July 19, 2026
Mumbai News Kannada
ಪ್ರಕಟಣೆ

ಜಗಜ್ಯೋತಿ ಕಲಾವೃಂದದಿಂದ ಮಹಿಳೆಯರಿಗಾಗಿ ಅಖಿಲ ಭಾರತ ಮಟ್ಟದ ಕಥಾ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆ ಆಹ್ವಾನ








​ಮುಂಬೈ: ಮುಂಬೈನ ಪ್ರಮುಖ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ‘ಜಗಜ್ಯೋತಿ ಕಲಾವೃಂದ (ರಿ.)’ ವತಿಯಿಂದ ಮುಂಬೈನ ಕನ್ನಡ ಸಾಹಿತ್ಯ ಲೋಕದಲ್ಲಿ ಸದಾ ಕ್ರಿಯಾಶೀಲರಾಗಿದ್ದ ದಿವಂಗತ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಅವರ ಸ್ಮರಣಾರ್ಥ ಕಳೆದ 28 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಥಾ ಪ್ರಶಸ್ತಿ ಮತ್ತು ಕವಿತಾ ಪ್ರಶಸ್ತಿ ಸ್ಪರ್ಧೆಯನ್ನು 2026ನೇ ಸಾಲಿಗೂ ಆಯೋಜಿಸಲಾಗಿದೆ. ಅಖಿಲ ಭಾರತ ಮಟ್ಟದ ಈ ಸ್ಪರ್ಧೆಯು ದೇಶದಾದ್ಯಂತವಿರುವ ಸಮಸ್ತ ಕನ್ನಡ ಮಹಿಳೆಯರಿಗಾಗಿ ಮಾತ್ರ ಮುಕ್ತವಾಗಿದ್ದು, ಅರ್ಹ ಲೇಖಕಿಯರಿಂದ ಪ್ರವೇಶಿಕೆಗಳನ್ನು ಆಹ್ವಾನಿಸಲಾಗಿದೆ.
​ಈ ಸ್ಪರ್ಧೆಯು ಕಥಾ ಪ್ರಶಸ್ತಿ ಹಾಗೂ ಕವಿತಾ ಪ್ರಶಸ್ತಿ ಎಂಬ ಎರಡು ವಿಭಾಗಗಳನ್ನು ಒಳಗೊಂಡಿದ್ದು, ಪ್ರತ್ಯೇಕವಾಗಿ ತಲಾ 10,000/- ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಪದಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
​ಸ್ಪರ್ಧೆಯ ಮುಖ್ಯ ನಿಯಮಗಳು:
​ಸ್ಪರ್ಧೆಯಲ್ಲಿ ಭಾಗವಹಿಸುವವರು ಕಥಾ ಪ್ರಶಸ್ತಿಗೆ ಒಂದು ಸ್ವರಚಿತ ಕಥಾ ಸಂಕಲನ ಅಥವಾ ಕವಿತಾ ಪ್ರಶಸ್ತಿಗೆ ಒಂದು ಕವನ ಸಂಕಲನವನ್ನು ಕಳುಹಿಸಬೇಕು. ಒಬ್ಬರೇ ಎರಡೂ ಸ್ಪರ್ಧೆಗಳಿಗೂ ಪ್ರವೇಶಿಕೆ ಕಳುಹಿಸಬಹುದು.
​ಕೃತಿಗಳು ಪ್ರಕಟಣೆಗೆ ಸಿದ್ಧವಾದ ಹಸ್ತಪ್ರತಿಯ ರೂಪದಲ್ಲಿರಬೇಕು. ಕಾರ್ಬನ್ ಪ್ರತಿ, ಜೆರಾಕ್ಸ್ ಹಾಗೂ ಈಗಾಗಲೇ ಪ್ರಕಟಗೊಂಡ ಹಳೆಯ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಕಥೆ/ಕವಿತೆಗಳನ್ನು ಹಾಳೆಯ ಒಂದೇ ಮಗ್ಗಲಿನಲ್ಲಿ ಸ್ಪಷ್ಟವಾಗಿ ಬರೆದಿರಬೇಕು ಅಥವಾ ಟೈಪ್ ಮಾಡಿರಬೇಕು.
​ಕಥಾ ಪ್ರಶಸ್ತಿಗೆ ಕಳುಹಿಸುವ ಹಸ್ತಪ್ರತಿಯು ಫುಲ್‌ಸ್ಕೇಪ್ ಹಾಳೆಯಲ್ಲಿ 100 ರಿಂದ 130 ಪುಟಗಳ ಮಿತಿಯಲ್ಲಿರಬೇಕು. ಕವನ ಸಂಕಲನದಲ್ಲಿ ಕನಿಷ್ಠ 30 ಕವಿತೆಗಳಿರಬೇಕು (ಖಂಡಕಾವ್ಯ, ಚುಟುಕು ಅಥವಾ ಹನಿಗವನಗಳನ್ನು ಪರಿಗಣಿಸಲಾಗುವುದಿಲ್ಲ).
​ಹಸ್ತಪ್ರತಿಯಲ್ಲಿ ಎಲ್ಲೂ ಲೇಖಕಿಯ ಹೆಸರು ನಮೂದಿಸಿರಬಾರದು. ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಹಸ್ತಪ್ರತಿಯ ಜೊತೆಗೆ ಪ್ರತ್ಯೇಕವಾಗಿ ಕಳುಹಿಸಬೇಕು. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಬಂದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.
​ಒಮ್ಮೆ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಅದೇ ವಿಭಾಗದ ಸ್ಪರ್ಧೆಗೆ ಮತ್ತೊಮ್ಮೆ ಭಾಗವಹಿಸುವಂತಿಲ್ಲ. ಸ್ಪರ್ಧೆಯ ಕೊನೆಯ ನಿರ್ಣಯ ಕೈಗೊಳ್ಳುವ ಹಕ್ಕು ಸಂಸ್ಥೆಗೆ ಕಾಯ್ದಿರಿಸಲಾಗಿದ್ದು, ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರಶಸ್ತಿ ವಿಜೇತರನ್ನು ದೂರವಾಣಿ ಅಥವಾ ಪತ್ರದ ಮೂಲಕ ಸಂಪರ್ಕಿಸಲಾಗುವುದು ಹಾಗೂ ಸಂಸ್ಥೆಯ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪಡೆದ ಕೃತಿಗಳನ್ನು ಮುದ್ರಿಸುವಾಗ ರಕ್ಷಾಪುಟದ ಮೇಲೆ ಹಾಗೂ ಪ್ರಥಮ ಒಳಪುಟದಲ್ಲಿ ‘ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ/ಕವಿತಾ ಪ್ರಶಸ್ತಿ ವಿಜೇತ ಕೃತಿ 2026’ ಎಂದು ಮುದ್ರಿಸತಕ್ಕದ್ದು.
​ಕೃತಿಗಳನ್ನು ಕಳುಹಿಸಬೇಕಾದ ವಿಳಾಸ ಮತ್ತು ಕೊನೆಯ ದಿನಾಂಕ:
ಸ್ಪರ್ಧೆಗೆ ಕೃತಿಗಳನ್ನು ಕಳುಹಿಸಲು 30.09.2026 ಕೊನೆಯ ದಿನಾಂಕವಾಗಿದೆ. ಹಸ್ತಪ್ರತಿಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಸ್ಪಷ್ಟವಾಗಿ ವಿಳಾಸ ಬರೆದು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
SUKUMAR N. SHETTY, C/o S. N. Shetty Associates, Ground Floor, Room No.5, Neelkanth Sagar CHS, Mahatma Phule Road, Opp. Jadhavwadi, Dombivli West – 421202.
Email: mail.sukumar@yahoo.in
​ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಸಂತೋಷ್ ಪಿ. ಶೆಟ್ಟಿ: 9892110826 / 9869824709, ವಸಂತ್ ಎನ್. ಸುವರ್ಣ: 9892833623. ಇಮೇಲ್: santoshpshetty@gmail.com. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಬ್ಲಾಗ್ www.jagajyothikalavrinda.blogspot.com ವೀಕ್ಷಿಸಬಹುದು.



