಗರದಲ್ಲಿ ನಡೆಸುತ್ತಾ ಬಂದಿರುವ ಅಭಿಮಾನಿ ಬಳಗ ನಾನಿಲ್ತಾರ್ ಕುಲಾಲ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ನಿರಂತರ ಸಹಕಾರ ನೀಡುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕೂಡ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತೇವೆ ಎಂದರು.



Related posts

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಅಜ್ದೇಗಾಂವ್, ಡೊಂಬಿವಲಿ – 35 ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ.

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk

ಕುಮಾರ ಕ್ಷತ್ರಿಯ ಸಂಘ ಮುಂಬಯಿ 60ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ ,

Mumbai News Desk

ಮುಂಬೈ : ವಿಕ್ರೋಲಿಯ ಪಾರ್ಕ್ ಸೈಟ್‌ನ ವರ್ಷಾ ನಗರದ ಜನಕಲ್ಯಾಣ್ ಸೊಸೈಟಿಯಲ್ಲಿ ಭೂಕುಸಿತ, ಇಬ್ಬರು ಸಾವು

Mumbai News Desk

ಕಲೆಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ -ವಾರ್ಷಿಕ ಅಯ್ಯಪ್ಪ ಮಹಾಪೂಜೆ ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk