
ಮುಂಬೈನ ಫೋರ್ಟ್ ಪ್ರದೇಶದ ಬೋರಾ ಬಜಾರ್ ಸ್ಟ್ರೀಟ್ನಲ್ಲಿರುವ ಶ್ರೀ ಶನಿಮಹಾತ್ಮ ತ್ರಿಭುವನೇಶ್ವರಿ ಸೇವಾ ಸಮಿತಿಯ (ರಿ) ವತಿಯಿಂದ ದೇವಸ್ಥಾನದ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನಾ ದಿನ ಹಾಗೂ ಚೈತನ್ಯ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಧಾರ್ಮಿಕ ಮಹೋತ್ಸವವು 2026ರ ಜೂನ್ 16ರ ಮಂಗಳವಾರದಂದು ಬೆಳಿಗ್ಗೆ 6.30 ರಿಂದ ರಾತ್ರಿ 7.30 ರವರೆಗೆ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ..
ಅಂದು ದೇವಸ್ಥಾನದಲ್ಲಿ ಗಣಹೋಮ, ನವಗ್ರಹ ಹೋಮ, ಪ್ರತಿಷ್ಠಾ ಕಲಶ ಪೂಜೆ, ಬ್ರಹ್ಮ ಕಲಶ ಪೂಜೆ, ಮೂರ್ತಿ ಶುದ್ಧೀಕರಣ ಪೂಜೆ ಮತ್ತು ಭಜನಾ ಕಾರ್ಯಕ್ರಮಗಳು ನೆರವೇರಲಿವೆ.
ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ ನಡೆಯಲಿದ್ದು, ತದನಂತರ ಭಕ್ತಾಧಿಗಳಿಗೆ ಮಹಾಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ 4.00 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ ಹಾಗೂ ಸಂಜೆ 6.00 ಗಂಟೆಗೆ ದೇವಿ ಆವೇಶ ಕಾರ್ಯಕ್ರಮಗಳು ನೆರವೇರಲಿವೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಗೊಂಡು, ಶ್ರೀ ತ್ರಿಭುವನೇಶ್ವರಿ ಮತ್ತು ಶ್ರೀ ಸಿದ್ದೇಶ್ವರಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು
ಸಮಿತಿಯ ಅಧ್ಯಕ್ಷರಾದ ಬಿ. ಕೂಸಪ್ಪ ಹಾಗೂ ವ್ಯವಸ್ಥಾಪಕ ಸಮಿತಿಯ ಸರ್ವ ಸದಸ್ಯರು ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾಧಿಗಳನ್ನು ಆಮಂತ್ರಿಸಿದ್ದಾರೆ.