Related posts

ಜೂನ್ 16 : ಮುಂಬೈ ಫೋರ್ಟ್‌ನ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರಿ ಸೇವಾ ಸಮಿತಿಯಿಂದ ಮೂರ್ತಿ ಪ್ರತಿಷ್ಠಾಪನಾ ದಿನ ಹಾಗೂ ಚೈತನ್ಯ ಬ್ರಹ್ಮ ಕಲಶೋತ್ಸವ

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ,ಫೆ. 15ರಂದು, 26ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಮಹಾಪೂಜೆ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಅಗಸ್ಟ್ 15 ರಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

Mumbai News Desk

ಸೆ.5 ರಂದು ಅಂಧೇರಿ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ತುಳು ಹರಿಕಥೆಯ ನಾದ ಲಹರಿ

Mumbai News Desk

ಡೊಂಬಿವಲಿಯಲ್ಲಿ ಜುಲೈ 19ರಂದು ‘ಚಕ್ರವ್ಯೂಹ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ

Mumbai News Desk

ಫೆ.23(ನಾಳೆ) ಕರ್ನಾಟಕ ಸಂಘ ಡೊಂಬಿವಲಿ:ಲಲಿತ ಕಲಾ ವಿಭಾಗ: ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ನಿಮಿತ್ತ ಭಜನೆ ಹಾಗೂ ಕುಣಿತ ಭಜನೆ ಸ್ಪರ್ದೆ.

Mumbai News Desk